ಬ್ರೇಕಿಂಗ್ ನ್ಯೂಸ್
17-10-23 04:03 pm Mangalore Correspondent ಕ್ರೈಂ
ಉಳ್ಳಾಲ, ಅ.17: ಬಿಸಿ ರಕ್ತದಲ್ಲಿ ಮದ್ಯ, ಗಾಂಜಾ ಸೇದಿ ರೌಡಿಸಂ ನಡೆಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಮಾಜಿ ರೌಡಿ ಶೀಟರ್ ಓರ್ವ ಮನೆಯಲ್ಲಿ ಟಿ.ವಿ ನೋಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಸೇವಂತಿಗುಡ್ಡೆ ನಿವಾಸಿ ಶಮೀರ್ (41)ಆತ್ಮಹತ್ಯೆಗೈದ ವ್ಯಕ್ತಿ. ಶಮೀರ್ ಕ್ಯಾನ್ಸರ್ ನಿಂದ ಮೃತಪಟ್ಟ ನಟೋರಿಯಸ್ ರೌಡಿ ಶಬರಿಯ ಸಹಚರನಾಗಿದ್ದು ಉಳ್ಳಾಲ ಠಾಣೆಯಲ್ಲಿ ಹಳೆಯ ರೌಡಿ ಶೀಟರ್ ಆಗಿದ್ದ. ಗಾಂಜಾ, ಮದ್ಯ ವ್ಯಸನಿಯಾಗಿದ್ದ ಶಮೀರ್ ಜೀವನ ನಿರ್ವಹಣೆಗೆ ಇತ್ತೀಚಿಗೆ ಆಟೋ ರಿಕ್ಷಾ ಚಲಾಯಿಸುತ್ತಿದ್ದು ತೊಕ್ಕೊಟ್ಟಿನ ಒಳಪೇಟೆಯ ರಿಕ್ಷಾ ಪಾರ್ಕಲ್ಲಿ ದುಡಿಯುತ್ತಿದ್ದ.
ನಿನ್ನೆ ಸಂಜೆ ಒಳಪೇಟೆಯ ರಿಕ್ಷಾ ಚಾಲಕರಲ್ಲಿ ಗಲಾಟೆ ನಡೆಸಿದ್ದ ಶಮೀರ್ ಯಾರೊಬ್ಬರಿಗೂ ಪಾರ್ಕಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡಲು ಬಿಡುವುದಿಲ್ಲವೆಂದು ಆವಾಝ್ ಹಾಕಿದ್ದನಂತೆ.

ಶಮೀರನ ತಾಯಿ ಒಂದು ತಿಂಗಳ ಹಿಂದಷ್ಟೆ ಮೃತಪಟ್ಟಿದ್ದರಂತೆ. ಮೂರು ದಿನಗಳ ಹಿಂದಷ್ಟೆ ಶಮೀರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ರಿಕ್ಷಾದ ಲೋನ್ ಬಾಕಿಯಿದ್ದು ಬ್ಯಾಂಕಿನ ಸೀಝರ್ ಗಳು ದಿನ ನಿತ್ಯವೂ ಶಮೀರ್ ಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರಂತೆ. ಮೃತ ಶಮೀರ್ ಗೆ ಎರಡು ಹೆಣ್ಣು, ಒಂದು ಗಂಡು ಮಕ್ಕಳಿದ್ದು ಪತ್ನಿಯೂ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎನ್ನಲಾಗಿದೆ. ನವರಾತ್ರಿ ರಜೆ ಸಿಕ್ಕ ಕಾರಣ ಪತ್ನಿ , ಮಕ್ಕಳು ತವರು ಸೇರಿದ್ದು,ಇಂದು ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಶಮೀರ್ ಟಿ.ವಿ ನೋಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಯೌವನದಲ್ಲಿ ಮದ್ಯ ,ಗಾಂಜಾದ ಅಮಲಿನಲ್ಲಿ ಉಳ್ಳಾಲದಲ್ಲಿ ಪುಡಿ ರೌಡಿಗಳಾಗಿ ಅಟ್ಟಹಾಸ ಮೆರೆದಿದ್ದ ಶಬರಿ, ಶಮೀರ್ ಇಬ್ಬರೂ ಅಕಾಲಿಕ ಸಾವು ಕಂಡಿದ್ದು ವಿಪರ್ಯಾಸ.
Mangalore 41 year old rowdy sheeter Shameer commits suicide at his house in Ullal.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 07:06 pm
Mangaluru Staffer
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm