ಸಿಸಿಬಿ ಪೊಲೀಸರ ಹೆಸರಲ್ಲಿ ಆಪ್ತ ಸ್ನೇಹಿತನಿಗೆ ಗುನ್ನ ;  ಶೇರ್ ಮಾಡಿದ ಖಾಸಗಿ ವೀಡಿಯೊವನ್ನು ಬಂಡವಾಳ ಮಾಡಿಕೊಂಡ ದ್ರೋಹಿಗಳು, 15 ಲಕ್ಷ ಪೀಕಿಸಿದ ಖದೀಮರು !

12-11-22 05:55 pm       Bangalore Correspondent   ಕ್ರೈಂ

ಯುವಕರ  ತಂಡವೊಂದು ತಮ್ಮ ಗೆಳೆಯನನ್ನೇ ಬ್ಲ್ಯಾಕ್‌ ಮೇಲ್‌ ಮಾಡಿ 15 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಅದು ಕೂಡ ತುಂಬಾ ನಂಬಿಕೆ ಇಟ್ಟಿದ್ದ ಗೆಳೆಯರೇ ಯುವಕನ ಸಂಕಷ್ಟದ ಸ್ಥಿತಿಯನ್ನು ಎನ್‌ಕ್ಯಾಶ್‌ ಮಾಡಿಕೊಂಡ ವಂಚನೆಯ ಕಥೆ. 

ಬೆಂಗಳೂರು, ನ.12: ಯುವಕರ  ತಂಡವೊಂದು ತಮ್ಮ ಗೆಳೆಯನನ್ನೇ ಬ್ಲ್ಯಾಕ್‌ ಮೇಲ್‌ ಮಾಡಿ 15 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಅದು ಕೂಡ ತುಂಬಾ ನಂಬಿಕೆ ಇಟ್ಟಿದ್ದ ಗೆಳೆಯರೇ ಯುವಕನ ಸಂಕಷ್ಟದ ಸ್ಥಿತಿಯನ್ನು ಎನ್‌ಕ್ಯಾಶ್‌ ಮಾಡಿಕೊಂಡ ವಂಚನೆಯ ಕಥೆ. 

ಚಾಮರಾಜಪೇಟೆಯ ಚಿನ್ನಾಭರಣ ವ್ಯಾಪಾರಿಯೊಬ್ಬರ ಪುತ್ರನಿಗೆ ಇತ್ತೀಚೆಗೆ ಇನ್‌ಸ್ಟಾ ಗ್ರಾಂನಲ್ಲಿ ಯುವತಿಯೊಬ್ಬಳ ಪರಿಚಯ ಆಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪರಸ್ಪರ ಚಾಟಿಂಗ್' ಮಾಡಿಕೊಂಡು ಖಾಸಗಿಯಾಗಿ ವಿಡಿಯೋ‌ಕಾಲ್ ನಲ್ಲಿ ಮಾತನಾಡಿಕೊಂಡಿದ್ದರು.

Banks witness decline in fraud cases in 2021-22. Details here | Mint

ಕೆಲದಿನಗಳ ಬಳಿಕ ಯುವಕ ಮತ್ತು ಯುವತಿ ಗಲಾಟೆ‌ ಮಾಡಿಕೊಂಡು ಸಂಬಂಧ ಹಳಸಿತ್ತು. ಈ‌ ವಿಚಾರವನ್ನು ಚಿನ್ನದ ವ್ಯಾಪಾರಿಯ ಪುತ್ರ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಮಾತ್ರವಲ್ಲ, ಖಾಸಗಿ ವಿಡಿಯೊಗಳ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದ. 

ಸ್ನೇಹಿತ‌ನ ಖಾಸಗಿ ವಿಡಿಯೋ ಸ್ಕ್ರೀನ್ ಶಾರ್ಟ್‌ಗಳನ್ನೇ ಬಂಡವಾಳ ಮಾಡಿಕೊಂಡ‌ ಸ್ನೇಹಿತರು ಅವನಿಂದ ದುಡ್ಡು ಕೀಳಲು ಹವಣಿಸಿದರು. ಯುವತಿ ಜತೆ ಖಾಸಗಿ ವಿಡಿಯೊ ಚಾಟ್ ಮಾಡಿರುವ ವಿಚಾರ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ. ಅವರು ನಿನ್ನನ್ನು ಬಂಧಿಸುತ್ತಾರೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದರು. 

CCB cracks down on 26 black sheep in its ranks | Deccan Herald

ನಮಗೆ ಐಪಿಎಸ್ ಅಧಿಕಾರಿಗಳು ಗೊತ್ತು. ಅವರ ಪರಿಚಯವಿದೆ. ಹೀಗಾಗಿ ವಿವಾದವನ್ನು ಸೆಟಲ್‌ಮೆಂಟ್ ಮಾಡೋಣ ಎಂದರು. ಹಾಗೆ ಸೆಟಲ್‌ಮೆಂಟ್‌ಗೆ ಹಣ ಕೇಳುತ್ತಾರೆ ಎಂದು ದುಡ್ಡಿಗೆ ಬೇಡಿಕೆ ಇಟ್ಟರು.

ಮೊದಲು 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತನ್ನು ಸ್ನೇಹಿತರಿಗೆ ನೀಡಿದ್ದ ಈ ಯುವಕ. ಆದರೆ, ಅಷ್ಟಕ್ಕೇ ತೃಪ್ತರಾಗದ ಗೆಳೆಯರು ಸಿಸಿಬಿ ಪೊಲೀಸರು ಇನ್ನೂ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಹೆದರಿಸಿ 3.50 ಲಕ್ಷ ರೂ. ಪಡೆದಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಸಿಸಿಬಿ ಪೊಲೀಸರ ಹೆಸರಲ್ಲಿ ಹಂತ ಹಂತವಾಗಿ 15.90 ಲಕ್ಷ ರೂ. ಪಡೆದರು. 

ಈ ನಡುವೆ ಯುವಕನಿಗೆ ತನ್ನ ಸ್ನೇಹಿತರ ಮೇಲೆಯೇ ಅನುಮಾನ ಬಂತು. ಕೊನೆಗೆ ಸಿಸಿಬಿ ಪೊಲೀಸರಲ್ಲಿ ಬೇರೆಯವರ ಮೂಲಕ ವಿಚಾರಿಸಿದಾಗ ಅಲ್ಲಿ ಇಂಥ ಪ್ರಕರಣವೇ ಇಲ್ಲ ಎನ್ನುವುದು ಗೊತ್ತಾಯಿತು.

ಇದಾದ ಬಳಿಕ ಗೆಳೆಯರು ಹಣ ಪಡೆದು ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ತಿಲಕ್‌ ನಗರ ಠಾಣೆಗೆ ದೂರು ನೀಡಿದ. ಪ್ರಕರಣದ ಬೆನ್ನಲ್ಲೇ ಪೊಲೀಸರು ಸುನಿಲ್, ಹೇಮಂತ್, ಪ್ರವೀಣ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಿದ್ದಾರೆ.

Bangalore Friends blackmail close friend of private video, and loot Rs 15 lakhs by Blackmail.