ಬ್ರೇಕಿಂಗ್ ನ್ಯೂಸ್
24-10-23 06:22 pm Mangalore Correspondent ಕ್ರೈಂ
ಬಂಟ್ವಾಳ, ಅ.24: ಕೆಲಸದ ಆಳುವಿನ ಬಗ್ಗೆ ಇರಿಸಿದ್ದ ಅತಿಯಾದ ನಂಬಿಕೆಯೇ ಮಾಲಕನಿಗೆ ಮುಳುವಾಗಿದೆ. ಬಿಲ್ಡರ್ ಆಗಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಲಕ್ಷಾಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಸಂಸ್ಥೆಯ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27,50,000 ರೂ. ನಗದು ಹಾಗೂ 4,96,000 ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಝಫರುಲ್ಲಾ ತಿಳಿಸಿದ್ದಾರೆ.
ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಜೊತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಸೇರಿಕೊಂಡಿದ್ದ ಮಂಜೇಶ್ವರ ಮೂಲದ ಆಲಿ ಎಂಬಾತನ ಬಗ್ಗೆ ಸಂಶಯ ಉಂಟಾಗಿದೆ. ಆಲಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ದು, ಮಾಲಕರ ವಿಶ್ವಾಸ ಗಳಿಸಿ ಮನೆಗೇ ಬಂದು ಹೋಗುತ್ತಿದ್ದ. ಅಲ್ಲದೆ, ಝಫರುಲ್ಲಾ ಅವರ ಸಹಾಯಕನಾಗಿ ದುಡಿಯುತ್ತಿದ್ದ. ಹೀಗಾಗಿ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸವೇ ಮಾಲಕರಿಗೆ ಮುಳುವಾಗಿ ಪರಿಣಮಿಸಿದೆ.
ಅ.18 ರಂದು ಮನೆ ಮಂದಿ ಎಲ್ಲರೂ ಮನೆಗೆ ಬೀಗ ಹಾಕಿ ಮಂಗಳೂರಿನ ಜಪ್ಪುವಿನ ತಮ್ಮನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿದ ನಂತರ, ತನ್ನ ವಿಶ್ವಾಸದ ಕೆಲಸದಾಳು ಬಳಿ ಕೀಯನ್ನು ನೀಡಿದ್ದರು. ಮರುದಿನ 19ರಂದು ಕಟ್ಟಡ ಕಾಮಗಾರಿ ವಿಚಾರಕ್ಕೆ ಮಾಲಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು.
ಆದರೆ ಈ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಅ.20 ರಂದು ಅಗತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.
ಕೆಲಸದ ಒತ್ತಡದ ನಡುವೆ ಅ.23 ರಂದು ಊರಿಗೆ ವಾಪಾಸು ಆಗಿದ್ದು ರಾತ್ರಿ ಸುಮಾರು 8 ಗಂಟೆಗೆ ಕೋಡಿಮಜಲಿನ ಮನೆಗೆ ಬಂದಿದ್ದರು. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಲಿ ಫೋನ್ ಆಫ್ ಆಗಿಯೇ ಇತ್ತು. ಸಂಶಯದಿಂದ ಮನೆಯ ಹಿಂಬದಿಯ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿತ್ತು, ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತ್ತು.
ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿದ್ದು ಪೋಲೀಸರ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಿದ್ದ ರೂ. 25 ಲಕ್ಷ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಿದ್ದ ರೂ.2,50,000 ಹಾಗೂ 4,96,000 ರೂ. ಮೌಲ್ಯದ 24 ಗ್ರಾಂ ತೂಕದ ಬ್ರಾಸ್ಲೆಟ್, 16 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಬಲೆಗಳು, 8 ಗ್ರಾಂ ತೂಕದ ಚಿನ್ನದ ಬೆಂಡೋಲೆ, 32 ಗ್ರಾಂ ತೂಕದ ಚಿನ್ನದ ಮಾಲೆ, 4 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Mangalore Bantwal Builder house robbery by servant, 27 lakhs worth gold robbed. Also cash of 4 lakhs cash robbed.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm