ಬ್ರೇಕಿಂಗ್ ನ್ಯೂಸ್
16-06-23 05:50 pm Bangalore Correspondent ಕ್ರೈಂ
ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಭಾರೀ ಸಂಚಲನ ಎಬ್ಬಿಸಿದ್ದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದ್ದು ಪ್ರಮುಖ ಆರೋಪಿಯಾಗಿದ್ದ ಸಂತೋಷ್ ರಾವ್ ನನ್ನು ದೋಷಿಯಲ್ಲ ಎಂದು ಬಿಡುಗಡೆಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಲೇಜು ಮುಗಿಸಿ ಮನೆಗೆ ಬರುತ್ತಿದ್ದ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಮಗಳು ನಾಪತ್ತೆಯಾಗಿದ್ದ ಬಗ್ಗೆ ತಂದೆ ಚಂದಪ್ಪ ಗೌಡರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಬಸ್ಸಿನಿಂದ ಇಳಿದು ಬಂದಿದ್ದ ಸೌಜನ್ಯ ಎಲ್ಲಿ ಹೋಗಿದ್ದಳೆಂದು ಆ ದಾರಿಯಲ್ಲಿ ಹುಡುಕಾಟವನ್ನೂ ನಡೆಸಿದ್ದರು. ಆದರೆ ಮರುದಿನ ಅದೇ ದಾರಿಯಲ್ಲಿ ಮಣ್ಣಸಂಕ ಎಂಬಲ್ಲಿ ಸೌಜನ್ಯಾ ಮೃತದೇಹ ಪತ್ತೆಯಾಗಿತ್ತು. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಯುವತಿಯ ದೇಹದಲ್ಲಿ ಒಳ ಉಡುಪುಗಳು ಇರಲಿಲ್ಲ. ಅಲ್ಲದೆ, ಮುನ್ನಾ ದಿನ ಭಾರೀ ಮಳೆಯಾಗಿದ್ದರೂ, ಶವದ ಮೇಲಿದ್ದ ಬಟ್ಟೆ ಒದ್ದೆಯಾಗಿರಲಿಲ್ಲ. ಹೀಗಾಗಿ ಕೃತ್ಯದ ಬಗ್ಗೆ ಭಾರೀ ಶಂಕೆ, ಅನುಮಾನ ವ್ಯಕ್ತವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಧರ್ಮಸ್ಥಳ, ಉಜಿರೆ ಸೇರಿದಂತೆ ಇಡೀ ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.
ತೀವ್ರ ಪ್ರತಿಭಟನೆಯಿಂದಾಗಿ ಸಾವಿರಾರು ಜನರು ಬೀದಿಗಿಳಿದಿದ್ದರು. ಆನಂತರ, ನಾಲ್ಕು ದಿನಗಳ ಬಳಿಕ ಬಾಹುಬಲಿ ಬೆಟ್ಟದಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಬಳಿಕ ರಾಜ್ಯದಾದ್ಯಂತ ತೀವ್ರ ಆಕ್ರೋಶ, ಸಿಬಿಐ ತನಿಖೆಗೆ ಆಗ್ರಹ ಕೇಳಿಬಂದಿದ್ದರಿಂದ ಒಟ್ಟು ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಅಧಿಕಾರಿಗಳು 2016ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿ, ಮಾನಸಿಕ ಅಸ್ವಸ್ಥ ಸಂತೋಷ್ ರಾವ್ ನನ್ನು ಆರೋಪಿಯೆಂದು ಮುಂದಿಟ್ಟಿದ್ದರು.
ಕೋರ್ಟ್ ವಿಚಾರಣೆಯಲ್ಲಿ ಸಂತೋಷ್ ರಾವ್ ಆರೋಪಿಯೆಂದು ಸಾಬೀತು ಮಾಡಲು ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂತೋಷ್ ಆರೋಪಿಯಲ್ಲ, ಮರು ತನಿಖೆ ಮಾಡುವಂತೆ ಹೊಸತಾಗಿ ಅಧಿಕಾರಿಗಳನ್ನು ನೇಮಿಸಿ 2018ರಲ್ಲಿ ಸಿಬಿಐ ಕೋರ್ಟ್ ಆದೇಶ ಮಾಡಿತ್ತು. ಆದರೆ ಮರು ತನಿಖೆಗೆ ಧರ್ಮಸ್ಥಳ ಕಡೆಯಿಂದ ಹೈಕೋರ್ಟ್ ಮೂಲಕ ತಡೆಯಾಜ್ಞೆ ನೀಡಿದ್ದರಿಂದ ತನಿಖಾ ಪ್ರಕ್ರಿಯೆ ಬಿದ್ದು ಹೋಗಿತ್ತು. ಆನಂತರ, ಆರೋಪಿ ಸಂತೋಷ್ ರಾವ್ ಪರವಾಗಿ ವಕೀಲರು ವಾದ ಮಂಡಿಸಿದ್ದಾರೆ.
ಹನ್ನೊಂದು ವರ್ಷಗಳ ಸುದೀರ್ಘ ಅವಧಿಯ ಬಳಿಕ ಆರೋಪಿ ಸಂತೋಷ್ ರಾವ್ ಪರವಾಗಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯಕೀಯ ವರದಿ ಇಲ್ಲ. ಕೃತ್ಯದ ಸಂದರ್ಭದಲ್ಲಿ ಆರೋಪಿ ಸ್ಥಳದಲ್ಲೇ ಇರಲಿಲ್ಲ. ಹೀಗಾಗಿ ತನಿಖೆಯಲ್ಲಿ ಹಲವು ವೈಫಲ್ಯಗಳು ಎದ್ದು ಕಾಣುತ್ತಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇತ್ತ ಆರೋಪಿ ಬಿಡುಗಡೆಯಾಗಿದ್ದು ಅಪರಾಧ ಎಸಗಿದ್ದವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಸೌಜನ್ಯಾ ಹೆತ್ತವರು ಧರ್ಮಸ್ಥಳ ಪರ ಇದ್ದ ಪ್ರಭಾವಿಗಳ ಬಗ್ಗೆ ಆರೋಪ ಮಾಡಿದ್ದರು. ಸಿಬಿಐ ಅಧಿಕಾರಿಗಳು ತನಿಖೆಗೆ ಬಂದಿದ್ದರೂ ಪ್ರಭಾವಿಗಳನ್ನು ಟಚ್ ಮಾಡಿಲ್ಲವೇ, ತನಿಖೆ ಮಾಡಿಲ್ಲವೇ ಎನ್ನುವ ಪ್ರಶ್ನೆ ಇದೆ.
The CBI court has delivered its verdict in the highly-publicized rape and murder case of Saujanya, a student of SDM College and a resident of Dharmastala, which had sent shockwaves across the country. After eleven years, the court has acquitted the primary suspect, Santhosh Rao, due to insuffi
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm