Cyber crime news, Hassan DySP P K Muralidhar: ಹಾಸನದ ಹಿರಿಯ ಪೊಲೀಸ್ ಅಧಿಕಾರಿಗೆ ಚಳ್ಳೆ ಹಣ್ಣು ತಿನ್ನಿಸಿದ ಸೈಬರ್ ಖದೀಮರು ; ಡಿವೈಎಸ್‌ಪಿ ಅಕೌಂಟ್ ನಿಂದ 15 ಲಕ್ಷ ರೂ. ಎಗರಿಸಿದ ಕಳ್ಳರು, ಶಾಕ್ ಆದ ಸೈಬರ್ ಪೊಲೀಸ್ ಸಿಬ್ಬಂದಿಗಳು !

22-05-24 04:36 pm       HK News Desk   ಕ್ರೈಂ

ಸಿನಿಮೀಯ ರೀತಿಯಲ್ಲಿ ಹಾಸನದ ಡಿವೈಎಸ್‌ಪಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಘಟನೆ ನಡೆದಿದೆ.

ಹಾಸನ, ಮೇ 22: ಸಿನಿಮೀಯ ರೀತಿಯಲ್ಲಿ ಹಾಸನದ ಡಿವೈಎಸ್‌ಪಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು 15 ಲಕ್ಷಕ್ಕೂ ಅಧಿಕ ಹಣ ಎಗರಿಸಿರುವ ಘಟನೆ ನಡೆದಿದೆ.

ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ.ಕೆ.ಮುರಳೀಧರ್ ಅವರ ಖಾತೆಯಿಂದಲೇ 15,98,761 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಈ ಸಂಬಂಧ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಗೆ ಮುರಳೀಧರ್ ಅವರು ದೂರು ನೀಡಿದ್ದಾರೆ.

ಮಡಿಕೇರಿಯ ಕೆನರಾ ಬ್ಯಾಂಕ್ ಬ್ರಾಂಚ್ ಹಾಗೂ ಭಾಗಮಂಡಲದ ಕೆನರಾಬ್ಯಾಂಕ್‌ನ ಬ್ಯಾಂಕ್ ಗಳಲ್ಲಿ  ಮುರಳೀಧರ್ ಅಕೌಂಟ್ ಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1:30ರ ವೇಳೆಗೆ ಡಿವೈಎಸ್‌ಪಿ ಅವರ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್‌ಗಳು ಬಂದಿವೆ. ಇದಾದ ನಂತರ ತಮ್ಮ ಗಮನಕ್ಕೇ ಬಾರದೇ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.

ಮಡಿಕೇರಿ ಅಕೌಂಟ್ ನಿಂದ 12,10,711 ರೂ. ಹಾಗೂ ಭಾಗಮಂಡಲದ ಅಕೌಂಟ್ ನಿಂದ 3,88,050 ರೂ. ಸೇರಿದಂತೆ ಒಟ್ಟು 15,98,761 ರೂ. ಅನ್ನು ಅಪರಿಚಿತ ಬ್ಯಾಂಕ್ ಖಾತೆಗಳಿಗೆ ಟ್ರಾನ್ಸ್‌ಫರ್ ಮಾಡಲಾಗಿದೆ.

ಸದ್ಯ ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ಡಿವೈಎಸ್‌ಪಿ ಮುರುಳಿಧರ್ ದೂರು ನೀಡಿದ್ದಾರೆ. ಏನೋ ಸಾಹೇಬ್ರು ಸ್ಟೇಷನ್ ವಿಸಿಟ್ ಗೆ ಬಂದಿರಬಹುದು ಅನ್ಕೊಂಡ ಸೈಬರ್ ಸಿಬ್ಬಂದಿಗಳು ಅಧಿಕಾರಿಯೇ ಸ್ವತಃ ಹಣ ಕಳ್ಕೊಂಡ ವಿಷಯ ಕೇಳಿ ಬೆಚ್ಚಿಬಿದ್ದಿದ್ದಾರೆ.

Hassan Miscreants allegedly hacked bank accounts of Hassan DySP P K Muralidhar. Miscreants allegedly hacked the bank accounts of Hassan sub-division DySP P K Muralidhar and transferred Rs 15.98 lakh to various accounts.