ಬ್ರೇಕಿಂಗ್ ನ್ಯೂಸ್
09-06-23 12:46 pm HK News Desk ಕ್ರೈಂ
ಮೈಸೂರು, ಜೂನ್ 9: ಅರೆಕ್ಷಣದ ಸಿಟ್ಟು ಆ ಯುವಕನ ಕೈಯಲ್ಲಿ ಮಾಡಬಾರದ ಕೆಲಸವನ್ನು ಮಾಡಿಸಿತ್ತು. ಅಜ್ಜಿ ಬೈದರೆಂದು ಸಿಟ್ಟಿಗೆದ್ದ ಮೊಮ್ಮಗ ಗೋಡೆಗೆ ತಳ್ಳಿದ್ದರಿಂದ ಆಯತಪ್ಪಿ ಬಿದ್ದ ಮುದುಕಿ ಅಲ್ಲಿಯೇ ಬಿದ್ದು ಪ್ರಾಣ ಕಳಕೊಂಡಿದ್ದರು. ಆನಂತರ, ಸತ್ತು ಬಿದ್ದ ಅಜ್ಜಿಯನ್ನು ಇನ್ನೇನು ಮಾಡುವುದೆಂದು ತೋಚದೆ ಕಾರಿನಲ್ಲಿಟ್ಟು ಸುತ್ತಾಡಿ ಕೊನೆಗೆ ಕೆಆರ್ ಎಸ್ ಹಿನ್ನೀರಿನ ಬಳಿ ಸುಟ್ಟು ಹಾಕಿ ಅಜ್ಜಿ ನಾಪತ್ತೆಯೆಂದು ಪೊಲೀಸ್ ದೂರು ಕೊಟ್ಟಿದ್ದ. ಆದರೆ ಪೊಲೀಸರ ತನಿಖೆಯಲ್ಲಿ ಮೊಮ್ಮಗನೇ ಕೊಲೆಗಾರ ಎಂದು ಸೆರೆಗೀಡಾಗಿದ್ದಾನೆ.
ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನಾ(75) ಮೃತ ವೃದ್ಧ ಮಹಿಳೆ. ಸುಪ್ರೀತ್ (23) ಎನ್ನುವ ಯುವಕ ಅಜ್ಜಿಯನ್ನು ಕೊಂದ ಮೊಮ್ಮಗ. ಕೆಆರ್ ಎಸ್ ಹಿನ್ನೀರು ವ್ಯಾಪ್ತಿಯ ಸಾಗರಕಟ್ಟೆ ಗ್ರಾಮದ ಬಳಿಯ ಗುಂಡಿಯಲ್ಲಿ ಮೇ 30ರಂದು ಅರೆಬರೆ ಸುಟ್ಟು ಹಾಕಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿದ್ದ ಮೈಸೂರು ದಕ್ಷಿಣ ಠಾಣೆ ಪೊಲೀಸರು ತನಿಖೆ ಶುರು ಹಚ್ಚಿದ್ದರು. ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆ ಆಗಿರುವ ಮಂದಿಯ ಮಾಹಿತಿ ಕಲೆಹಾಕಿದ್ದರು. ತಲೆಕೂದಲು ಮತ್ತು ಶವದಲ್ಲಿ ಸಿಕ್ಕಿದ್ದ ಕನ್ನಡಕವನ್ನು ಆಧರಿಸಿ ತನಿಖೆ ಆರಂಭಿಸಿದ್ದರು.
ಇದೇ ಸಂದರ್ಭದಲ್ಲಿ ನಜರಬಾದ್ ಠಾಣೆಯಲ್ಲಿ ಅಜ್ಜಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಸುಪ್ರೀತ್ ದೂರು ನೀಡಿದ್ದ ಯುವಕನೆಂದು ತಿಳಿದು ತನಿಖೆಯನ್ನು ಅಲ್ಲಿಗೆ ವಿಸ್ತರಣೆ ಮಾಡಿದ್ದರು. ಅಜ್ಜಿಯನ್ನು ಕೊಂದು ಹಾಕಿದ್ದ ಸುಪ್ರೀತ್ ಕೊರಿಯನ್ ವೆಬ್ ಸಿರೀಸ್ ನೋಡಿ, ಹೆಣ ಸುಟ್ಟು ಹಾಕಿ ಬಚಾವಾಗಲು ಪ್ಲಾನ್ ಮಾಡಿದ್ದ. ಮೇ 28ರಂದು ಕೊಲೆ ಮಾಡಿದ್ದರೂ, ಎರಡು ದಿನ ಶವ ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಕಾರಿನಲ್ಲಿಟ್ಟೇ ಸುತ್ತಾಡಿದ್ದ. ಕೊನೆಗೆ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿ ಬಂದಿದ್ದ. ಈ ನಡುವೆ, ಅಜ್ಜಿ ಶವ ಕಾರಿನಲ್ಲಿಟ್ಟೇ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದ.
ಮಿಸ್ಸಿಂಗ್ ಕಂಪ್ಲೇಂಟ್ ಆಧರಿಸಿ ಸುಪ್ರೀತ್ ನನ್ನು ಕರೆದು ವಿಚಾರಣೆ ನಡೆಸಿದಾಗ, ಆತನ ಹೇಳಿಕೆಯಲ್ಲಿ ಸಂಶಯ ಬಂದಿತ್ತು. ಮತ್ತಷ್ಟು ವಿಚಾರಣೆ ನಡೆಸಿದಾಗ ನಿಜ ವಿಚಾರ ಬಾಯಿಬಿಟ್ಟಿದ್ದಾನೆ. ಮನೆಯಲ್ಲಿ ದೂಡಿ ಹಾಕಿ, ಕೆಳಕ್ಕೆ ಬಿದ್ದಾಕೆಯನ್ನು ತಲೆದಿಂಬಿಟ್ಟು ಉಸಿರುಕಟ್ಟಿಸಿ ಕೊಂದಿದ್ದಾಗಿ ಹೇಳಿದ್ದ. ಅಜ್ಜಿ ಪ್ರತಿ ಮಾತಿಗೆ ಬೈಯುತ್ತಿದ್ದರು. ಅದಕ್ಕಾಗಿ ಕೊಂದು ಬಿಟ್ಟೆ ಎಂದಿದ್ದ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಬಿಸಿಎ ಕಲಿಯುತ್ತಿದ್ದ ವಿದ್ಯಾರ್ಥಿಯೀಗ ಜೈಲು ಪಾಲಾಗಿದ್ದಾನೆ. ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಹಿಡಿದಾಕಿದ ಪೊಲೀಸ್ ತಂಡವನ್ನು ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಶ್ಲಾಘಿಸಿದ್ದಾರೆ.
The police have arrested the grandson who killed his grandmother and set her dead body on fire. Supreet (23), a resident of Gayathripuram, Mysore, Karnataka, is the young man who committed the murder. Supreet, who killed grandmother Sulochana (75), wrapped her body in a plastic bag and put it in a cardboard box, took it to the back water of KRS Dam in a car, took out a big tank and burnt the body in it.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm