ಬ್ರೇಕಿಂಗ್ ನ್ಯೂಸ್
18-03-26 09:44 am HK News Staffer ಕರ್ನಾಟಕ
ಬೆಂಗಳೂರು, ಮಾ 18: ನಗರದ ಆರ್‌ಎಂವಿ ಎಕ್ಸ್‌ಟೆನ್ಶನ್ ಪ್ರದೇಶದ ವೈದ್ಯೆಯೊಬ್ಬರು ತಮ್ಮ ಬ್ಯಾಂಕ್ ಲಾಕರ್‌ನಿಂದ 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
57 ವರ್ಷದ ವೈದ್ಯೆ ನೀಡಿದ ದೂರಿನ ಪ್ರಕಾರ, ರಾಷ್ಟ್ರೀಯಕೃತ ಬ್ಯಾಂಕ್ ಶಾಖೆಯಲ್ಲಿ ಸೇವಿಂಗ್ಸ್ ಖಾತೆ ಮತ್ತು ಲಾಕರ್ ಹೊಂದಿದ್ದಾರೆ. ಮಗನ ಮದುವೆ ಹಿನ್ನೆಲೆ ಫೆಬ್ರವರಿ 27ರಂದು ಲಾಕರ್‌ನಿಂದ ಚಿನ್ನಾಭರಣವನ್ನು ತೆಗೆದಿದ್ದರು.
ಮದುವೆ ಕಾರ್ಯ ಮುಗಿದ ಮಾರ್ಚ್ 3ರಂದು ಬೆಳಿಗ್ಗೆ 11.15ರ ಸುಮಾರಿಗೆ ಮತ್ತೆ ಬ್ಯಾಂಕ್‌ಗೆ ತೆರಳಿ ಸುಮಾರು 150–160 ಗ್ರಾಂ ತೂಕದ ಚಿನ್ನಾಭರಣ, ಹಾರ, ಚೈನ್, ಜುಂಕಿ ಹಾಗೂ ಎರಡು ಬಳೆಗಳು ಸೇರಿದಂತೆ ಒಟ್ಟು ₹24 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಟ್ರಾನ್ಸರೆಂಟ್ ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಟ್ಟು ಲಾಕರ್‌ನಲ್ಲಿ ಭದ್ರಪಡಿಸಿದ್ದರು.
ಆದರೆ ಮಾರ್ಚ್ 12ರಂದು ಉಳಿದ ಆಭರಣಗಳನ್ನು ಇಡಲು ಮತ್ತೆ ಲಾಕರ್ ತೆರೆದಾಗ ಆ ಪ್ಲಾಸ್ಟಿಕ್ ಡಬ್ಬಿಯೇ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ, ಸಿಸಿಟಿವಿ ದೃಶ್ಯಾಗಳನ್ನ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ವೈದ್ಯೆ ಲಾಕರ್ ರೂಮ್‌ಗೆ ಜ್ಯುವೆಲ್ಲರಿ ಬಾಕ್ಸ್ ಹಾಗೂ ಬ್ರೌನ್ ಬ್ಯಾಗ್ ಹಿಡಿದು ಪ್ರವೇಶಿಸಿ, ಹೊರಬರುವಾಗ ಕೇವಲ ಬ್ಯಾಗ್ ಮಾತ್ರ ಹೊಂದಿರುವುದು ಗಮನಕ್ಕೆ ಬಂದಿದೆ.
ಬ್ಯಾಂಕ್ ಸಿಬ್ಬಂದಿಯಿಂದ ಸಮರ್ಪಕ ಉತ್ತರ ಸಿಗದ ಹಿನ್ನೆಲೆ, ವೈದ್ಯೆ ಸದಾಶಿವನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 10:27 am
HK News Staffer
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm