ಬ್ರೇಕಿಂಗ್ ನ್ಯೂಸ್
08-10-23 04:09 pm Bengaluru Correspondent ಕ್ರೈಂ
ಬೆಂಗಳೂರು, ಅ.8: ಬಿಟ್ ಕಾಯಿನ್ ಹಗರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಸಿಸಿಬಿಯ ನಾಲ್ವರು ಇನ್‌ಸ್ಪೆಕ್ಟರ್‌ಗಳು ಹಾಗೂ ಇಬ್ಬರು ಸೈಬರ್ ತಜ್ಞರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಸಿಬಿ ಪೊಲೀಸರು ಹಾಗೂ ಇತರರು, ಸಾಕ್ಷ್ಯ ನಾಶಪಡಿಸಿದ್ದರು. ಇದನ್ನು ಪತ್ತೆ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ಸಿಸಿಬಿ ಪೊಲೀಸರು ಹಾಗೂ ಇತರರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಇತ್ತೀಚೆಗೆ ಆಗಸ್ಟ್ 9ರಂದು ಎಫ್‌ಐಆರ್ ದಾಖಲಿಸಿದ್ದರು.
ಕಳೆದ ವಾರವಷ್ಟೇ ಪ್ರಕರಣ ಸಂಬಂಧಿಸಿ ಹರ್ವೀಂದ್ರ ಸಿಂಗ್, ನಿತಿನ್ ಮೆಶ್ರಾಮ್, ದರ್ಶಿತ್ ಪಟೇಲ್ ಎಂಬವರನ್ನು ಸಿಐಡಿ ತನಿಖಾ ತಂಡ ಬಂಧಿಸಿತ್ತು. ಸೈಬರ್ ಎಕ್ಸ್‌ಪರ್ಟ್ ಸಂತೋಷ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ಸಂತೋಷ್ ಕಚೇರಿಯಲ್ಲಿಯೇ ಶ್ರೀಕಿಯನ್ನು 20 ದಿನಗಳ ಕಾಲ ಇರಿಸಿಕೊಂಡು ಸಿಸಿಬಿಯ ಅಧಿಕಾರಿಗಳು ಸಾಕ್ಷ್ಯಗಳನ್ನೇ ನಾಶ ಪಡಿಸಿದ್ದರು ಎನ್ನುವ ಆರೋಪ ಇದೆ. ಹೀಗಾಗಿ ಆಡುಗೋಡಿಯಲ್ಲಿರುವ ಸಿಸಿಬಿಯ ಟೆಕ್ನಿಕಲ್ ಸೆಲ್, ಜೆಪಿ ನಗರದಲ್ಲಿರುವ ಗ್ರೂಪ್ ಸೈಬರ್ ಐಡಿ ಟೆಕ್ನಾಲಜಿ ಸಂಸ್ಥೆಯ ಕಚೇರಿ, ಜೆಪಿ ನಗರದಲ್ಲಿರುವ ಸೈಬರ್ ಸೇಫ್ ಸಂಸ್ಥೆಯ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.
ಸಾಕ್ಷ್ಯ ನಾಶ ಮಾಡಿರುವ ಆರೋಪಕ್ಕೀಡಾಗಿರುವ ಈ ಹಿಂದೆ ಸಿಸಿಬಿಯಲ್ಲಿ ಕೆಲಸ ಮಾಡಿದ್ದ ಇನ್‌ಸ್ಪೆಕ್ಟರ್‌ಗಳಾದ ಶ್ರೀಧರ್ ಪೂಜಾರ (ಹಾಲಿ ಡಿವೈಎಸ್‌ಪಿ), ಎಂ. ಪ್ರಶಾಂತ್ ಬಾಬು (ಹಾಲಿ ಇನ್‌ಸ್ಪೆಕ್ಟರ್, ಸಿಸಿಬಿ ತಾಂತ್ರಿಕ ಘಟಕ), ಲಕ್ಷ್ಮಿಕಾಂತಯ್ಯ ಹಾಗೂ ಚಂದ್ರಧರ್ (ಇತ್ತೀಚೆಗೆ ಹೊರ ಜಿಲ್ಲೆಗಳಿಗೆ ವರ್ಗಾವಣೆಯಾದವರು) ಮನೆಗಳಲ್ಲಿ ಶೋಧ ನಡೆಸಲಾಗಿದೆ. ಸಿಸಿಬಿ ಪೊಲೀಸರ ತನಿಖೆಗೆ ತಾಂತ್ರಿಕ ನೆರವು ನೀಡಿದ್ದ ಸೈಬರ್ ತಜ್ಞರಾದ ಸಂತೋಷ್ ಹಾಗೂ ಗಗನ್ ಮನೆ, ಕಚೇರಿಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನ 9 ಸ್ಥಳಗಳಲ್ಲಿ ಶನಿವಾರ ದಿನವಿಡೀ ಶೋಧ ನಡೆದಿದ್ದು ಆರೋಪಿತರಿಗೆ ಸಂಬಂಧಪಟ್ಟಿರುವ ನಾಲ್ಕು ಲ್ಯಾಪ್‌ಟಾಪ್, ಎಂಟು ಮೊಬೈಲ್, ಸ್ಟೋರೇಜ್ ಉಪಕರಣ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಅನುಮಾನ ಹುಟ್ಟಿಸಿದ ಲ್ಯಾಪ್‌ಟಾಪ್ ನಾಪತ್ತೆ ;
ಬಿಟ್ ಕಾಯಿನ್ ತನಿಖೆ ಸಲುವಾಗಿಯೇ ಸಿಸಿಬಿ ಅಧಿಕಾರಿಗಳು ಲ್ಯಾಪ್‌ಟಾಪ್ ಒಂದನ್ನು ಖರೀದಿಸಿದ್ದರು. ತನಿಖೆಗೆ ಸಂಬಂಧಿಸಿದ ಎಲ್ಲ ದಾಖಲೆ, ಸಾಕ್ಷ್ಯ, ಬಿಟ್ ಕಾಯಿನ್ ವರ್ಗಾವಣೆ ಇತ್ಯಾದಿ ವಿಚಾರಗಳನ್ನು ಅದರಲ್ಲಿ ಸಂಗ್ರಹಿಸಿಡಲಾಗಿತ್ತು. ಈ ವಿಷಯ ಎಸ್ಐಟಿ ತನಿಖೆಯಲ್ಲಿ ತಿಳಿದುಬಂದಿದ್ದರೂ, ಆ ಲ್ಯಾಪ್‌ಟಾಪ್ ಬಗ್ಗೆ ಸಿಸಿಬಿಯ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಇದೇ ವಿಚಾರದಲ್ಲಿ ಆಗಿನ ನಾಲ್ವರು ಸಿಸಿಬಿ ಇನ್ಸ್ ಪೆಕ್ಟರ್ ಗಳಿಗೆ ಮೂರು ಬಾರಿ ನೋಟೀಸ್ ನೀಡಲಾಗಿತ್ತು. ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಿದ್ದು ತನಿಖೆಗೆ ಸಹಕರಿಸಿರಲಿಲ್ಲ. ಹೀಗಾಗಿ ಅವರ ಮನೆಯಲ್ಲೇ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
The Special Investigation Team (SIT) of the CID probing the bitcoin case, led by ADGP Manish Kharbikar, on Saturday, conducted a series of raids on the houses of Central Crime Branch (CCB) officials and two people who allegedly fabricated the seized documents and accessed the e-wallets of the prime accused Sriki for personal gain.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am