ಬ್ರೇಕಿಂಗ್ ನ್ಯೂಸ್
17-07-23 02:09 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 17: ಪತ್ನಿಯ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಸಹಚರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಏಳು ತಿಂಗಳ ನಂತರ ಪ್ರಕರಣ ಭೇದಿಸಲಾಗಿದೆ.
ಆರೋಪಿಗಳನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್ (24) ಮತ್ತು ಚಾಲಕ ಉದಯ್ ಕುಮಾರ್ (40) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಚೈತನ್ಯ (22) ಅವರನ್ನು ವಿವಾಹವಾಗಿದ್ದ ಅರವಿಂದ್ ಹೊಸಕೋಟೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚೈತನ್ಯ ತನ್ನ ಪತಿಯನ್ನು ಪೋಷಕರಿಂದ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸುತ್ತಿದ್ದರಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದು ವೈವಾಹಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅರವಿಂದ್ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದ ಆದರೆ ಆಕೆ ಗರ್ಭಿಣಿಯಾಗಿದ್ದರಿಂದ ಅದನ್ನು ನಿರಾಕರಿಸಿ ಪೋಷಕರ ಮನೆಗೆ ಮರಳಿದ್ದಳು.
ಆರೋಪಿ ಅರವಿಂದನಿಗೆ ಕೆಲ ವರ್ಷಗಳಿಂದ ಲಾರಿ ಚಾಲಕ ಉದಯ್‌ಕುಮಾರ್ ಪರಿಚಯವಿತ್ತು. ಹೀಗಾಗಿ ಉದಯ್‌ನನ್ನು ಸಂಪರ್ಕಿಸಿ ಪತ್ನಿ ಚೈತನ್ಯಾಳನ್ನು ಅಪಘಾತ ಮಾಡಿ ಕೊಲೆ ಮಾಡುವ ಸಂಚಿನ ಬಗ್ಗೆ ತಿಳಿಸಿದ್ದ. ಈ ಕೆಲಸ ಮಾಡಲು ಉದಯ್‌ಗೆ 1.50 ಲಕ್ಷವನ್ನೂ ನೀಡಿದ್ದ. ಅದರಂತೆ ಉದಯ್ .40 ಸಾವಿರ ಕೊಟ್ಟು ಹಳೇ ಟಾಟಾ ಸುಮೋ ಕಾರು ಖರೀದಿಸಿದ್ದ. ಬಳಿಕ ಆರೋಪಿಗಳಿಬ್ಬರೂ ಚೈತನ್ಯಾ ಓಡಾಡುವ ಸ್ಥಳಗಳ ಬಗ್ಗೆ ಕೆಲ ದಿನ ನಿಗಾವಹಿಸಿದ್ದರು. ಚೈತನ್ಯಾ ಸಂಚಾರದ ಮಾರ್ಗದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ ಎಂಬುದನ್ನೂ ಗಮನಿಸಿದ್ದರು.
ಅದರಂತೆ ಜ.1ರಂದು ಚೈತನ್ಯಾ ಭರತ ನಾಟ್ಯ ತರಗತಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬಾಗಲೂರಿನ ಕೆಐಡಿಬಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಬರುವಾಗ ಆರೋಪಿಗಳು ಟಾಟಾ ಸುಮೋದಲ್ಲಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚೈತನ್ಯಾರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚೈತನ್ಯಾ ಪ್ರಾಣಾಪಾಯದಿಂದ ಪಾರಾದರು. ಈ ಸಂಬಂಧ ಏರ್‌ಪೋರ್ಚ್ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಚೈತನ್ಯ ಪೋಷಕರು ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಗಲೂರು ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಅಪಘಾತ ಮಾಡಿದ ಕಾರಿಗಾಗಿ ಹುಡುಕಾಟ ನಡೆಸಿದ್ದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಅಪಘಾತ ನಡೆದ ಸ್ಥಳಕ್ಕೆ ಹೊಂದಿಕೊಂಡಂತ ವಿವಿಧ ರಸ್ತೆಗಳಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ಕಾರು ಗುರುತು ಪತ್ತೆಯಾಗಿದ್ದು, ಕಾರು ಮಾಲೀಕನನ್ನು ಸಂಪರ್ಕಿಸಿದಾಗ ಅದನ್ನು ಕೆಲ ತಿಂಗಳ ಹಿಂದೆ ಅರವಿಂದ್ ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಅರವಿಂದ್ ವಿಚಾರಣೆ ನಡೆಸಿದಾಗ ಅದು ಅಪಘಾತವಲ್ಲಾ, ಕೊಲೆ ಮಾಡಲು ಮಾಡಿದ ಸ್ಕೆಚ್ ಎಂಬುದು ತಿಳಿದುಬಂದಿದೆ. ಕೇಸ್ ನ್ನು ಬಾಗಲೂರು ಠಾಣೆಗೆ ವರ್ಗಾಯಿಸಿದ್ದು, ಅರವಿಂದ್ ನೀಡಿದ ಮಾಹಿತಿ ಆಧಾರದ ಮೇಲೆ ಉದಯ್ ನನ್ನು ಬಂಧಿಸಲಾಗಿದೆ.
The Bangalore police have arrested a man and his accomplice for trying to kill his wife by ramming their car into her two-wheeler. The matter came to light more than seven months after the incident.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm