ಬ್ರೇಕಿಂಗ್ ನ್ಯೂಸ್
09-06-23 10:52 pm Mangalore Correspondent ಕ್ರೈಂ
ಮಂಗಳೂರು, ಜೂನ್ 9: ಗಾಂಜಾ ವ್ಯಾಪಾರ- ವಹಿವಾಟಿನಲ್ಲಿ ತೊಡಗಿಕೊಂಡಿದ್ದ ಬಂಟ್ವಾಳ ಮೂಲದ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನನ್ನು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಬ್ಬಾಸ್ ಎಂಬವರ ಪುತ್ರ ಫವಾಸ್ ಎಂದು ಗುರುತಿಸಲಾಗಿದೆ. ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಅರೆಸುಟ್ಟ ಶವ ಪತ್ತೆಯಾಗಿದ್ದು, ಫವಾಸ್ ನದ್ದೇ ಶವ ಎಂದು ಪತ್ತೆ ಮಾಡಲಾಗಿದೆ. ಫವಾಸ್ ಈ ಹಿಂದೆ ಮದುವೆಯಾಗಿದ್ದು, ಆನಂತರ ಪತ್ನಿಯನ್ನು ಬಿಟ್ಟು ಹೋಗಿದ್ದ. ಗಾಂಜಾ ಪೆಡ್ಲಿಂಗ್, ಅದೇ ವಹಿವಾಟಿನಲ್ಲಿ ವ್ಯಸ್ತನಾಗಿದ್ದ ಫವಾಸ್ ಮನಗೆ ಬರುವುದನ್ನೇ ಕಡಿಮೆ ಮಾಡಿದ್ದ.
ಫವಾಸ್ ಡ್ರಗ್ಸ್ ಸೇವನೆ ಮಾಡುತ್ತಿದ್ದ ಕಾರಣಕ್ಕೆ ಮನೆಯ ಗೌರವ ಹಾಳಾಗುತ್ತೆ ಎಂದು ಮನೆಯವರು ಕೂಡ ದೂರ ಮಾಡಿದ್ದರು. ಡ್ರಗ್ಸ್ ಮತ್ತು ಗಾಂಜಾ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದಕ್ಕೆ ಫವಾಸ್ ಬಗ್ಗೆ ಕುಟುಂಬಸ್ಥರು ಅಸಮಾಧಾನದಲ್ಲಿದ್ದರು. ಅಕ್ರಮವಾಗಿ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಮಂಗಳೂರು, ಬಂಟ್ವಾಳದಲ್ಲಿ ಪೊಲೀಸರಿಗೆ ನೋಟೆಡ್ ಆಗಿಯೂ ಇದ್ದ. ಹತ್ತು ದಿನಗಳ ಹಿಂದೆ ಫವಾಸ್ ನನ್ನು ತಂಡವೊಂದು ಅಪಹರಿಸಿದೆ ಎನ್ನಲಾಗುತ್ತಿದ್ದು ಆನಂತರ ನಾಪತ್ತೆಯಾಗಿದ್ದ. ಗಾಂಜಾ ವಹಿವಾಟಿನಲ್ಲಿ ಹಣಕಾಸು ವಿಷಯದಲ್ಲಿ ವೈಷಮ್ಯದಿಂದ ತಂಡ ಅಪಹರಿಸಿತ್ತು ಎನ್ನಲಾಗಿದೆ.
ಈ ನಡುವೆ, ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟ ಶವ ಪತ್ತೆಯಾಗಿದ್ದು ಫವಾಸ್ ನದ್ದೇ ಎಂದು ಪೊಲೀಸರು ಗುರುತು ಹಚ್ಚಿದ್ದಾರೆ. ಫವಾಸ್ ಕೊಲೆ ಪ್ರಕರಣದಲ್ಲಿ ವಗ್ಗ ಮತ್ತು ಕಾವಳಕಟ್ಟೆಯ ಯುವಕರು ಇದ್ದಾರೆ ಎಂಬುದನ್ನು ಪೊಲೀಸರು ಶಂಕಿಸಿದ್ದಾರೆ. ಫವಾಸ್ ಜೊತೆಗೆ ಗಾಂಜಾ ವಹಿವಾಟಿನಲ್ಲಿ ಗುರುತಿಸಿದ್ದ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
Mangalore Bantwal Youth involved in Ganja gang murdered, body found at Bankal, gutted with fire. The deceased has been identified as Abbas from Ira, Bantwal.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm