ಕೊಣಾಜೆ ; ಮೆಥಾಂಪೆಟಾಮೈನ್ ಡ್ರಗ್ಸ್ ಮಾರುತ್ತಿದ್ದ ಇಬ್ಬರ ಸೆರೆ 

12-06-23 01:49 pm       Mangalore Correspondent   ಕ್ರೈಂ

ಕೊಣಾಜೆ ಠಾಣೆ ವ್ಯಾಪ್ತಿಯ ಕೇರಳ ಗಡಿಭಾಗದ ನೆತ್ತಿಲಪದವು ಸೈಟ್ ಬಳಿ ಮೆಥಾಂಪೆಟಾಮೈನ್ ಎನ್ನುವ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. 

ಮಂಗಳೂರು, ಜೂನ್ 12: ಕೊಣಾಜೆ ಠಾಣೆ ವ್ಯಾಪ್ತಿಯ ಕೇರಳ ಗಡಿಭಾಗದ ನೆತ್ತಿಲಪದವು ಸೈಟ್ ಬಳಿ ಮೆಥಾಂಪೆಟಾಮೈನ್ ಎನ್ನುವ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. 

ತಲಪಾಡಿ ಕೆಸಿ ರೋಡ್ ನಿವಾಸಿ ಅಬ್ದುಲ್ ರಶೀದ್ ಮೊಯಿದ್ದೀನ್ (41) ಮತ್ತು ದೇರಳಕಟ್ಟೆ ಬೆಳ್ಮ ನಿವಾಸಿ ಪಿ. ಆರಿಫ್ ಅಲಿಯಾಸ್ ಹ್ಯಾರಿಸ್ (40) ಬಂಧಿತರು. ಇವರು ನೆತ್ತಿಲಪದವು ಸೈಟ್ ಕಂಬಳ ನಡೆಸುವ ಜಾಗದಲ್ಲಿ ಸ್ಕೂಟರ್ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. 

ಆರೋಪಿಗಳ ಬಳಿಯಿಂದ 20 ಗ್ರಾಮ್ ಮೆಥಾಂಪೆಟಾಮೈನ್ ಡ್ರಗ್ಸ್ ಮತ್ತು ಸುಜುಕಿ ಆ್ಯಕ್ಸೆಸ್ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 106,500 ರೂ. ಆಗಿರುತ್ತದೆ. ‌ಕೊಣಾಜೆ ಪಿಎಸ್ಐ ಅಶೋಕ್ ನೇತೃತ್ವದಲ್ಲಿ ಸಿಬಂದಿ ದಾಳಿ ನಡೆಸಿದ್ದರು.

Two arrested for selling Methamphetamine drugs at Talapady Border at Konaje in Mangalore. 20 grams of drugs and cash of 1.6 lakhs has been seized by the Konaje Police.