ಬ್ರೇಕಿಂಗ್ ನ್ಯೂಸ್
10-07-23 08:16 pm HK News Desk ಕ್ರೈಂ
ಮೈಸೂರು, ಜುಲೈ 10: ಇದೊಂದು ಮಂಗಳೂರಿನ ಸೈನೇಡ್ ಮೋಹನ್ ಎಂಬ ಕಿಲ್ಲರ್ ರೀತಿಯ ಕತೆ. ಈತನಿಗೂ ವಿಧವೆಯರು ಹಾಗೂ ಮದುವೆಯಾಗದೆ ಉಳಿದಿರುವ ವಯಸ್ಸು ಮೀರಿದ ಮಹಿಳೆಯರೇ ಟಾರ್ಗೆಟ್. ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಸಂಪರ್ಕಿಸಿ ನಂಬಿಸಿ, ಮದುವೆಯಾಗುವುದಲ್ಲದೆ ಮಹಿಳೆಯರದ್ದೇ ಹಣ ಹಾಗೂ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ.
ಬೆಂಗಳೂರು ಮೂಲದ ಖತರ್ನಾಕ್ ವ್ಯಕ್ತಿಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈವರೆಗೂ ಈತ 15ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಬೆಂಗಳೂರಿನ ಬನಶಂಕರಿ 3ನೇ ಹಂತ ಹೊಸಕೆರೆಹಳ್ಳಿ ಕಾಳಿದಾಸನಗರ ನಿವಾಸಿ ಬಸವೇಗೌಡ ಎಂಬವರ ಪುತ್ರ ಕೆ.ಬಿ.ಮಹೇಶ್ (35) ಬಂಧಿತ ಆರೋಪಿ. ಈತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್‌ಲೈಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಬೆಂಗಳೂರಿನ ಮಹೇಶ್, ಮೈಸೂರಿನ ಹೇಮಲತಾ ಎಂಬವರನ್ನು ಶಾದಿ ಡಾಟ್ ಕಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ತಾನು ಡಾಕ್ಟರ್ ಎಂದು ಹೇಳಿಕೊಂಡು ನಂಬಿಸಿದ್ದಲ್ಲದೆ, ನಂತರ ಮದುವೆಯಾಗಿದ್ದ. ಆದರೆ ಸುತ್ತಾಟ ಎಲ್ಲ ಮುಗಿದ ಬಳಿಕ ಆಕೆಯದ್ದೇ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಸದ್ದಿಲ್ಲದೆ ಪರಾರಿಯಾಗಿದ್ದ. ಈ ಬಗ್ಗೆ ಹೇಮಲತಾ ನೀಡಿದ್ದ ದೂರಿನಂತೆ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಮಹೇಶ್‌ನನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ತಾನು ಡಾಕ್ಟರ್, ಎಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು 15 ಮಹಿಳೆಯರಿಗೆ ವಂಚಿಸಿರುವುದಾಗಿ ಹೇಳಿದ್ದಾನೆ.
ಶಾದಿ.ಕಾಂ ಮೂಲಕ ಹೇಮಲತಾರನ್ನು ಸಂಪರ್ಕಿಸಿದ್ದ ಮಹೇಶ್, ಮೈಸೂರಿನ ಆರ್.ಟಿ.ನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ. ಈತನ ಮಾತು ನಂಬಿದ ಹೇಮಲತಾ ಜ.28ರಂದು ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದರು. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದರು. ಈ ವೇಳೆ ವಿಜಯನಗರ 4ನೇ ಹಂತದಲ್ಲಿ ತಾನು ಕ್ಲಿನಿಕ್ ಓಪನ್ ಮಾಡಬೇಕೆಂದು ಕಾರಣ ನೀಡಿ 70 ಲಕ್ಷ ಸಾಲ ತೆಗೆಯಲು ಒತ್ತಡ ಹೇರಿದ್ದು, ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದ.
ಆಬಳಿಕ ಹೇಮಲತಾ ಮನೆಯಲ್ಲಿ ಇಲ್ಲದೇ ಇದ್ದಾಗ 2.15 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಮನೆಯಿಂದ ಪರಾರಿಯಾಗಿದ್ದ. ಆನಂತರ, ಮಹೇಶ್ ಬಗ್ಗೆ ಹೇಮಲತಾ ಹುಡುಕಾಟ ನಡೆಸಿದ್ದು ಹಿನ್ನೆಲೆ ಅರಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ, ಮಹೇಶ್ ಈ ಮೊದಲೇ ಮದುವೆಯಾಗಿರುವುದು ತಿಳಿದುಬಂದಿತ್ತು. ಕೆಲವೇ ದಿನಗಳಲ್ಲಿ ಬೆಂಗಳೂರಿನ ದಿವ್ಯಾ ಎಂಬವರು ಹೇಮಲತಾ ಮನೆಗೆ ಬಂದು ತನ್ನನ್ನೂ ಮಹೇಶ್ ಮದುವೆ ಆಗಿದ್ದಾನೆಂದು ತಿಳಿಸಿದ್ದಾರೆ. ಮಹೇಶ್ ಕಪಟಿ ಎನ್ನುವುದು ತಿಳಿಯುತ್ತಲೇ ಹೇಮಲತಾ ಕುವೆಂಪುನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Bengalore resident marries at least 15 women by posing as doctor, engineer, arrested after nearly a decade by Mysuru police. Mysuru city police Sunday arrested a man who cheated women he met on matrimonial websites by posing as an engineer or doctor and marrying them. Officers suspect he has married at least 15 women since 2014 and have at least four children.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm