ಬ್ರೇಕಿಂಗ್ ನ್ಯೂಸ್
24-05-24 06:06 pm Richard, HK News ಕ್ರೈಂ
ಬೆಂಗಳೂರು, ಮೇ.24: ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪಿಯುಸಿ ವಿದ್ಯಾರ್ಥಿನಿ ಪ್ರಬುದ್ಧ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮನೆಯ ಬಾತ್ ರೂಂನಲ್ಲಿ 21 ವರ್ಷದ ಪ್ರಬುದ್ಧ ಕುತ್ತಿಗೆ ಕೊಯ್ದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಳು. ಈ ಅನುಮಾನಾಸ್ಪದ ಸಾವಿನ ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸಿದ್ದು ಕೊಲೆಗಾರನನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಪ್ರಬುದ್ಧ ಕೊಲೆಗೆ ಕಾರಣವಾಗಿದ್ದು ಎರಡು ಸಾವಿರ ರೂಪಾಯಿಗೆ ಶುರುವಾದ ಜಗಳ ಎನ್ನಲಾಗಿದೆ. ಪ್ರಬುದ್ಧ ಹಾಗೂ ಅಪ್ರಾಪ್ತನ ಮಧ್ಯೆ 2 ಸಾವಿರ ರೂಪಾಯಿಗೆ ಸಂಬಂಧಿಸಿದಂತೆ ನಡೆದ ಕಿರಿಕ್ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅವರು ಪ್ರಬುದ್ಧ ಕೊಲೆ ಪ್ರಕರಣದ ಬಗ್ಗೆ ಈ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ 15 ರಂದು 20 ವರ್ಷದ ಯುವತಿ ಕೊಲೆಯಾಗಿತ್ತು. ಕೊಲೆ ಮಾಡಿದ ಅಪ್ರಾಪ್ತ ಬೇರೆ ಯಾರೂ ಅಲ್ಲ. ಪ್ರಬುದ್ಧಳ ತಮ್ಮನ ಸ್ನೇಹಿತ. ಈತ ಆಗಾಗ ಮನೆಗೆ ಬರುತ್ತಿದ್ದ. ಅಪ್ರಾಪ್ತ ತನ್ನ ಸ್ನೇಹಿತರ ಜೊತೆ ಆಟವಾಡುವಾಗ ಕನ್ನಡಕ ಒಂದನ್ನ ಮುರಿದಿದ್ದ. ಆ ಸ್ನೇಹಿತ ಕನ್ನಡಕವನ್ನು ರಿಪೇರಿ ಮಾಡಿಸು ಎಂದು ಪಟ್ಟು ಹಿಡಿದಿದ್ದ.
ಪ್ರಬುದ್ಧ ಮನೆಗೆ ಬಂದಿದ್ದ ಅಪ್ರಾಪ್ತನು ಪ್ರಬುದ್ಧ ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದ. ಹಣವನ್ನು ಕದಿಯುವಾಗ ಯುವತಿ ನೋಡಿದ್ದು ಪ್ರಶ್ನೆ ಮಾಡಿದ್ದಳು. ಎರಡು ದಿನ ಬಿಟ್ಟು ಹಣವನ್ನು ಯುವತಿ ಅಪ್ರಾಪ್ತನ ಬಳಿ ಕೇಳುತ್ತಾಳೆ. ಅದಕ್ಕೆ ಮನೆಗೆ ಪೋಷಕರ ಬಳಿ ಹೇಳದಂತೆ ಯುವತಿಗೆ ಮನವಿ ಮಾಡಿದ್ದ.
ಈ ವೇಳೆ ಕ್ಷಮಿಸಿಬಿಡು ಅಂತ ಅಪ್ರಾಪ್ತ ಕಾಲು ಹಿಡಿದುಕೊಂಡು ಬೇಡಿಕೊಂಡಿದ್ದ. ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಾಳೆ. ಆಗ ಪ್ರಬುದ್ಧ ತಲೆಗೆ ಪೆಟ್ಟು ಬಿದ್ದು ಮೂರ್ಛೆ ಹೋಗಿದ್ದಾಳೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಬುದ್ಧಳದ್ದು ಆತ್ಮಹತ್ಯೆ ಎಂದು ಬಿಂಬಿಸಲು ಅಪ್ರಾಪ್ತ ಕೈ ಕುಯ್ದಿದ್ದಾನೆ. ಇದ್ರಿಂದ ರಕ್ತಸ್ರಾವ ಆಗಿ ಪ್ರಬುದ್ಧ ಸಾವನ್ನಪ್ಪಿದ್ದಾಳೆ.
2 ಸಾವಿರ ರೂಪಾಯಿ ಕದ್ದ ವಿಷಯವನ್ನು ಪೋಷಕರಿಗೆ ಹೇಳುತ್ತಾಳೆ ಅಂತ ಅಪ್ರಾಪ್ತ ಆಕೆಯ ಮನೆಯಲ್ಲಿ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಈ ಹಿಂದೆ ಪ್ರಬುದ್ಧ ಎರಡು ಮೂರು ಸಲ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರಬುದ್ಧ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಷಯವನ್ನು ಯುವತಿ ತಮ್ಮ ಅಪ್ರಾಪ್ತನ ಬಳಿ ಹೇಳಿಕೊಂಡಿದ್ದ. ಅದು ಗೊತ್ತಿದ್ದು ಚಾಕುವಿನಿಂದ ಹಳೆಯ ಮಾರ್ಕ್ ಮೇಲೆ ಮತ್ತೇ ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್‌ರಿಂದ ಅಪ್ರಾಪ್ತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
ಯುವತಿ ಪ್ರಬುದ್ಧ ಮೊಬೈಲ್ ಪೌಚ್‌ನಲ್ಲಿದ್ದ ಹಣವನ್ನು ಕದ್ದಿದ್ದ. ತಮ್ಮನ ಜೊತೆ ಮನೆಗೆ ಬಂದಾಗ ಹಣ ಕದ್ದಿದ್ದ. ಕೊಲೆ ನಡೆದ ದಿನ ಕೂಡ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ಪ್ರಬುದ್ಧಳನ್ನು ತಳ್ಳಿದ್ದ ಆರೋಪಿ ನಂತರ ಆಕೆಯನ್ನ ಬಾತ್ ರೂಮ್‌ಗೆ ಎಳೆದೊಯ್ದಿದ್ದಾನೆ. ಆ ವೇಳೆ ಪ್ರಬುದ್ಧ ಆರೋಪಿ ಮುಖವನ್ನು ಉಗುರಿನಿಂದ ಪರಚಿದ್ದಾಳೆ. ನಂತರ ಚಾಕುವಿನಿಂದ ಕೈ ಮತ್ತು ಕತ್ತು ಕೊಯ್ದು ಆರೋಪಿ ಕಾದು ಕುಳಿತಿದ್ದಾನೆ. ಪ್ರಬುದ್ಧ ಸತ್ತ ನಂತರ ಮ್ಯಾಟ್‌ನಿಂದ ಮನೆಯನ್ನ ಒರೆಸಿದ್ದು ಚಾಕು ಮತ್ತು ಮ್ಯಾಟ್ ಎಲ್ಲಾ ತೆಗೆದುಕೊಂಡು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾನೆ. ಸಾಕ್ಷಿ ನಾಶ ಮಾಡಲು ಹಾಕಿದ್ದ ಬಟ್ಟೆ, ಮ್ಯಾಟ್ ಕೂಡ ಆರೋಪಿ ಸುಟ್ಟು ಹಾಕಿದ್ದಾನೆ.
Bangalore 20 year old student Prabhuddha mysterious death, police arrest brothers minor friend for murder. Prabhuddha, a fourth-semester student of Bachelor of Business Administration, was found dead in the bathroom of her home at Brindavan Layout in Padmanabhanagar on May 15. Her throat and wrist were found slit, according to the police.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
16-05-25 09:20 pm
HK News Desk
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm