ಬ್ರೇಕಿಂಗ್ ನ್ಯೂಸ್
26-10-23 10:34 pm Mangalore Correspondent ಕ್ರೈಂ
ಉಳ್ಳಾಲ, ಅ.26: ಮಧ್ಯರಾತ್ರಿ ಮನೆಯ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿದ ಗಾಂಜಾ ವ್ಯಸನಿಯೋರ್ವ ಮಂಚದಲ್ಲಿ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ಮಹಿಳೆಗೆ ಲೈಂಗಿಕ ಕೀಟಲೆ ಕೊಟ್ಟಿದ್ದು ಕೂಡಲೇ ಎಚ್ಚೆತ್ತ ಮನೆಮಂದಿಯ ಚೀರಾಟಕ್ಕೆ ಆಗಂತುಕ ಮೊಬೈಲನ್ನೇ ಬಿಟ್ಟೋಡಿದ ಘಟನೆ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಹರೇಕಳ ಗ್ರಾಮದ ಕೊಜಪಾಡಿ ನಿವಾಸಿ ನೌಫಾಲ್(32)ಎಂಬಾತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ಅತ್ಯಾಚಾರ ಯತ್ನ ಆರೋಪದಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಹರೇಕಳದ ರಾಜಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಗಂಡ, ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದಾರೆ. ಗಂಡ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ವೃತ್ತಿಗೆ ತೆರಳಿದ್ದು ಮನೆಯೊಳಗೆ ಸಂತ್ರಸ್ತ ಮಹಿಳೆ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ನೌಫಾಲ್ ಮಂಚದ ಕೆಳಗೆ ಮಲಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಎಚ್ಚೆತ್ತ ಮಹಿಳೆ ಮತ್ತು ಮಕ್ಕಳು ಜೋರಾಗಿ ಚೀರಾಡಿದ್ದು ಗಲಿಬಿಲಿಗೊಂಡ ನೌಫಾಲ್ ತನ್ನ ಮೊಬೈಲನ್ನೇ ಬಿಟ್ಟು ಓಡಿದ್ದಾನೆ. ಮಧ್ಯರಾತ್ರಿಯೇ ಘಟನಾ ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆಗೊಂಡಿದ್ದು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗುರುವಾರ ಆರೋಪಿ ನೌಫಾಲನ್ನ ಬಂಧಿಸಿದ್ದಾರೆ.
ವರಸೆ ತಪ್ಪಿಸುವ ಕೊಣಾಜೆ ಪೊಲೀಸರು
ಕೊಣಾಜೆ ಪೊಲೀಸರು ಪ್ರತಿ ಅಪರಾಧ ಪ್ರಕರಣಗಳಲ್ಲೂ ನುಣುಚಿಕೊಳ್ಳುವುದರಲ್ಲಿ ತಂಬಾನೇ ನಿಸ್ಸೀಮರು. ಇಂದು ಮಧ್ಯಾಹ್ನದ ನಂತರ ಘಟನೆ ಬಗ್ಗೆ ಪೊಲೀಸರಲ್ಲಿ ಹೆಡ್ ಲೈನ್ ಕರ್ನಾಟಕ ವರದಿಗಾರ ಮಾಹಿತಿ ಕೇಳಿದಾಗ, ಅದು ಕಳ್ಳತನ ಕೇಸ್, ಅಪರಾಧಿ ಸ್ವಲ್ಪ ಕುಡುಕ ಎಂದು ನುಣ್ಣಗೆ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ. ನಂತರ ಮಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ವಿಚಾರಿಸಿದಾಗ ಅಸಲಿಯತ್ತು ತಿಳಿಸಿದ್ದಾರೆ.
In a shocking incident, a ganja addict, who broke into his house in the middle of the night, sexually harassed a woman who was sleeping on a cot with her two daughters and threw away her mobile phone at Rajagudde in Harekala village on Wednesday night.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm