ಬ್ರೇಕಿಂಗ್ ನ್ಯೂಸ್
09-06-23 09:44 pm HK News Desk ಕ್ರೈಂ
ಮುಂಬೈ, ಜೂನ್ 9: 13 ವರ್ಷಗಳಿಂದ ಜೊತೆಗಿದ್ದ ಮಹಿಳೆಯ ಶವವನ್ನು ಕತ್ತರಿಸಿ, ಬೇಯಿಸಿ ಬೀದಿ ನಾಯಿಗಳಿಗೆ ಹಾಕುತ್ತಿದ್ದ ಪ್ರಕರಣ ಇಡೀ ಮುಂಬೈ ಮಹಾನಗರವನ್ನು ನಡುಗಿಸಿದೆ. ಆದರೆ ಮುಂಬೈ ನಗರದ ಮೀರಾ ರೋಡ್ ನಲ್ಲಿರುವ ಅಪಾರ್ಟ್ಮೆಂಟಿನ ಏಳನೇ ಮಹಡಿಯಲ್ಲಿ ಸದ್ದಿಲ್ಲದೆ ಸತ್ತು ಹೋಗುತ್ತಿದ್ದ ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ.
ಮಂಗಳವಾರ ಬೆಳಗ್ಗೆ ಹತ್ತಂತಸ್ತಿನ ಅಪಾರ್ಟ್ಮೆಂಟಿನ ಏಳನೇ ಮಹಡಿಯಲ್ಲಿರುವ ಇತರ ಮೂರು ಮನೆಗಳ ನಿವಾಸಿಗಳಿಗೆ ವಿಚಿತ್ರ ವಾಸನೆ ಬರುತ್ತಿತ್ತು. ಇಲಿ ಸತ್ತಿರಬೇಕೆಂದು ಮೂರು ಮನೆಯವರು ಕೂಡ ಮನೆ ಒಳ- ಹೊರಗೆಲ್ಲ ಹುಡುಕಾಡಿದ್ದಾರೆ. ಸಂಜೆಯಾಗುತ್ತಿದ್ದಂತೆ ವಾಸನೆ ಇನ್ನೂ ಹೆಚ್ಚಿತ್ತು. ವಿಚಿತ್ರ ರೀತಿಯಲ್ಲಿ ಮೂಗಿಗೆ ಬಡಿಯುತ್ತಿತ್ತು. ಏಳನೇ ಮಹಡಿಯ ಆ ಒಂದು ಮನೆಯವರು ಬಿಟ್ಟು ಉಳೆದೆಲ್ಲ ನಿವಾಸಿಗಳು ತಲೆಕೆಡಿಸಿಕೊಂಡಿದ್ದರು. ಕೊನೆಗೆ, ಅಪಾರ್ಟ್ಮೆಂಟ್ ಸೆಕ್ರಟರಿಗೆ ವಿಷಯ ತಿಳಿಸಿ ಆತಂಕ ತೋಡಿಕೊಂಡಿದ್ದರು. ಮನೋಜ್ ಕುಮಾರ್ ಸಾನೆ ಮತ್ತು ಸರಸ್ವತಿ ವೈದ್ಯ ಎಂಬ ಮಹಿಳೆ ವಾಸವಿದ್ದ 703 ನಂಬರಿನ ಮನೆಯಿಂದಲೇ ವಾಸನೆ ಬರುತ್ತಿತ್ತು. ಆ ಮನೆಯ ಬಾಗಿಲು ಬಡಿದರೂ, ತೆರೆಯದೇ ಇದ್ದುದರಿಂದ ಸಂಶಯ ಬಂದು ಬುಧವಾರ ಬೆಳಗ್ಗೆ ಪೊಲೀಸರನ್ನು ಕರೆಸಿದ್ದರು.
ಇಬ್ಬರು ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ, ಅಲ್ಲೀ ವರೆಗೂ ಇಲಿ ಸತ್ತಿರಬೇಕು ಅಂದ್ಕೊಂಡಿದ್ದವರು ತಮ್ಮ ಕಣ್ಣುಗಳನ್ನೇ ನಂಬದಾಗಿದ್ದರು. ಮನೆಯ ಒಳಗೆಲ್ಲ ರಕ್ತ ಚೆಲ್ಲಿತ್ತು. ಕಿಚನ್ ರೂಮಲ್ಲಿ ಶವದ ಭಾಗಗಳನ್ನು ಕತ್ತರಿಸಿ ಬೇಯಿಸಿ ಬಿಸಿ ನೀರಿನಲ್ಲಿ ಹಾಕಿಟ್ಟಿದ್ದು ಕಂಡುಬಂತು. ಒಂದಷ್ಟು ದೇಹದ ಭಾಗಗಳನ್ನು ಪ್ಲಾಸ್ಟಿಕ್ ಬ್ಯಾಗಲ್ಲಿ ತುಂಬಿಸಿಡಲಾಗಿತ್ತು. ಬಾತ್ ರೂಮಿನಲ್ಲಿ ಎರಡು ಟಬ್ ನಲ್ಲಿ ರಕ್ತ ತುಂಬಿಕೊಂಡಿತ್ತು. ಪೊಲೀಸರು ಇದನ್ನು ನೋಡುತ್ತಲೇ ಶಾಕ್ ಆಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ.
ಕತ್ತರಿಸಲು ಪ್ರೇರಣೆ ಶ್ರದ್ಧಾ ವಾಲ್ಕರ್ ಕೇಸ್
ಪೊಲೀಸರು ಬಂದಾಗ ಮನೋಜ್ ಕುಮಾರ್ ಮನೆಯಲ್ಲಿ ಇರಲಿಲ್ಲ. ಮಹಿಳೆ ಸರಸ್ವತಿ ವೈದ್ಯಳದ್ದೇ ಶವ ಅನ್ನೋದು ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗಿತ್ತು. ಮನೋಜ್ ಒಂದೆರಡು ಬಾರಿ ಲಿಫ್ಟ್ ನಲ್ಲಿ ಕಂಡಿದ್ದರೂ, ಮಹಿಳೆಯನ್ನು ಮಾತ್ರ ನಾಲ್ಕು ದಿನಗಳಿಂದ ಯಾರೂ ಕಂಡಿರಲಿಲ್ಲ. ಬುಧವಾರ ಸಂಜೆ ಅಪಾರ್ಟ್ಮೆಂಟಿನತ್ತ ಬರುತ್ತಲೇ ಪೊಲೀಸರು ಮನೋಜ್ ಕುಮಾರ್ ನನ್ನು ಬಂಧಿಸಿದ್ದಾರೆ. ಆತನ ಪ್ರಕಾರ, ಮಹಿಳೆ ವಿಷ ಕುಡಿದು ಸುಸೈಡ್ ಮಾಡಿಕೊಂಡಿದ್ದಾಳೆ. ಪೊಲೀಸರಿಗೆ ತಿಳಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ಹೇಳಿ ಶವವನ್ನು ಹೊರಗೆ ಸಾಗಿಸಲು ಉಪಾ ಹೂಡಿದ್ದ. ಅದಕ್ಕಾಗಿ ಕ್ರೈಮ್ ಸೀರಿಯಲ್ ಮತ್ತು ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ರೀತಿಯಲ್ಲೇ ಮಾಡಲು ಹೋಗಿದ್ದಾನೆ. ಶವವನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ನೀರಲ್ಲಿ ತೊಳೆದು ಕುಕ್ಕರಲ್ಲಿಟ್ಟು ಬೇಯಿಸಿದ್ದಾನೆ. ಬೇಯಿಸಿದ ಬಳಿಕ ತುಂಡುಗಳನ್ನು ಹೊರಗೆ ಸಾಗಿಸಿ, ರೈಲ್ವೇ ಟ್ರಾಕ್ ನಲ್ಲಿ ಸಿಗುವ ಬೀದಿ ನಾಯಿಗಳಿಗೆ ಹಾಕಿ ಬಂದಿದ್ದಾನೆ. ಜೂನ್ 4ರ ಭಾನುವಾರ ಮಹಿಳೆ ಸತ್ತಿರಬೇಕೆಂದು ಶಂಕೆಯಿದ್ದು ಬುಧವಾರದ ಹೊತ್ತಿಗೆ ವಿಷಯ ಬೆಳಕಿಗೆ ಬಂದಿತ್ತು. ಶವ ಕೊಳೆತು ವಾಸನೆ ಆಸುಪಾಸಿನವರ ಮೂಗಿಗೆ ಬಡಿದಿದ್ದರಿಂದಲೇ ಪೊಲೀಸರು ಎಂಟ್ರಿ ಕೊಡುವಂತಾಗಿತ್ತು.
ಮನೋಜ್ ಕುಮಾರ್ ಮತ್ತು ಸರಸ್ವತಿ ವೈದ್ಯ ಮೂಲತಃ ಎಲ್ಲಿಯವರು, ಎಲ್ಲಿಂದ ಬಂದು ಇಲ್ಲಿ ನೆಲೆಸಿದ್ದರು ಅನ್ನುವ ಬಗ್ಗೆ ಸರಿಯಾದ ಮಾಹಿತಿ ಯಾರಿಗೂ ಇಲ್ಲ. ಮಾಹಿತಿ ಪ್ರಕಾರ, ಇವರಿಬ್ಬರು 13 ವರ್ಷಗಳಿಂದ ಜೊತೆಗಿದ್ದರು ಎನ್ನಲಾಗುತ್ತಿದೆ. ಮಾರ್ಕೆಟ್ ನಲ್ಲಿ ಕೆಲಸಕ್ಕಿದ್ದ 32 ವರ್ಷದ ಸರಸ್ವತಿ ಮನೋಜ್ ಕುಮಾರ್ ಗೆ ಪರಿಚಯವಾಗಿ ಆನಂತರ ಜೊತೆಯಾಗಿ ವಾಸವಿದ್ದರು. 2017ರಿಂದ ಮೀರಾ ರೋಡ್ ನಲ್ಲಿ ಅಪಾರ್ಟ್ಮೆಂಟ್ ಪಡೆದು ಇಬ್ಬರು ಗಂಡ- ಹೆಂಡತಿ ರೀತಿಯಲ್ಲೇ ವಾಸವಿದ್ದರು. ಕೆಲವು ತಿಂಗಳಿಂದ ಸರಸ್ವತಿ ವೈದ್ಯಳಿಗೆ ಮನೋಜ್ ಕುಮಾರ್ ನಡತೆ ಬಗ್ಗೆ ಸಂಶಯ ಬಂದು ಜಗಳ ಶುರು ಮಾಡಿದ್ದಳು. ಭಾನುವಾರವೂ ಜಗಳ ನಡೆದಿತ್ತು ಎಂದು ಆರೋಪಿ ಮನೋಜ್ ಪೊಲೀಸರಲ್ಲಿ ಹೇಳಿದ್ದಾನೆ. ಆನಂತರ, ತಾನು ಹೊರಗೆ ಹೋಗಿದ್ದಾಗ ಸರಸ್ವತಿ ವಿಷ ಸೇವಿಸಿ ಮಲಗಿದಲ್ಲೇ ಶವ ಆಗಿದ್ದಳು. ಸರಸ್ವತಿ ಸತ್ತಿರುವುದನ್ನು ತಿಳಿದು ಇನ್ನೇನು ಮಾಡುವುದೆಂದು ಕತ್ತರಿಸಿ ಹೊರಗೊಯ್ಯುವ ಯೋಜನೆ ಹಾಕಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ನಾವು ದೇಹದ ಭಾಗಗಳನ್ನು ಪೋಸ್ಟ್ ಮಾರ್ಟಂ ನಡೆಸಲು ಕಳಿಸಿಕೊಟ್ಟಿದ್ದೇವೆ. ಆತ ಹೇಳುವ ಕತೆಯನ್ನು ಪೂರ್ತಿ ನಂಬಲಾಗುತ್ತಿಲ್ಲ. ಆಕೆಯ ದೇಹದಲ್ಲಿ ವಿಷದ ಅಂಶ ಇದೆಯೇ ಅನ್ನುವುದು ಪತ್ತೆ ಮಾಡಬೇಕಿದೆ. ಆತನೇ ತನ್ನ ಸಂಗಾತಿಯನ್ನು ಕೊಂದು ಪೀಸ್ ಪೀಸ್ ಮಾಡಿದ್ದಾನೆಯೇ ಎನ್ನುವ ಸಂಶಯ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮರವನ್ನು ಕೊಯ್ಯುವ ಇಲೆಕ್ಟ್ರಾನಿಕ್ ಗರಗಸ, ಚೂರಿ, ಮಾಂಸ, ರಕ್ತ ತುಂಬಿದ್ದ ಐದರಿಂದ ಆರು ಪಾತ್ರೆಗಳು, ಪ್ರೆಶರ್ ಕುಕ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ಅಪಾರ್ಟ್ಮೆಂಟ್ ರೈಲ್ವೇ ಟ್ರಾಕ್ ನಿಂದ ನೂರು ಮೀಟರ್ ದೂರದಲ್ಲಿತ್ತು. ದಿನವೂ ಬೆಳಗ್ಗೆ ಇವರಿಬ್ಬರು ರೈಲ್ವೇ ಟ್ರಾಕ್ ವರೆಗೆ ವಾಕಿಂಗ್ ಹೋಗುತ್ತಿದ್ದರು. ಮೊನ್ನೆ ಭಾನುವಾರದಿಂದ ಮಹಿಳೆ ಮತ್ತು ಮನೋಜ್ ಕಾಣಿಸಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತದಲ್ಲಿ ರಕ್ತ ಪಡೆದು ಎಚ್ಐವಿ ಸಿಕ್ಕಿತ್ತು !
ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿ ಮನೋಜ್ ಕುಮಾರ್ ಎಚ್ಐವಿ ಪಾಸಿಟಿವ್ ನಿಂದ ಬಳಲುತ್ತಿದ್ದ. ಮಾಹಿತಿ ಪ್ರಕಾರ, ಆತನಿಗೆ 2007ರಿಂದಲೇ ಎಚ್ಐವಿ ಇದೆಯಂತೆ. ಅಪಘಾತ ಒಂದರಲ್ಲಿ ಗಾಯಗೊಂಡಿದ್ದ ಮನೋಜ್ ಗೆ ಯಾರೋ ರಕ್ತ ನೀಡಿದ್ದರಲ್ಲಿ ಎಚ್ಐವಿ ಸೇರಿಕೊಂಡಿತ್ತಂತೆ. ಪಾಸಿಟಿವ್ ಆಗಿರುವುದು ತಿಳಿದ ನಂತರ ಮೆಡಿಟೇಶನ್ ಇನ್ನಿತರ ಔಷಧಿ ಮಾಡಿಕೊಂಡು ಜೀವನ ದೂಡುತ್ತಿದ್ದ. ತನ್ನನ್ನು ನಂಬಿ ಬಂದಿದ್ದ ಸರಸ್ವತಿ ವೈದ್ಯಳ ಬಗ್ಗೆಯೂ ಮನೋಜ್ ಗೆ ಚಿಂತೆಯಿತ್ತು. ತಾನು ಸತ್ತರೆ ಈಕೆಗೆ ಯಾರು ಗತಿಯೆಂದು ಯೋಚಿಸುತ್ತಿದ್ನಂತೆ. ಆತನಿಗೂ ಆಕೆಗೂ ಲೈಂಗಿಕ ಸಂಬಂಧ ಇರಲಿಲ್ವಂತೆ. ಜೊತೆಗಿದ್ದುದು ಮಾತ್ರ ಎಂದೆಲ್ಲ ಮನೋಜ್ ಪೊಲೀಸರ ಮುಂದೆ ಕತೆ ಹೇಳಿದ್ದಾನೆ. ಇದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು ಆತನಿಗೆ ಎಚ್ಐವಿ ಇದೆಯೇ ಎಂದು ತಪಾಸಣೆಗೆ ಮುಂದಾಗಿದ್ದಾರೆ.
13 ವರ್ಷಗಳ ಹಿಂದೆ ಸಿಕ್ಕಿದ್ದ ಅನಾಥ ಮಹಿಳೆ
2010ರಲ್ಲಿ ನವಿ ಮುಂಬೈನ ವಾಶಿ ಮಾರ್ಕೆಟ್ ನಲ್ಲಿ ಸರಸ್ವತಿ – ಮನೋಜ್ ಕುಮಾರ್ ಮೊದಲ ಭೇಟಿ ಆಗಿತ್ತು. ಆ ಸಂದರ್ಭದಲ್ಲಿ ರೇಶನ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಮನೋಜ್, ದಿನವೂ ಮಾರ್ಕೆಟ್ ಗೆ ಹೋಗುತ್ತಿದ್ದುದರಿಂದ ಪರಿಚಯ ಆಗಿತ್ತಂತೆ. ಮೂಲತಃ ಅಹ್ಮದ್ ನಗರ ನಿವಾಸಿಯಾಗಿದ್ದ ಮಹಿಳೆ ಅನಾಥೆ ಎಂಬುದನ್ನು ತಿಳಿದು ತನ್ನ ಮನೆಯಲ್ಲಿ ಕೆಲಸಕ್ಕೆ ಆಗಬಹುದು ಎಂದು ಕರೆತಂದಿದ್ದ. ಕೆಲವು ತಿಂಗಳ ನಂತರ ಅವರಲ್ಲಿ ಪ್ರೀತಿಯ ಬಂಧ ಬೆಳೆದಿತ್ತು. ಆದರೆ ಮನೋಜ್ ತನಗೆ ಎಚ್ಐವಿ ಇದೆಯೆಂದು ಸರಸ್ವತಿಯನ್ನು ಮದುವೆಯಾಗಲಿಲ್ಲ. ಆಕೆಯ ಜೊತೆಗೆ ಲೈಂಗಿಕ ಸಂಬಂಧವನ್ನೂ ಹೊಂದಿರಲಿಲ್ಲ. ಸರಸ್ವತಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ಇತ್ತೀಚೆಗೆ ಸರಿಯಾದ ಕೆಲಸ ಇಲ್ಲದ ಕಾರಣ ದಿನದ ಖರ್ಚಿಗೂ ಚಿಂತೆಯಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
The man accused of killing his alleged live-in partner in their flat in Geeta Nagar area of Mira Road, near Mumbai, and allegedly chopping the body into innumerable pieces, has told police during interrogation that he is HIV-positive and had never had physical relationship with Vaidya, as she was “like his daughter”, a senior police officer.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm