ಪರವಾನಿಗೆ ಇಲ್ಲದೆ ಮನೆ ನಿರ್ಮಾಣ ; ಪ್ರಶ್ನಿಸಿದಕ್ಕೆ ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ , ಕೊಲೆ ಬೆದರಿಕೆ

04-06-23 02:14 pm       Mangalore Correspondent   ಕ್ರೈಂ

ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರ್ ಬಾಗ್ ಎಂಬಲ್ಲಿ ನಡೆದಿದೆ.

ಮಂಗಳೂರು, ಜೂನ್ 4: ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರ್ ಬಾಗ್ ಎಂಬಲ್ಲಿ ನಡೆದಿದೆ.

ಪಡುಪೆರಾರ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಮೇಲೆ ರಾಡ್‌ ನಿಂದ ಹಲ್ಲೆ ನಡೆಸಲಾಗಿದೆ.

ರಾಜೇಶ್ ಸಾಲ್ಯಾನ್, ಕಾಂಟ್ರಾಕ್ಟರ್ ರಾಘವೇಂದ್ರ ಆಚಾರಿ ಎಂಬವರು ಹಲ್ಲೆ ನಡೆಸಿದ್ದು, ಬಳಿಕ‌ ಕೊಲೆ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತರು ಆರೋಪ ಮಾಡಿದ್ದಾರೆ.

ಪಡುಪೆರಾರ ಗ್ರಾಮ ಪಂಚಾಯತ್ ನ ಕೊರಕಂಬ್ಳ ವಾರ್ಡ್ ನಲ್ಲಿ ಪರವಾನಿಗೆ ಇಲ್ಲದೆ ಮನೆ ನಿರ್ಮಿಸಿರುವ ಕುರಿತು ಇಂದು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಭೆ ಬಳಿಕ ಪಿಡಿಒ ಪ್ರಮೋದ್ ಅವರೊಂದಿಗೆ ಗ್ರಾಮ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರವಾನಿಗೆ ಪಡೆದುಕೊಳ್ಳುವಂತೆ ಮನೆಯವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಈ ವೇಳೆ ಏಕಾಏಕಿ ದಾಳಿ ಮಾಡಿದ ಮನೆಯ ಗುತ್ತಿಗೆ ವಹಿಸಿರುವ ರಾಘವೇಂದ್ರ ಆಚಾರ್ ಮತ್ತು ಬಿಜೆಪಿ ಕಾರ್ಯಕರ್ತನೆನ್ನಲಾದ ರಾಜೇಶ್ ಸಾಲಿಯಾನ್ ಕಬ್ಬಿಣದ ರಾಡಿನಿಂದ ನೂರ್ ಅಹ್ಮದ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ನೂರು ಅಹ್ಮದ್ ತಲೆಗೆ ಗಂಭೀರ ಗಾಯವಾಗಿದ್ದು, ಕೈ, ಕಾಲು ಮತ್ತು ಕಣ್ಣಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ನೂರ್ ಅಹ್ಮದ್, ಕಾಂಟ್ರಾಕ್ಟರ್ ರಾಘವೇಂದ್ರ ಆಚಾರ್ಯ ಮತ್ತು ರಾಜೇಶ್ ಸಾಲ್ಯಾನ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Mangalore Paduperar village Panchayath member assulted with iron rod for questioning construction of house without license. Noor Ahmed is the Panchyath memeber who has been beaten up brutally. A case has been registered at the Bajpe police station.