ಬ್ರೇಕಿಂಗ್ ನ್ಯೂಸ್
23-05-24 02:39 pm Richard, HK NEWS ಕ್ರೈಂ
ಬೆಂಗಳೂರು ಮೇ 23: ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಭಾನುವಾರ, ಮೇ 19 ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣ ತನಿಖೆಯಲ್ಲಿ 86 ಜನರು ಡ್ರಗ್ಸ್ ಸೇವಿಸಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ.
ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಟಾಲಿವುಡ್ ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ 101 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ ಸೇರಿದಂತೆ 86 ಜನರು ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ
.
ನಟಿ ಹೇಮಾ ಬೆಂಗಳೂರು ರೇವ್ ಪಾರ್ಟಿಗೆ ಬಂದು ಡ್ರಗ್ಸ್ ಸೇವನೆ ಮಾಡಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದ್ದಳು. ಆದರೆ, ಇದು ಡ್ರಗ್ಸ್ ಪಾರ್ಟಿ ಎಂದು ಖಚಿತಪಡಿಸಿಕೊಂಡ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುತ್ತಿದ್ದಂತೆಯೇ, ತಾನು ರೇವ್ ಪಾರ್ಟಿಯಲ್ಲಿಲ್ಲ ಎಂದು ವಿಡಿಯೋ ಮಾಡಿ ಪೊಲೀಸರನ್ನು ಹಾಗೂ ಮಾಧ್ಯಮದವರನ್ನು ಯಾಮಾರಿಸಿದ್ದಳು. ಆದರೆ, ಪೊಲೀಸರು ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಈಗ ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರುವುದು ಕನ್ಫರ್ಮ್ ಆಗಿದೆ.
ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ಡ್ರಗ್ಸ್ ಹಂಚಲಾಗಿತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ರೇವ್‌ಪಾರ್ಟಿಯಲ್ಲಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದ ಆಂಧ್ರದ ವಿಜಯವಾಡ ಮೂಲದ ಡಿ. ನಾಗಬಾಬು (32), ರಣಧೀರ್ ಬಾಬು (43) ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಈ ಬೆನ್ನಲ್ಲೇ ರೇವ್‌ಪಾರ್ಟಿ ಆಳ-ಅಗಲ ಬಗೆಯಲು ಸಿಸಿಬಿ ತನಿಖೆ ಮುಂದುವರಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಿಬ್ಬರೂ ಕೊಕೇನ್, ಎಂಡಿಎಂಎ, ಹೈಡ್ರೊ ಗಾಂಜಾವನ್ನು ಪಾರ್ಟಿ ಸಲುವಾಗಿಯೇ ತಂದಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ, ಯುವತಿಯರಿಗೂ ಸರಬರಾಜು ಮಾಡಲಾಗಿತ್ತು ಎಂಬುದು ಗೊತ್ತಾಗಿದೆ. ಮೇಲ್ನೋಟಕ್ಕೆ ಪಾರ್ಟಿಯಲ್ಲಿ ಭಾಗಿಯಾಗಿದ್ದ 30 ಮಂದಿ ಮಹಿಳೆಯರು, 68 ಮಂದಿ ಪುರುಷರೂ ಮಾದಕ ವಸ್ತು ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿಯೇ, ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಡ್ರಗ್ಸ್ ಸೇವನೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
500 ರೂ ನೋಟಲ್ಲಿ ಕೊಕೇನ್ ಎಳೆದರು;
ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಕೆಲವರು ಕೊಕೇನ್, ಎಂಡಿಎಂಎ ಕ್ರಿಸ್ಟಲ್ ಅನ್ನು ಹಣದ ನೋಟಿನಲ್ಲಿ ಸುರಿದುಕೊಂಡು ಮೂಗಿಗೆ ಎಳೆದಿದ್ದರು. ಕೆಲವರು ಕಾಗದದ ಮೇಲೆ ಸುರಿದುಕೊಂಡು ಸೇವನೆ ಮಾಡಿಕೊಂಡಿದ್ದರು. ಎಂಡಿಎಂ ಪಿಲ್ಸ್ ಹಾಗೂ ಹೈಡ್ರೊ ಗಾಂಜಾ ಕೂಡ ಸೇವನೆ ಮಾಡಿದ್ದರು.
ಆರೋಪಿಗಳಾದ ನಾಗಬಾಬು ಹಾಗೂ ರಣಧೀರ್ ಬಾಬು ಬಳಿ ಹಾಗೂ ಮತ್ತೊಬ್ಬ ಆರೋಪಿ ಮೊಹಮದ್ ಅಬೂಬಕರ್ ಸಿದ್ದಿಕಿ ಕಾರಿನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಆರೋಪಿಗಳಿಂದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೇನ್, 6 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಎಷ್ಟು ಪ್ರಮಾಣದಲ್ಲಿ ಡ್ರಗ್ಸ್ ತರಿಸಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ಉದ್ಯಮಿ ವಾಸು ಬರ್ತ್ ಡೇ ಪಾರ್ಟಿಯನ್ನು ಸ್ನೇಹಿತ ಅರುಣ್‌ಕುಮಾರ್ 'ಸನ್‌ಸೆಟ್ ಟು ಸನ್‌ರೈಸ್' ಹೆಸರಲ್ಲಿಆಯೋಜಿಸಿದ್ದ. ಇಬ್ಬರಿಗೂ ನಟಿ ಹೇಮಾ ಪರಿಚಯವಿದ್ದರು. ಇವರ ಆಹ್ವಾನದ ಮೇರೆಗೆ ನಟಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಉಳಿದ ಮೂವರು ಆರೋಪಿಗಳು ಡ್ರಗ್ಸ್ ಪೂರೈಕೆ ಮಾಡಿ ಪಾರ್ಟಿಯಲ್ಲಿದ್ದವರಿಗೆ ಹಂಚಿದ್ದರು. ಅವರೂ ಸೇವನೆ ಮಾಡಿದ್ದರು. ಜಿ ಆರ್ ಫಾರ್ಮ್ ಮಾಲೀಕ ಗೋಪಾಲ ರೆಡ್ಡಿ ಅವರನ್ನು ಕೇಳಿಯೇ ಪಾರ್ಟಿ ನಡೆಸಿದ್ದೆವು ಎಂದು ಆರೋಪಿ ವಾಸು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
Tollywood Actress Hema was at the Rave Party in Bangalore, drugs test turns positive. The event, reportedly very expensive, had over 100 attendees and had no public representatives, according to the commissioner. Dayanand also stated that the event was named "Sunset to Sunrise". Five people have been arrested so far.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 02:36 pm
Mangalore Correspondent
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Ronald Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm