ಬ್ರೇಕಿಂಗ್ ನ್ಯೂಸ್
27-07-23 08:36 pm HK News Desk ಕ್ರೈಂ
ಪುಣೆ, ಜುಲೈ 27: ಪಡೆದ ಸಾಲವನ್ನು ಮರಳಿಸದೆ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು, 47 ವರ್ಷದ ಸಾಲದಾತನೊಬ್ಬ ವ್ಯಕ್ತಿಯ ಎದುರೇ ಆತನ ಹೆಂಡತಿಯನ್ನು ಅತ್ಯಾಚಾರದ ಎಸಗಿದ ಅಮಾನುಷ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
34 ವರ್ಷದ ಮಹಿಳೆ ಮೇಲೆ ಭಯಾನಕ ಕೃತ್ಯವು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಹದಾಸ್ಪರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲೇವಾದೇವಿ ವಹಿವಾಟು ನಡೆಸುವ ಇಮ್ತಿಯಾಜ್ ಶೇಖ್ ಎಂಬ ವ್ಯಕ್ತಿಯಿಂದ ಸಂತ್ರಸ್ತೆಯ ಗಂಡ, ಫೆಬ್ರವರಿಯಲ್ಲಿ ಬಡ್ಡಿರಹಿತ 40 ಸಾವಿರ ರೂ ಹಣ ಸಾಲ ಪಡೆದಿದ್ದ. ಆದರೆ ಅದನ್ನು ಮರಳಿ ಪಾವತಿಸಲು ಆತನಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಶೇಖ್, ದಂಪತಿಯನ್ನು ಹಲವು ಬಾರಿ ಅವಾಚ್ಯವಾಗಿ ನಿಂದಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಲದ ಹಣ ವಾಪಸ್ ಕೇಳಿದರೂ, ಪಾವತಿಸದಿದ್ದರಿಂದ ಕೋಪಗೊಂಡಿದ್ದ ಆರೋಪಿ, ತನ್ನ ಕೃತ್ಯಕ್ಕೆ ಮೊದಲೇ ಸಂಚು ರೂಪಿಸಿದ್ದ. ಹದಾಸ್ಪುರ ಗವರ್ನ್‌ಮೆಂಟ್ ಕಾಲೊನಿಯಲ್ಲಿ ಯಾರೂ ಇಲ್ಲದ ಸ್ಥಳಕ್ಕೆ ದಂಪತಿಯನ್ನು ಕರೆಸಿಕೊಂಡಿದ್ದ ಶೇಖ್, ಬಾಕಿ ಉಳಿದ ಹಣ ವಾಪಸ್ ನೀಡುವಂತೆ ಆಗ್ರಹಿಸಿದ್ದ. ಅವರ ಬಳಿ ಹಣ ಇರಲಿಲ್ಲ. ತನ್ನ ಬಳಿ ಇದ್ದ ಚಾಕು ಹೊರಗೆ ತೆಗೆದಿದ್ದ ಶೇಖ್, ಸಂತ್ರಸ್ತೆಯ ಗಂಡನಿಗೆ ಚಾಕು ತೋರಿಸಿ ಬೆದರಿಸಿ, ಬಳಿಕ ಆತನ ಎದುರೇ ಮಹಿಳೆ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, ತನ್ನ ಅತ್ಯಾಚಾರದ ಕೃತ್ಯವನ್ನು ಆತ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದ. ಇದಾದ ಬಳಿಕವೂ ತನಗೆ ಲೈಂಗಿಕ ಸುಖ ನೀಡುವಂತೆ ಮಹಿಳೆಯನ್ನು ಪದೇ ಪದೇ ಪೀಡಿಸಲು ಆರಂಭಿಸಿದ್ದ. ಅದಕ್ಕೆ ಆಕೆ ನಿರಾಕರಿಸಿದ್ದಳು. ಇದರಿಂದ ಕುದ್ದು ಹೋಗಿದ್ದ ಆತ, ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ತಾನು ಚಿತ್ರೀಕರಿಸಿದ್ದ ವಿಡಿಯೋವನ್ನು ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
A 47-year-old moneylender in Maharashtra's Pune city allegedly raped a woman after her husband failed to repay the loan taken from him, police said today. The incident took place in February this year and the accused has been arrested, a police official said.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm