ಬಾಡಿಗೆ ಮನೆಯೊಳಗೆ ಗಾಂಜಾ ಬೆಳೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು ! ಶಿವಮೊಗ್ಗದಲ್ಲಿ ತಮಿಳುನಾಡು, ಕೇರಳದ ವಿದ್ಯಾರ್ಥಿಗಳ ಗಾಂಜಾಗಿರಿಗೆ ಪೊಲೀಸರ ಶಾಕ್ 

26-06-23 02:18 pm       HK News Desk   ಕ್ರೈಂ

ಎಂಬಿಬಿಎಸ್‌ ವ್ಯಾಸಂಗ ಮುಗಿಸಿ ವೈದ್ಯರಾಗಿ ಸೇವೆಗೆ ಸೇರಬೇಕಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಗಾಂಜಾ ಮತ್ತು ಇತರೆ ಮಾದಕ ದ್ರವ್ಯಗಳ ಉತ್ಪಾದನೆ, ಬಳಕೆ ಮತ್ತು ಮಾರಾಟದ ಜಾಲದಲ್ಲಿ ತೊಡಗಿರುವುದನ್ನು ಶಿವಮೊಗ್ಗ ಪೊಲೀಸರು ಬಯಲಿಗೆಳೆದಿದ್ದಾರೆ.

ಶಿವಮೊಗ್ಗ, ಜೂನ್ 26: ಎಂಬಿಬಿಎಸ್‌ ವ್ಯಾಸಂಗ ಮುಗಿಸಿ ವೈದ್ಯರಾಗಿ ಸೇವೆಗೆ ಸೇರಬೇಕಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಗಾಂಜಾ ಮತ್ತು ಇತರೆ ಮಾದಕ ದ್ರವ್ಯಗಳ ಉತ್ಪಾದನೆ, ಬಳಕೆ ಮತ್ತು ಮಾರಾಟದ ಜಾಲದಲ್ಲಿ ತೊಡಗಿರುವುದನ್ನು ಶಿವಮೊಗ್ಗ ಪೊಲೀಸರು ಬಯಲಿಗೆಳೆದಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಸಿಕ್ಕಿಬಿದ್ದಿದ್ದು ಇವರೆಲ್ಲರೂ ಶಿವಮೊಗ್ಗದ ಖಾಸಗಿ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಎಂಬಿಬಿಎಸ್‌ ಹೌಸ್‌ ಸರ್ಜನ್‌ ತರಬೇತಿಯಲ್ಲಿದ್ದರು. ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಹೊರ ರಾಜ್ಯದವರಾಗಿದ್ದು ನಗರದ ಪುರಲೆಯ ಶಿವಗಂಗಾ ಬಡಾವಣೆಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿದ್ದರು. ತಮಿಳುನಾಡು ಕೃಷ್ಣಗಿರಿ ಜಕ್ಕಪ್ಪನಗರದ ವಿಘ್ನರಾಜ್‌(28), ಕೇರಳ ಇಡುಕ್ಕಿ ಜಿಲ್ಲೆಯ ವಿನೋದ್‌ ಕುಮಾರ್‌(27) ಮತ್ತು ತಮಿಳುನಾಡು ಧರ್ಮಪುರಿ ಕಡಗತ್ತೂರಿನ ಪಾಂಡಿದೊರೈ(27) ಬಂಧಿತರು. ಜೂ.22ರಂದು ವಿಜಯಪುರ ಕೀರ್ತಿ ನಗರದ ಅಬ್ದುಲ್‌ ಖಯ್ಯುಂ(25), ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಅರ್ಪಿತಾ(23) ಸಿಕ್ಕಿಬಿದ್ದಿದ್ದರು. 

Provisions of Arrest and Rights of an Arrested Person — Ylcube

ತಮಿಳುನಾಡಿನ ವಿಘ್ನರಾಜ್‌ ತನ್ನ ಬಾಡಿಗೆ ಮನೆಯ ಒಳಗೆ ಕೃತಕ ಬೆಳಕು, ಉಷ್ಣಾಂಶ ಮತ್ತು ಗಾಳಿಯನ್ನು ಬಳಸ್ಕೊಂಡು ಹೂದಾನಿಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆದು, ಬಳಿಕ ಒಣಗಿಸಿ ಸಂಸ್ಕರಿಸಿ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ. ಈತನಿಗೆ ವೈದ್ಯಕೀಯ ವಿದ್ಯಾರ್ಥಿಗಳೆ ಗ್ರಾಹಕರಾಗಿದ್ದು  ಸ್ಥಳೀಯರು ಮತ್ತು ಸಂಗಡಿಗರ ಮೂಲಕ ತಮಿಳುನಾಡಿಗೂ ಗಾಂಜಾ ರವಾನೆ ಮಾಡುತ್ತಿದ್ದ. ಮನೆಯೊಳಗೆ ಈತ ಮಾಡಿಕೊಂಡ ವ್ಯವಸ್ಥೆಗಳನ್ನು ನೋಡಿದಾಗ ವೈದ್ಯಕೀಯ ಸೇವೆಗೆ ಹೋಗುವ ಬದಲು ಗಾಂಜಾ ಬೆಳೆಯುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ರೀತಿಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ ವಿನೋದ್‌ ಕುಮಾರ್‌ ಮತ್ತು ಪಾಂಡಿದೊರೈ ಗಾಂಜಾ ಖರೀದಿಸಲು ಹೋಗಿದ್ದ ಸಮಯದಲ್ಲೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. 

ಆರೋಪಿತರಿಂದ 5800 ರೂ. ಮೌಲ್ಯದ 227 ಗ್ರಾಂ ಒಣ ಗಾಂಜಾ, 30 ಸಾವಿರ ರೂ. ಮೌಲ್ಯದ 1.50 ಕೆಜಿ ಹಸಿ ಗಾಂಜಾ, 6 ಸಾವಿರ ರೂ. ಮೌಲ್ಯದ 10 ಗ್ರಾಂ ಚರಸ್‌, ಗಾಂಜಾ ಬೀಜಗಳ ಸಣ್ಣ ಬಾಟಲ್‌, ಕೆನಾಬೀಸ್‌ ಆಯಿಲ್‌ ರೀತಿಯ 3 ಸಿರಿಂಜ್‌, ಎಲೆಕ್ಟ್ರಾನಿಕ್‌ ತೂಕದ ಯಂತ್ರ, ಟೇಬಲ್‌ ಫ್ಯಾನ್‌, ಕೃತಕ ಬೆಳಕಿಗೆ ಬಳಕೆ ಮಾಡುತ್ತಿದ್ದ ಎಲ್‌ಇಡಿ ಬಲ್ಬ್ ಸೆಟ್‌, ಹುಕ್ಕಾ ಕೊಳವೆ, 19 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

Five final-year medical students were arrested in Karnataka's Shivamogga, for allegedly cultivating cannabis (ganja) under hi-tech conditions and selling it in the market. The arrested students, identified as Vighnaraj, Vinod Kumar, Vighnara, Pandidurai, and Dharmapuri, were doing their medical internship at a private medical college in Purale village near Shivamogga.