ಬ್ರೇಕಿಂಗ್ ನ್ಯೂಸ್
22-01-23 02:15 pm HK News Desk ಕ್ರೈಂ
ನವದೆಹಲಿ, ಜ.22: ರಾಜಧಾನಿ ದೆಹಲಿಯ ಫೈವ್ ಸ್ಟಾರ್ ಹೊಟೇಲ್ ಲೀಲಾ ಪ್ಯಾಲೇಸ್ ನಲ್ಲಿ ತಾನು ದುಬೈ ರಾಜನ ಕುಟುಂಬದ ಸದಸ್ಯನೆಂದು ಹೇಳಿಕೊಂಡು ನಾಲ್ಕು ತಿಂಗಳು ಉಳಿದುಕೊಂಡಿದ್ದಲ್ಲದೆ, ಅಲ್ಲಿನ ವಸತಿ ವೆಚ್ಚ 24 ಲಕ್ಷ ರೂಪಾಯಿ ನೀಡದೇ ವಂಚಿಸಿದ್ದ ಪ್ರಕರಣದಲ್ಲಿ ದೆಹಲಿ ಪೊಲೀಸರು ದಕ್ಷಿಣ ಕನ್ನಡ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಂಚನೆ ಪ್ರಕರಣದ ಬಗ್ಗೆ ಲೀಲಾ ಪ್ಯಾಲೇಸ್ ಹೊಟೇಲ್ ಮ್ಯಾನೇಜರ್ ಅನುಪಮ್ ದಾಸ್ ಗುಪ್ತಾ ದೆಹಲಿಯ ಸರೋಜಿನಿ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ದಕ್ಷಿಣ ಕನ್ನಡ ಮೂಲದ 41 ವರ್ಷದ ವ್ಯಕ್ತಿ ಮಹಮ್ಮದ್ ಶರೀಫ್ ಎಂಬಾತನನ್ನು ಜ.19ರಂದು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಮಹಮ್ಮದ್ ಶರೀಫ್ ತಾನು ಯುಎಇ ದೇಶದ ರಾಜ ಶೇಖ್ ಫಲಾಹ್ ಬಿನ್ ಝಾಯೇದ್ ಅವರ ಕಚೇರಿಯಲ್ಲಿ ಕೆಲಸಕ್ಕಿದ್ದು, ದುಬೈ ನಿವಾಸಿಯೆಂದು ನಕಲಿ ಬಿಸಿನೆಸ್ ಐಡಿ ಕಾರ್ಡನ್ನು ತೋರಿಸಿದ್ದ. ಕಳೆದ ಆಗಸ್ಟ್ 1ರಿಂದ ಲೀಲಾ ಪ್ಯಾಲೇಸ್ ನಲ್ಲಿ ಕೊಠಡಿ ಪಡೆದಿದ್ದು, ನವೆಂಬರ್ 20ರಂದು ನಾಪತ್ತೆಯಾಗಿದ್ದ. ಹೊಟೇಲ್ ಒಳಗಿದ್ದ ಬೆಳ್ಳಿಯ ತಟ್ಟೆ, ಮುತ್ತಿನ ಹರಳು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳವುಗೈದಿದ್ದಲ್ಲದೆ, ಹೊಟೇಲಿನ ನಾಲ್ಕು ತಿಂಗಳ ವೆಚ್ಚವನ್ನೂ ನೀಡದೆ ತೆರಳಿದ್ದ. ಮೂರು ತಿಂಗಳ ಹೊಟೇಲ್ ಬಿಲ್ 23.46 ಲಕ್ಷ ಆಗಿತ್ತು.
ಹೊಟೇಲ್ ನಲ್ಲಿ ಕೊಠಡಿ ಪಡೆಯುವ ವೇಳೆ 20 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದ. ಅದರ ದಿನಾಂಕ ನವೆಂಬರ್ 22ಕ್ಕೆ ಕೊನೆಯಾಗುವುದರಲ್ಲಿತ್ತು. ಇದರ ಬಗ್ಗೆ ಮಾಹಿತಿಯಿದ್ದ ಮಹಮ್ಮದ್ ಶರೀಫ್, ಅದಕ್ಕೂ ಮೊದಲೇ ಹೊಟೇಲಿನಿಂದ ನಾಪತ್ತೆಯಾಗಿದ್ದ. ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ, ಅದು ಹಣ ಇಲ್ಲದೆ ಬೌನ್ಸ್ ಆಗಿತ್ತು. ತಾನು ದುಬೈನಲ್ಲಿ ರಾಜ ಶೇಖ್ ಬಿನ್ ಝಾಯೇದ್ ಅವರ ಕಚೇರಿಯಲ್ಲಿ ಕೆಲಸಕ್ಕಿದ್ದು, ರಾಜನ ಕುಟುಂಬಕ್ಕೆ ಸಂಬಂಧಿಕನಾಗಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಯುಎಇ ಪ್ರಜೆ ಅನ್ನುವ ಬಗ್ಗೆ ರೆಸಿಡೆಂಟ್ ಕಾರ್ಡ್, ಬಿಸಿನೆಸ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಒದಗಿಸಿದ್ದ. ಆರಂಭದಲ್ಲಿ 11.5 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದ. ದೆಹಲಿಯಲ್ಲಿ ವ್ಯವಹಾರ ನಿಮಿತ್ತ ಕೆಲಸ ಇರುವುದರಿಂದ ಬಂದಿದ್ದೇನೆ ಎಂದು ಹೊಟೇಲ್ ಸಿಬಂದಿಗೆ ತಿಳಿಸಿದ್ದ. ಅಲ್ಲದೆ, ಯುಎಇಯಲ್ಲಿ ತನ್ನ ಐಷಾರಾಮಿ ಜೀವನದ ಬಗ್ಗೆಯೂ ಹೇಳಿಕೊಂಡಿದ್ದ.
23 ಲಕ್ಷ ಹೊಟೇಲ್ ಬಿಲ್ ಬಾಕಿಯಿರಿಸಿ ನಾಪತ್ತೆಯಾದ ಬೆನ್ನಲ್ಲೇ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ, ಮಹಮ್ಮದ್ ಶರೀಫ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ವ್ಯಕ್ತಿ ಅನ್ನುವುದು ಪತ್ತೆಯಾಗಿತ್ತು. ಬೆನ್ನುಹತ್ತಿದ ದೆಹಲಿ ಪೊಲೀಸರು ಬೆಂಗಳೂರಿನ ನಿವಾಸದಲ್ಲಿದ್ದಾಗಲೇ ದಾಳಿ ನಡೆಸಿ ಮಹಮ್ಮದ್ ಶರೀಫ್ ನನ್ನು ಬಂಧಿಸಿದ್ದಾರೆ.
A man was arrested for allegedly staying at a five-star hotel here for about four months by posing as a functionary of the UAE royal family and fled with an outstanding bill of over Rs 23 lakh, police said. Shareef was apprehended from his residence in Dakshina Kannada, Karnataka on January 19, police said.
Mahamed Shareef checked in into The Leela Palace, New Delhi on August 1 last year. He was staying in room number 427 for about four months and fled on November 20 without paying the bills, they said.
10-01-25 02:44 pm
Bangalore Correspondent
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
09-01-25 07:50 pm
Mangalore Correspondent
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am