ಬ್ರೇಕಿಂಗ್ ನ್ಯೂಸ್
09-11-22 07:03 pm Mangalore Correspondent ಕ್ರೈಂ
ಮಂಗಳೂರು, ನ.9: 19 ವರ್ಷದ ಯುವಕನನ್ನು ಸಲಿಂಗಕಾಮಕ್ಕಾಗಿ ನಿರ್ಜನ ಪ್ರದೇಶದ ಗುಡ್ಡಕ್ಕೆ ಕೊಂಡೊಯ್ದು ಬಳಿಕ ಆತನನ್ನು ಪೆಟ್ರೋಲ್ ಸುರಿದು ಕೊಲೆಗೈದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಬಂಟ್ವಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೋಳಂತೂರು ನಿವಾಸಿ, ಆಟೋ ಚಾಲಕನಾಗಿದ್ದ ಅಬ್ದುಲ್ ರಹಿಮಾನ್ (54) ಬಂಧಿತ ಆರೋಪಿ. ಕೆಲವು ದಿನಗಳ ಹಿಂದೆ ಸುರಿಬೈಲು ನಿವಾಸಿ ಅಬ್ದುಲ್ ಸಮಾದ್ ಎಂಬ 19 ವರ್ಷದ ಯುವಕ ನಾಪತ್ತೆಯಾಗಿದ್ದ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಯುವಕ ಊರಿಗೆ ಬಂದಿದ್ದಾಗ ನಾಪತ್ತೆಯಾಗಿದ್ದರಿಂದ ವಿಟ್ಲ ಪೊಲೀಸರಿಗೆ ಹೆತ್ತವರು ದೂರು ನೀಡಿದ್ದರು.
ಈ ನಡುವೆ, ನ.7ರಂದು ಅಬ್ದುಲ್ ರಹಿಮಾನ್ ತನ್ನ ಆಟೋದಲ್ಲಿ ಪೆಟ್ರೋಲ್ ಇಲ್ಲ, ತುರ್ತಾಗಿ ಒಂದು ಕಡೆ ಹೋಗಲಿಕ್ಕಿದೆ ಎಂದು ಹೇಳಿ ತನ್ನ ಸಂಬಂಧಿಕ ಸಲೀಂ ಎಂಬಾತನಲ್ಲಿ ಹೇಳಿದ್ದ. ಇದರಂತೆ, ಸಲೀಂ ಜೊತೆಗೆ ಬೈಕಿನಲ್ಲಿ ಇರಾ ಪದವು ಕಡೆಗೆ ಹೋಗಿದ್ದು ಅಲ್ಲಿ ಬೈಕ್ ನಿಲ್ಲಿಸಿ, ಅಬ್ದುಲ್ ಸಮಾದ್ ನನ್ನು ಕೊಲೆಗೈದಿರುವ ವಿಷಯ ತಿಳಿಸಿದ್ದಾನೆ. ತಕರಾರು ಉಂಟಾಗಿ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದೇನೆ, ಆತನನ್ನು ಹೊಂಡದಲ್ಲಿ ಮುಚ್ಚಿ ಮಣ್ಣು ಮಾಡಲು ಸಹಕರಿಸುವಂತೆ ಕೇಳಿಕೊಂಡಿದ್ದ. ಆತನ ಮಾತು ಕೇಳಿ ಹೆದರಿದ ಸಲೀಂ ಅಬ್ದುಲ್ ರಹಿಮಾನನ್ನು ಅಲ್ಲಿಯೇ ಬಿಟ್ಟು ಬೈಕಿನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದ. ತನ್ನ ಮನೆಗೆ ಬಂದು ವಿಷಯವನ್ನು ಹೇಳಿದ್ದು, ಮನೆಯವರ ಸೂಚನೆಯಂತೆ ಸಲೀಂ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದ.
ಬಂಟ್ವಾಳ ಪೊಲೀಸರು ಆರೋಪಿ ಅಬ್ದುಲ್ ರಹಿಮಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ನ.1ರಂದು ರಾತ್ರಿ 8.30 ಗಂಟೆಗೆ ಅಬ್ದುಲ್ ಸಮಾದ್ ಜೊತೆಗೆ ಇರಾ ಬಳಿಯ ಮೂಳೂರು ಪದವಿಗೆ ತೆರಳಿದ್ದು ಅಲ್ಲಿ ಜಗಳವುಂಟಾಗಿ ಕೊಲೆ ಮಾಡಿದ್ದಾಗಿ ಅಬ್ದುಲ್ ರಹಿಮಾನ್ ತಪ್ಪೊಪ್ಪಿಕೊಂಡಿದ್ದ. ಪೊಲೀಸರು ಮೂಳೂರುಪದವಿನಲ್ಲಿ ನ.8ರಂದು ಹುಡುಕಾಡಿದ್ದು, ಗುಡ್ಡದ ಮಧ್ಯೆ ಹೊಂಡಕ್ಕೆ ಎಸೆದಿದ್ದ ಶವವನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ನ.9ರ ಬುಧವಾರ ಬಂಟ್ವಾಳ ಮತ್ತು ವಿಟ್ಲ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು ಅರೆಬೆಂದ ಸ್ಥಿತಿಯಲ್ಲಿದ್ದ ಅಬ್ದುಲ್ ಸಮಾದ್ ಶವ ಪತ್ತೆ ಮಾಡಿದ್ದಾರೆ.
ಅಬ್ದುಲ್ ರಹಿಮಾನ್ ಸಲಿಂಗ ಕಾಮಕ್ಕಾಗಿ ಹದಿಹರೆಯದ ಯುವಕನನ್ನು ನಿರ್ಜನ ಗುಡ್ಡಕ್ಕೆ ಕರೆದೊಯ್ದು ಅಲ್ಲಿ ಸಹಕರಿಸದೇ ಇದ್ದ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಆರೋಪಿಯನ್ನು ತನಿಖೆ ನಡೆಸುತ್ತಿದ್ದಾರೆ. ಅಬ್ದುಲ್ ಸಮಾದ್ ನಾಪತ್ತೆ ಆಗಿದ್ದರೂ, ಕೊಲೆಯಾದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆರೋಪಿ ಅಬ್ದುಲ್ ರಹಿಮಾನ್ ಸ್ವತಃ ತಾನೇ ಬಾಯ್ಬಿಡದ ಹೊರತು ಸುಲಭದಲ್ಲಿ ಪ್ರಕರಣ ಹೊರಬರುತ್ತಲೇ ಇರಲಿಲ್ಲ. ಆದರೆ ಕೃತ್ಯದ ಬಗ್ಗೆ ಸಂಬಂಧಿಕ ಯುವಕನಿಗೆ ಹೇಳಿ ತಾನೇ ಸಿಕ್ಕಾಕ್ಕೊಂಡಿದ್ದಾನೆ.
Mangalore 19 year old Youth found murdered in Bantwal case, forceful gay sex reason for murder says police. The attested has been identified as Abdul Rahiman (54). Abdul Samad, a young resident of Bolantoor village, who was reported missing was said to have been used for illegal activities by another youth of the same grama before murdering him and throwing the body down a hill.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm