ಬ್ರೇಕಿಂಗ್ ನ್ಯೂಸ್
25-07-23 09:05 pm Mangalore Correspondent ಕ್ರೈಂ
ಮಂಗಳೂರು, ಜುಲೈ 25: ಡ್ರಗ್ಸ್ ವ್ಯಸನಕ್ಕೆ ಬಿದ್ದ ಯುವಕನೊಬ್ಬ ಹಣ ಕೊಡಲಿಲ್ಲ ಎಂಬ ನೆಪದಲ್ಲಿ ತನ್ನ ಅಜ್ಜ, ಅಜ್ಜಿಯನ್ನೇ ಕುತ್ತಿಗೆ ಸೀಳಿ ಕೊಲೆಗೈದಿದ್ದಲ್ಲದೆ, ಚಿನ್ನಾಭರಣ ದೋಚಿಕೊಂಡು ಮಂಗಳೂರಿನ ಜುವೆಲ್ಲರಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕಿಬಿದ್ದಿದ್ದಾನೆ.
ಕೇರಳದ ತೃಶ್ಶೂರು ಜಿಲ್ಲೆಯ ವೈಲತ್ತೂರಿನ ನಾಯರಂಗಾಡಿ ಗ್ರಾಮದಲ್ಲಿ ಜುಲೈ 23ರ ಭಾನುವಾರ ಬೆಳಗ್ಗೆ ಅಬ್ದುಲ್ಲ(75) ಮತ್ತು ಜಮೀಳಾ(64) ಎಂಬ ವೃದ್ಧ ದಂಪತಿಯ ಕೊಲೆಯಾಗಿತ್ತು. ಅವರ ಮನೆಯಲ್ಲೇ ವಾಸವಿದ್ದ ಮೊಮ್ಮಗ ಅಹ್ಮದ್ ಅಕ್ಮಲ್ ಈ ಕೃತ್ಯ ಎಸಗಿದ್ದಾನೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು. ಅಹ್ಮದ್ ಅಕ್ಮಲ್ ಕೊಲೆ ಕೃತ್ಯದ ಬಳಿಕ ನಾಪತ್ತೆಯಾಗಿದ್ದು ಈ ಶಂಕೆಗೆ ಪುಷ್ಟಿ ನೀಡಿತ್ತು. ಈ ನಡುವೆ, ಮಂಗಳೂರಿನ ರಥಬೀದಿಯ ಜುವೆಲ್ಲರಿ ಒಂದಕ್ಕೆ ಜುಲೈ 24ರಂದು ಯುವಕನೊಬ್ಬ ಚಿನ್ನಾಭರಣ ಮಾರಾಟಕ್ಕೆ ತಂದಿದ್ದ ಅನ್ನುವ ಮಾಹಿತಿ ಬಂದರು ಪೊಲೀಸರಿಗೆ ಲಭಿಸಿತ್ತು. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೇರಳದಲ್ಲಿ ಅಜ್ಜ- ಅಜ್ಜಿಯನ್ನು ಕೊಲೆಗೈದು ನಾಪತ್ತೆಯಾಗಿದ್ದ ಅಹ್ಮದ್ ಅಕ್ಮಲ್ (27) ಎನ್ನುವುದು ತಿಳಿದುಬಂದಿದೆ.
ಮಂಗಳೂರಿನ ಪೊಲೀಸರು ಆರೋಪಿ ಅಕ್ಮಲ್ ಬಳಿಯಿಂದ ಒಂದು ಚೂರಿ, ಒಂದು ಸ್ಕ್ರೂ ಡ್ರೈವರ್, ಮಂಗಳೂರು ಯುನಿವರ್ಸಿಟಿ ಹೆಸರಲ್ಲಿದ್ದ ಪದವಿ ಮಾರ್ಕ್ ಕಾರ್ಡ್, ಪಾಸ್ ಪೋರ್ಟ್, ಆಧಾರ್ ಕಾರ್ಡ್, ಸೌತ್ ಇಂಡಿಯನ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕಿನ ವೀಸಾ ಕಾರ್ಡ್, ಬಂಗಾರದ ಸರ, ಮೂರು ಜೊತೆ ಚಿನ್ನದ ಕಿವಿಯೋಲೆ, ಪೆಂಡೆಂಟ್ ಇದ್ದ ಮತ್ತೊಂದು ಚಿನ್ನದ ಸರ, ಐದು ಉಂಗುರ, ಎರಡು ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮಗಳ ಮಗುವನ್ನು ಸಾಕಿದ್ದ ಅಜ್ಜ- ಅಜ್ಜಿ
ಭಾನುವಾರ ಬೆಳಗ್ಗೆ ಅಬ್ದುಲ್ಲಾ – ಜಮೀಳಾ ದಂಪತಿ ಕೊಲೆಯಾಗಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ಪುತ್ರ ನೌಶಾದ್ ತಂದೆಯ ಮನೆಗೆ ಆಗಮಿಸಿದ್ದಾಗ ಮನೆಯ ಬಾಗಿಲು ಹಾಕಿತ್ತು. ಕಿಟಕಿ ಮೂಲಕ ನೋಡಿದಾಗ, ತಂದೆ- ತಾಯಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿರುವುದು ಪತ್ತೆಯಾಗಿತ್ತು. ಕೂಡಲೇ ಸಂಬಂಧಿಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎರಡಂತಸ್ತಿನ ಮನೆಯ ಮೆಟ್ಟಿಲಲ್ಲಿ ತಾಯಿ ಬಿದ್ದುಕೊಂಡಿದ್ದರೆ, ಕೆಳಗಿನ ಹಾಲ್ ನಲ್ಲಿ ವೃದ್ಧ ತಂದೆಯ ಶವ ಇತ್ತು. ಇಬ್ಬರದ್ದೂ ಕುತ್ತಿಗೆಯನ್ನು ಸೀಳಿ ಹಾಕಿದ್ದರಿಂದ ಮೇಲ್ನೋಟಕ್ಕೆ ಕೊಲೆ ಕೃತ್ಯ ಅನ್ನುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅಕ್ಮಲ್ ಅಹ್ಮದ್, ಅಬ್ದುಲ್ಲಾ ಅವರ ಮಗಳು ನಿಮಿತಾ ಅವರ ಮೊದಲ ಮದುವೆಯಲ್ಲಿ ಹುಟ್ಟಿದ ಮಗ. ಹಾಗಾಗಿ, ಅಕ್ಮಲ್ ಸಣ್ಣದಿದ್ದಾಗಲೇ ಆತನನ್ನು ಅಬ್ದುಲ್ಲಾ ದಂಪತಿ ಮನೆಗೆ ತಂದು ಸಾಕಿದ್ದರು.
ಮಂಗಳೂರಲ್ಲೇ ಅಂಟಿಕೊಂಡಿದ್ದ ಡ್ರಗ್ಸ್ ಚಟ
ಆದರೆ ಮಂಗಳೂರಿನಲ್ಲಿ ಪದವಿ ಕಾಲೇಜು ಸೇರಿದ್ದ ಬಳಿಕ ಅಕ್ಮಲ್ ವರ್ತನೆಯಲ್ಲಿ ಬದಲಾವಣೆ ಆಗಿತ್ತು. ಡಿಗ್ರಿ ಕಲಿಯುತ್ತಿದ್ದಾಗಲೇ ಡ್ರಗ್ಸ್ ವ್ಯಸನ ಅಂಟಿಸಿಕೊಂಡು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಪ್ರತಿ ಬಾರಿ ಹಣಕ್ಕಾಗಿ ಅಜ್ಜ- ಅಜ್ಜಿಯನ್ನೇ ಪೀಡಿಸುತ್ತಿದ್ದು ಮನೆಯಲ್ಲಿ ಅದೇ ಕಾರಣಕ್ಕೆ ಜಗಳ ಮಾಡುತ್ತಿದ್ದ. ಮಾನಸಿಕ ಸಮಸ್ಯೆ ಹೊಂದಿದ್ದಾನೆಂದು ಒಂದು ವರ್ಷದ ಹಿಂದೆ ಅಕ್ಮಲ್ ನನ್ನು ರಿಹ್ಯಾಬಿಲಿಟೇಶನ್ ಸೆಂಟರಿಗೆ ಹಾಕಲಾಗಿತ್ತು. ಮೂರು ತಿಂಗಳ ಹಿಂದಷ್ಟೇ ಕೌನ್ಸಿಲಿಂಗ್ ಕೇಂದ್ರದಿಂದ ಮರಳಿದ್ದ ಅಕ್ಮಲ್ ಸ್ಥಳೀಯ ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ಹೀಗಾಗಿ ಮಗ ಮತ್ತೆ ಸರಿ ಹೋಗಿದ್ದಾನೆಂದು ಮನೆಮಂದಿ ಅಂದ್ಕೊಂಡಿದ್ದರು. ಆದರೆ ಕೆಲವು ದಿನಗಳ ಬಳಿಕ ಅಕ್ಮಲ್ ಹಿಂದಿನ ರೀತಿಯಲ್ಲೇ ಮನೆಗೆ ಬಂದು ಗಲಾಟೆ ಮಾಡುವುದನ್ನು ಮುಂದುವರಿಸಿದ್ದ.
ತಾವೇ ಸಾಕಿದ್ದ ಮಗ ಹದ್ದಾಗಿ ಕುಕ್ಕಿಬಿಟ್ಟ!
ಇದರಿಂದಾಗಿ ಅಬ್ದುಲ್ಲಾ ಅವರ ಪುತ್ರ ನೌಶಾದ್ ಮೊನ್ನೆ ಶನಿವಾರ ತಂದೆಯ ಮನೆಗೆ ಬಂದು ತನ್ನ ಜೊತೆಗೆ ಬರುವಂತೆ ತಂದೆ, ತಾಯಿಗೆ ಹೇಳಿದ್ದಕು. ಆದರೆ ವೃದ್ಧ ದಂಪತಿ ತಾವು ಬಾಳಿ ಬದುಕಿದ್ದ ಮನೆ ಬಿಟ್ಟು ಬರಲು ಕೇಳಿರಲಿಲ್ಲ. ರಾತ್ರಿ ಚಿಂತೆಯಲ್ಲೇ ಮನೆಯಿಂದ ಮರಳಿದ್ದ ಮಗ ನೌಶಾದ್, ಭಾನುವಾರ ಬೆಳಗ್ಗೆ ಮತ್ತೆ ಬಂದಿದ್ದರು. ಆದರೆ, ಕೆಲವೇ ಗಂಟೆಗಳ ಅಂತರದಲ್ಲಿ ಹೆತ್ತವರು ಭೀಭತ್ಸವಾಗಿ ಕೊಲೆಯಾಗಿ ಹೋಗಿದ್ದರು. ಸಂಬಂಧಿಕರ ಪ್ರಕಾರ, ಅಕ್ಮಲ್ ಅಹ್ಮದ್ ಮಂಗಳೂರಿನಲ್ಲಿ ಪದವಿ ಕಲಿಯುತ್ತಿದ್ದಾಗಲೇ ಡ್ರಗ್ಸ್ ಚಟ ಅಂಟಿಸಿಕೊಂಡಿದ್ದು, ಡ್ರಗ್ಸ್ ಖರೀದಿಗೆ ಹಣ ಸಿಗದೇ ಇದ್ದಾಗ ವಿಚಿತ್ರವಾಗಿ ವರ್ತಿಸುತ್ತಿದ್ದ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತುಂಬ ಆಕ್ಟಿವ್ ಆಗಿರುತ್ತಿದ್ದ. ಅಲ್ಲದೆ, ತನ್ನದೇ ಡ್ಯಾನ್ಸಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಕೆಲವೇ ದಿನಗಳ ಹಿಂದೆ ಮಂಗಳೂರು ಯುನಿವರ್ಸಿಟಿಯಲ್ಲಿ ಪದವಿ ಕಂಪ್ಲೀಟ್ ಮಾಡಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದ. ಭಾನುವಾರ ಬೆಳಗ್ಗೆ ಕೊಲೆ ಕೃತ್ಯ ಬೆಳಕಿಗೆ ಬರುವುದಕ್ಕೂ ಕೆಲವೇ ಗಂಟೆಗಳ ಮೊದಲು ತಾನೇ ಹಾಡು ಹಾಡಿದ್ದನ್ನು ಪೋಸ್ಟ್ ಮಾಡಿದ್ದ. ಆದರೆ ಹಣ, ಚಿನ್ನಕ್ಕಾಗಿ ತನ್ನನ್ನು ಸಾಕಿದ್ದ ಅಜ್ಜ – ಅಜ್ಜಿಯನ್ನೇ ಭೀಕರವಾಗಿ ಕೊಲೆ ಮಾಡುವಷ್ಟರ ಮಟ್ಟಿಗೆ ಡ್ರಗ್ಸ್ ವ್ಯಸನ ಮಾಡಿರುವುದು ವಿಪರ್ಯಾಸ.
Drug addict murders grandparents loots gold who nurtured him in Kerala, caught by Mangalore Police, Gold recovered. In a heart-wrenching incident, a drug-addict brutally murdered his grandparents. Nayarangadi residents Abdulla (75) and his wife Jameela (64) were murdered by slitting their throats. Their daughter's son, Akhmal (26) was nabbed by the police.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm