ಬ್ರೇಕಿಂಗ್ ನ್ಯೂಸ್
26-05-24 08:48 pm HK News Desk ಕ್ರೈಂ
ಕಲಬುರ್ಗಿ, ಮೇ 27: ಷೇರು ಮಾರ್ಕೆಟ್ ಹೆಸ್ರಲ್ಲಿ ಹಣ ಡಬಲ್ ಮಾಡುವುದಾಗಿ ಹೇಳಿ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ರೋಜಾ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ಕರ್ಷ ಹಾಗೂ ಸಾವಿತ್ರಿ ಎನ್ನುವವರು ಹಣ ಡಬಲ್ ಮಾಡುವುದಾಗಿ 30 ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಉತ್ಕರ್ಷ ಹಾಗೂ ಸಾವಿತ್ರಿ ಎಂಬ ಕಳ್ಳ ದಂಪತಿಗಳು ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ್ದು, ಗಾಂಧಿನಗರದ ಬಳಿ ಬಿ.ಎಲ್. ಕಾಂಪ್ಲ್ಯಾಕ್ಸ್ ನಲ್ಲಿ ಟ್ರೆಡಿಂಗ್ ಕಂಪನಿ ನಡೆಸುತ್ತಿದ್ದ ಈ ದಂಪತಿ ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡಿ ಹಣ ವಂಚಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉತ್ಕರ್ಷಗೆ ಸಹಾಯ ಮಾಡುತ್ತಿದ್ದ ವಿಜಯಸಿಂಗ್ ಹಜಾರೆ ಹಾಗೂ ಸುಧಾ ಎಂಬುವರ ವಿರುದ್ದವೂ ದೂರು ದಾಖಲಾಗಿದೆ. ಬರೊಬ್ಬರಿ 500ಕ್ಕೂ ಅಧಿಕ ಜನರಿಂದ ಒಬ್ಬರಿಂದ 25 ಲಕ್ಷದಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ ದಂಪತಿ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ವಂಚನೆ ಸಂಬಂಧ ಎಫ್ ಐಆರ್ ದಾಖಲಾಗಿದೆ. ದೂರು ಕೊಡುತ್ತಿದ್ದಂತೆ ಕಲಬುರಗಿಯಿಂದ ದಂಪತಿಗಳು ಎಸ್ಕೇಪ್ ಆಗಿದ್ದಾರೆ.
ಕೋಟ್ಯಂತರ ರೂಪಾಯಿ ವಂಚಿಸಿದ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಅಪಾರ್ಟ್‌ಮೆಂಟ್ ಬಳಿ ಸುನೀಲ್ ಎಂಬತನ ಕಾರಿನಲ್ಲಿ ಉತ್ಕರ್ಷ ಹಾಗೂ ಸಾವಿತ್ರಿ ದಂಪತಿ ಎಸ್ಕೇಪ್ ಆಗಿದ್ದಾರೆ. ಇದೀಗ ಸುನೀಲ್, ದಂಪತಿಗಳಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಪ್ರಕರಣ ಸಂಭಂದ ಸುಧಾ ಎಂಬಾಕೆಯನ್ನು ರೋಜಾ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸ್ ಠಾಣೆಗೆಯಲ್ಲಿ ದೂರುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ;
ಇನ್ನು ಇದೇ ರೀತಿಯ ಪ್ರಕರಣ ಹುಬ್ಬಳ್ಳಿಯಲ್ಲೂ ಬೆಳಕಿಗೆ ಬಂದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಹೂಡಿಕೆ ನೆಪದಲ್ಲಿ ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ ಹೆಸರಿನ ಕಂಪನಿಯಲ್ಲಿ ಹಣ ಹೂಡಿಕೆಯ ಹೆಸರೇಳಿ ಇಬ್ಬರಿಗೆ 19.02 ಲಕ್ಷ ರೂಪಾಯಿ ವಂಚನೆ ಮಾಡಲಾಗಿದ್ದು, ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದ ಅಪರಿಚಿತ ವ್ಯಕ್ತಿ ಇಬ್ಬರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ.
ವಿಕಾಸ ನಗರದ ಗಿರೀಶ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ಗಿರೀಶ್‌ಗೆ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದ ಅಪರಿಚಿತ, ಪುಸಲಾಯಿಸಿ ನಂಬಿಕೆ ಗಳಿಸಿದ್ದ. ಲಾಭದ ಆಸೆಯಲ್ಲಿ 8.99 ಲಕ್ಷ ರೂಪಾಯಿ ವರ್ಗಾಯಿಸಿದ್ದ ಗಿರೀಶ್ ಇದೀಗ ಮೋಸ ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
Couple from Kalaburagi cheat people in crores, escape soon after complaint. Utkarsh and Savitri has targeted youngsters of stock market and have looted money in crores.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
24-01-26 11:18 pm
Mangaluru Staffer
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm