Bangalore Crime, Cyber, Roopa Iyer: ಸೆಲೆಬ್ರಿಟಿಗಳಿಗೆ ಸುತ್ತಿಕೊಂಡ ಆನ್‌ಲೈನ್‌ ಕಳ್ಳರ ಕಾಟ ; ಅಧಿಕಾರಿಗಳ ಹೆಸ್ರಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಡಿಮ್ಯಾಂಡ್, ಅರೆಸ್ಟ್ ಮಾಡುವುದಾಗಿ ಧಮ್ಕಿ , ಸೈಬರ್ ಠಾಣೆಗೆ ಓಡಿ ಹೋದ ನಿರ್ದೇಶಕಿ

10-05-24 05:04 pm       Bangalore Correspondent   ಕ್ರೈಂ

ಸೈಬರ್‌ ಕ್ರೈಮ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಲ್ಯಾಕ್‌ ಮೇಲ್‌, ವಿಶೇಷ ಕೊಡುಗೆ, ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ಅಪರಾಧಿಗಳು ಹಣ ದೋಚುವ ಅದೆಷ್ಟೋ ಪ್ರಸಂಗಗಳು ವರದಿಯಾಗುತ್ತಿವೆ.

ಬೆಂಗಳೂರು, ಮೇ.10: ಸೈಬರ್‌ ಕ್ರೈಮ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಲ್ಯಾಕ್‌ ಮೇಲ್‌, ವಿಶೇಷ ಕೊಡುಗೆ, ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ಅಪರಾಧಿಗಳು ಹಣ ದೋಚುವ ಅದೆಷ್ಟೋ ಪ್ರಸಂಗಗಳು ವರದಿಯಾಗುತ್ತಿವೆ. ಪೊಲೀಸರು ಎಷ್ಟು ಕ್ರಮ ಕೈಗೊಂಡರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದೀಗ ಸ್ಯಾಂಡಲ್‌ವುಡ್‌ ನಿರ್ದೇಶಕಿ, ನಟಿ ರೂಪಾ ಅಯ್ಯರ್ ಅವರಿಗೂ ಇಂತಹದ್ದೇ ಅನುಭವವಾಗಿದೆ.

ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಅಪರಾಧಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಎಚ್ಚೆತ್ತ ರೂಪಾ ಅಯ್ಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ, ಮೇ 8 ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆ ತನಕವೂ ತಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

A cyber crime in Bengaluru reveals links to over 5,000 cases reported from  across India

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿ ಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ವಂಚಕರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಅಯ್ಯರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ʼʼಬುಧವಾರ ಮಧ್ಯಾಹ್ನ ಅಪರಿಚಿತ ನಂಬರ್‌ನಿಂದ ಕರೆ ಬಂತು. ತಾವು ಸಿಸಿಬಿ ಅಧಿಕಾರಿಗಳೆಂದು ಕರೆ ಮಾಡಿದ್ದವರು ತಿಳಿಸಿದರು. ಗಾಬರಿಯಿಂದ ಯಾಕೆಂದು ಪ್ರಶ್ನಿಸಿದೆ. ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರಿದೆ. ಹೀಗಾಗಿ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ 247 ಮಂದಿಯನ್ನು ಗುರುತಿಸಲಾಗಿದೆ. ಈ ಪೈಕಿ ನೀವು ಕೂಡ ಒಬ್ಬರು. ನಿಮ್ಮ ಆಧಾರ್‌ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರ ಮೂಲಕ ದೇಶದ್ರೋಹದ ಚಟುವಟಿಕೆ ನಡೆಸಲಾಗಿದೆ. ಈಗಾಗಲೇ ಈ ಕುರಿತು ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕರೆ ಮಾಡಿದ್ದವರು ಹೆದರಿಸಿದ್ದರು. ಇದರಿಂದ ಗಾಬರಿಯಾಯಿತುʼʼ ಎಂದು ರೂಪಾ ಘಟನೆಯ ವಿವರ ನೀಡಿದ್ದಾರೆ.

ನೀವು ಸೆಲೆಬ್ರಿಟಿ ಆಗಿರುವುದರಿಂದ ನಾವು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಒಂದು ವೇಳೆ ಈ ಪ್ರಕರಣದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದಾದರೆ 30 ಲಕ್ಷ ರೂ. ನೀಡಿ ಎಂದು ಕರೆ ಮಾಡಿದ್ದವರು ಹೇಳಿದರು. ಯಾವಾಗ ಅವರು ಹಣದ ಬೇಡಿಕೆ ಇಟ್ಟರೋ ಆಗ ಅನುಮಾನ ಶುರುವಾಯ್ತು. ಕೂಡಲೇ ಎಚ್ಚೆತ್ತು ಸೈಬರ್ ಕ್ರೈಂಗೆ ದೂರು ನೀಡಿದೆ.

ʼಆನ್‌ಲೈನ್ ವಂಚಕರು ಪ್ರಭಾವಿಗಳನ್ನು ಯಾಮಾರಿಸಿ ಹಣ ದೋಚಲು ಮುಂದಾಗಿದ್ದಾರೆ. ವಂಚಕರು ನನ್ನನ್ನು ನಂಬಿಸಲು ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕೂಡ ಕಳುಹಿಸಿದ್ದಾರೆ. ಒಂದು ವೇಳೆ ಅವರ ಮಾತನ್ನು ನಂಬಿದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗಿತ್ತುʼʼ ಎಂದು ರೂಪಾ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಇಂತಹ ಕರೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳು ಸಾವರ್ಜನಿಕರು, ಸೆಲೆಬ್ರಿಟಿಗಳಲ್ಲಿ ಮನವಿ ಮಾಡಿದ್ದಾರೆ.

The number of cyber crime is increasing day by day. There are so many incidents of black mail, special offer, criminals calling in the name of officials and extorting money. No matter how many steps the police take, they are unable to curb this. Now Sandalwood director and actress Roopa Iyer also has a similar experience. Criminals called in the guise of officials and demanded money. Roopa Iyer immediately woke up and filed a complaint with the police. He said that he was digitally arrested from Wednesday (May 8) afternoon till Thursday morning.