ಬ್ರೇಕಿಂಗ್ ನ್ಯೂಸ್
07-02-26 02:58 pm HK News Desk ಕರ್ನಾಟಕ
ಬೀದರ್, ಫೆ.7: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಏನೂ ಇಲ್ಲ. ಈ ಬಗ್ಗೆ ಹೈಕಮಾಂಡ್ ಏನೂ ಹೇಳಿಲ್ಲ ಎಂದು ಸಿಎಂ ಪುತ್ರ, ಯತೀಂದ್ರ ಸಿದ್ದರಾಮಯ್ಯ ಅವರು ಬೀದರ್ ನಲ್ಲಿ ಮತ್ತೆ ಪುನರುಚ್ಚರಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲೀಡರ್‌ಶಿಪ್ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆಯಲ್ಲ ಅಂತ ಹೇಳೋಕೆ ಯಾವುದೇ ಕಾರಣಗಳಿಲ್ಲ. ಹೈಕಮಾಂಡ್ ನಾಯಕರು ಲೀಡರ್‌ಶಿಪ್ ಬದಲಾವಣೆ ಬಗ್ಗೆ ಏನೂ ಹೇಳಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಬೀದರ್ ಪ್ರವಾಸದಲ್ಲಿರುವ ಯತೀಂದ್ರ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.
'ಯತೀಂದ್ರ ಅವರೇ ನಮ್ಮ ಹೈಕಮಾಂಡ್' ಎಂಬ ಡಿಕೆಶಿ ವ್ಯಂಗ್ಯದ ಹೇಳಿಕೆಗೆ, ಡಿಕೆಶಿ ಅವರು ಆ ರೀತಿ ಹೇಳಿದ್ದು ಸರಿಯಲ್ಲ ಎಂದೂ ತಿರುಗೇಟು ನೀಡಿದ್ದಾರೆ. ಹೈಕಮಾಂಡ್ ನಿರ್ಣಯಕ್ಕೆ ಸಿದ್ದರಾಮಯ್ಯ, ಡಿಕೆಶಿ ಅಥವಾ ನಾನು ಯಾರೇ ಆದ್ರೂ ಬದ್ಧವಾಗಿರ್ತೇವೆ. ಹೈಕಮಾಂಡ್ ಲೀಡರ್‌ಶಿಪ್ ಬದಲಾವಣೆ ಮಾಡ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಹಾಗಾಗಿ ಸಿಎಂ ಬದಲಾವಣೆ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ .
ಮಾತು ಕೊಟ್ಟಿಲ್ಲ ಅಂತ ಸಿದ್ದರಾಮಯ್ಯರೇ ಕ್ಲೀಯರ್ ಮಾಡಲಿ..
ಯತೀಂದ್ರ ಹೇಳಿಕೆಯನ್ನು ಡಿಕೆಶಿ ಬಣದ ದಾವಣಗೆರೆ ಶಾಸಕ ಬಸವರಾಜು ಶಿವಗಂಗಾ ನಿರಾಕರಿಸಿದ್ದು ಇದರ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟಪಡಿಸಲಿ. ಸಿದ್ದರಾಮಯ್ಯ ಅವರೇ ಕ್ಲೀಯರ್ ಮಾಡಲಿ, ನಾನು ಯಾವುದೇ ಮಾತು ಕೊಟ್ಟಿಲ್ಲ ಅಂತ. ಆಗ ನಾವು ಯಾವುದೇ ಪ್ರಶ್ನೆ ಎತ್ತೋದಿಲ್ಲ ಎಂದಿದ್ದಾರೆ. ಅಲ್ಲದೆ, ಅಧಿಕಾರ ಹಂಚಿಕೆಯಾಗಿದೆ ಎಂದು ನನಗೆ ಮಾಹಿತಿ ಇದೆ. ಡಿಕೆಶಿಗೆ 139 ಶಾಸಕರ ಬೆಂಬಲವಿದೆ. 40 ರಿಂದ 50 ಜನ ನಮ್ಮಂತ ಯುವ ಶಾಸಕರು ಡಿಕೆಶಿ ಏನೇ ಹೇಳಿದ್ರೂ ಮಾಡಲು ರೆಡಿ ಇದ್ದೇವೆ. ಅವರು ಪ್ರಾಣ ಕೇಳಿದ್ರು ಕೊಡೋಕೆ ರೆಡಿ ಇದೀವಿ. ನನಗಿರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ.
ಯತೀಂದ್ರ ವೈಯಕ್ತಿಕ ಹೇಳಿಕೆ; ಪರಮೇಶ್ವರ್
ಇದೇ ವೇಳೆ, ತನ್ನ ತಂದೆಯೇ 5 ವರ್ಷ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಅದು ಅವರ ವೈಯಕ್ತಿಕ ಹೇಳಿಕೆ. ಯತೀಂದ್ರ ಯಾವ ಮಾಹಿತಿ ಪಡೆದು ಹೇಳಿದ್ರು ಗೊತ್ತಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡತ್ತೆ. ಸದ್ಯಕ್ಕೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಮಾದ್ಯಮಗಳು ಗೊಂದಲ ಎಂದು ಹೇಳುತ್ತಿದ್ದೀರಾ ಅಷ್ಟೇ. ಗೊಂದಲ ಇದ್ರೆ ಸಿ.ಎಲ್.ಪಿ ಸಭೆಯಲ್ಲಿ ಗೊತ್ತಾಗುತ್ತಿತ್ತು. ಮೊನ್ನೆ ನಡೆದ ಸಭೆಯಲ್ಲೂ ಯಾರು ಏನು ಹೇಳಿಲ್ಲ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಸಿಎಂ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm