ಬ್ರೇಕಿಂಗ್ ನ್ಯೂಸ್
08-10-23 04:24 pm Mangalore Correspondent ಕ್ರೈಂ
ಉಳ್ಳಾಲ, ಅ.8: ಜೇಬಲ್ಲಿ ಕವಡೆ ಕಾಸು ಇಲ್ಲದಿದ್ದರೂ ಕೊರಳಿಗೆ ಹೊಳೆಯುವ ಚೈನು, ಕೈಯಲ್ಲಿ ಐಫೋನ್ ಒಂದನ್ನ ಹಿಡಿದರೆ ಸಾಕು.. ಅದೆಲ್ಲ ಅಸಲಿಯೆಂದೇ ಗ್ರಹಿಸಿ ಎಂಥವರೂ ಯಾಮಾರುತ್ತಾರೆ ಎಂಬುದಕ್ಕೆ ತೊಕ್ಕೊಟ್ಟಿನಲ್ಲಿ ಶನಿವಾರ ರಾತ್ರಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಸ್ಸು ತಂಗುದಾಣದ ಬಳಿಯಿರುವ ಅಯ್ಯಂಗಾರ್ ಬೇಕರಿಗೆ ಗ್ರಾಹಕನ ಸೋಗಲ್ಲಿ ಬಂದ ಆಸಾಮಿಯೋರ್ವ ಬೇಕರಿ ಮಾಲೀಕನನ್ನ ಯಾಮಾರಿಸಿ ತುಪ್ಪ, ಸಿಹಿ ತಿಂಡಿಗಳನ್ನ ಸಾಲವಾಗಿ ಖರೀದಿಸಿದ್ದಲ್ಲದೆ, ರವೆ ಲಾಡನ್ನ ಎಗರಿಸಿದ್ದಾನೆ.

ಕೈಯಲ್ಲಿ ಎರಡೆರಡು ಬ್ರೇಸ್ ಲೇಟ್, ಕುತ್ತಿಗೆಯಲ್ಲಿ ದಪ್ಪದ ಎರಡು ಮೂರು ಚೈನ್ ಗಳನ್ನ ಧರಿಸಿ ಬೈಕಲ್ಲಿ ಬಂದಿದ್ದ ಮಧ್ಯ ವಯಸ್ಕ ವ್ಯಕ್ತಿ ಜಾಕೆಟ್ ಹಾಕಿ ಹೆಲ್ಮೆಟನ್ನೂ ತೆಗೆಯದೆ ಬೇಕರಿಯೊಳಗೆ ಸಣ್ಣ ಮೊಬೈಲಲ್ಲಿ ಯಾರಲ್ಲೋ ಮಾತನಾಡುತ್ತಿದ್ದಂತೆ ನಟಿಸಿ ಸುಮಾರು 1,400 ರೂಪಾಯಿಗಳ ತಿಂಡಿ, ತಿನಿಸುಗಳನ್ನ ಖರೀದಿಸಿದ್ದ. ತನ್ನ ಹೆಸರನ್ನು ನಿತಿನ್ ಶೆಟ್ಟಿ ಎಂದು ಬೇಕರಿ ಮಾಲಕ ನವೀನ್ ಅವರಲ್ಲಿ ಪರಿಚಯಿಸಿಕೊಂಡಿದ್ದಾನೆ. ತನ್ನಲ್ಲಿ ಕ್ಯಾಷ್ ಇಲ್ಲ, ಗೂಗಲ್ ಪೇ ಮಾಡಲು ಐಫೋನ್ ಆಫ್ ಆಗಿದೆ. ಈಗಲೇ ಹಣ ತಂದು ಕೊಡುವುದಾಗಿ ಹೇಳಿ ಮೊಬೈಲ್ ನಂಬರನ್ನ ನೀಡಿದ್ದಾನೆ. ಆಸಾಮಿಯನ್ನ ನಂಬಿದ ಮಾಲಕ ಸಿಹಿತಿಂಡಿಗಳನ್ನ ನೀಡಿದ್ದಾರೆ.


ಬೇಕರಿಯಿಂದ ಹೊರಟ ಆಸಾಮಿ ಪಕ್ಕದ ಸಣ್ಣ ದಿನಸಿ ಅಂಗಡಿಗೂ ಹೋಗಿದ್ದು ಮಾಲಕಿ ಪೂರ್ಣಿಮ ಅವರಲ್ಲಿ ತುಪ್ಪ, ತೆಂಗಿನಕಾಯಿ ಸೇರಿದಂತೆ 850 ರೂ. ದಿನಸಿ ಸಾಮಾನನ್ನು ಖರೀದಿಸಿದ್ದಾನೆ. ತನ್ನಲ್ಲಿದ್ದ 1,500 ರೂ. ಹಣವನ್ನ ಬೇಕರಿಗೆ ನೀಡಿದೆ. ಐಫೋನ್ ಆಫ್ ಆಗಿದೆ ಎಂದು ಹೇಳಿದ ಅಪರಿಚಿತ ವ್ಯಕ್ತಿ ಇಲ್ಲಿಯೂ ಮಾಲಕಿಯನ್ನ ಯಾಮಾರಿಸಿ ಮೊಬೈಲ್ ನಂಬರ್ ನೀಡಿ ಕಾಲ್ಕಿತ್ತಿದ್ದಾನೆ. ಅಪರಿಚಿತನ ಮೈಯಲ್ಲಿದ್ದ ಬಂಗಾರ, ಕೈಯಲ್ಲಿದ್ದ ಐಪೋನ್ ನಂಬಿ ಸಾಲ ನೀಡಿದ್ದ ಮಹಿಳೆ ಆತ ನೀಡಿದ್ದ ನಂಬರಿಗೆ ರಾತ್ರಿ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ತಕ್ಷಣ ಪಕ್ಕದ ಬೇಕರಿಗೆ ಬಂದು ಸಾಮಾನು ಖರೀದಿಸಿದ ವ್ಯಕ್ತಿ ಪರಿಚಯದವರೇ ಎಂದು ಮಾಲೀಕರಲ್ಲಿ ಕೇಳಿದಾಗ ಅಲ್ಲಿಯೂ ಯಾಮಾರಿಸಿದ ವಿಷಯ ತಿಳಿದುಬಂದಿತ್ತು. ಅಂಗಡಿ ಹಾಗೂ ಬೇಕರಿ ಮಾಲೀಕರಿಗೆ ತಾವು ಮೋಸ ಹೋಗಿರುವುದು ಮನವರಿಕೆ ಆಗಿದೆ.
ಬೇಕರಿಯ ಸಿಸಿಟಿವಿಯಲ್ಲಿ ಅಪರಿಚಿತ ವ್ಯಕ್ತಿ ರವೆ ಲಾಡು ಎಗರಿಸಿದ ದೃಶ್ಯ ರೆಕಾರ್ಡ್ ಆಗಿದ್ದು ಹೆಲ್ಮೆಟ್ ಧರಿಸಿದ್ದ ಕಾರಣ ಗುರುತು ಪತ್ತೆ ಕಷ್ಟವಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಲ್ಲಿ ವ್ಯವಹರಿಸುವಾಗ ಅಂಗಡಿ ಮಾಲೀಕರು ಜಾಗರೂಕರಾಗಿದ್ದರೆ ಒಳ್ಳೆಯದು ಎನ್ನುವ ಸಂದೇಶ ಇದರಿಂದ ಸಿಕ್ಕಿದೆ.
Ullal Bakery owner cheated by Man posing as rich man with iphone and gold of 1400 Rs in Mangalore.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
26-06-26 07:35 pm
HK News Staffer
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm