ಬ್ರೇಕಿಂಗ್ ನ್ಯೂಸ್
30-05-23 05:24 pm Bangalore Correspondent ಕ್ರೈಂ
ಬೆಂಗಳೂರು, ಮೇ 30: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆಯೊಬ್ಬರು ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯಗೆ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಬಳಿಕ ಇಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು.
ಇದೀಗ ವಿಜಯ್ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಇದರಿಂದ ಪ್ರಿಯಕರ ವಿಜಯಶಂಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಜ್ಯೋತಿ ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಸುಮಾರು 4 ವರ್ಷದ ಹಿಂದೆ ಇಬ್ಬರ ಪರಿಚಯವಾಗಿದ್ದು, ಜ್ಯೋತಿ ಮದುವೆ ಆಗಿರುವುದನ್ನು ಮುಚ್ಚಿಟ್ಟಿದ್ದಳು. ಹೀಗೆ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರೆದಿದ್ದು, 2 ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿರುವ ವಿಚಾರ ವಿಜಯ್ಗೆ ತಿಳಿದು ಬಂದಿದೆ.
ಆದರೆ ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾದ ಬಳಿಕ ಭೀಮಾಶಂಕರ ಮತ್ತೆ ಬೆಂಗಳೂರಿಗೆ ಬಂದಿದ್ದ. ಈ ವಿಚಾರ ತಿಳಿದ ಮಹಿಳೆ ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ರೂಮಿಗೆ ಕರೆದಿದ್ದಾಳೆ. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದ ಭೀಮಾಶಂಕರ ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದ. ಇದರಿಂದ ಕುಪಿತಗೊಂಡ ಮಹಿಳೆ ಏಕಾಏಕಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ್ದಾಳೆ. ಸಾಲದೆಂಬಂತೆ ಬಿಯರ್ ಬಾಟಲ್ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಕಾಲ್ಕಿತ್ತಿದ್ದಾಳೆ.
ತೀವ್ರ ಗಾಯಗೊಂಡ ಭೀಮಾಶಂಕರ ಕಿರುಚಾಡತೊಡಗಿದ್ದಾನೆ. ಈ ವೇಳೆ ಮನೆ ಮಾಲೀಕ ಸೈಯದ್ ಆಗಮಿಸಿ ಗಾಯಾಳುವನ್ನು ವಿಕ್ಟೋರಿಯಾ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗಳಾಗಿವೆ ಎನ್ನಲಾಗಿದ್ದು, ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭೀಮಾಶಂಕರ ದೂರು ದಾಖಲಿಸಿದ್ದಾನೆ. ದೂರು ಪಡೆದ ಪೊಲೀಸರು ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
In a shocking incident, a woman tried to kill her recently married lover by pouring boiling water on him, causing him to sustain around 50 per cent burn injuries. The victim, Vijay Shankar Bheema Shankar Arya, known as Vijay Kumar, is a 30-year-old esident of Yarandahalli in Bommasandra. He is currently undergoing treatment at Victoria Hospital's burns ward.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm