ಬ್ರೇಕಿಂಗ್ ನ್ಯೂಸ್
21-06-24 09:40 pm HK News Desk ಕ್ರೈಂ
ಮುಂಬೈ, ಜೂನ್.21: ವಾಟ್ಸಪ್ ನಲ್ಲಿ ಸಂಪರ್ಕ ಮಾಡಿದ್ದ ಅಪರಿಚಿತ ವ್ಯಕ್ತಿಗಳ ಮಾತಿನ ಮೋಡಿಗೆ ಬಲಿಯಾದ ಮುಂಬೈನ 60 ವರ್ಷದ ವ್ಯಕ್ತಿಯೊಬ್ಬರು ನಕಲಿ ಕಂಪನಿಯ ಹೆಸರಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 2.56 ಕೋಟಿ ರೂಪಾಯಿ ಕಳಕೊಂಡಿದ್ದಾರೆ.
ಸರಕಾರಿ ಕೆಲಸದಿಂದ ನಿವೃತ್ತರಾಗಿದ್ದ ವ್ಯಕ್ತಿ ತನಗೆ ಬಂದಿದ್ದ ಹಣವನ್ನು ಅಪರಿಚಿತರ ಕರೆಗೆ ಓಗೊಟ್ಟು ಅಮೆರಿಕದ ಕಂಪನಿಯ ಹೆಸರಲ್ಲಿ ಹೂಡಿಕೆ ಮಾಡಿದ್ದಾರೆ. ಅಪರಿಚಿತರು ವಾಟ್ಸಪ್ ನಲ್ಲಿ ಸಂಪರ್ಕಿಸಿದ್ದು, ಆನಂತರ ಹೂಡಿಕೆ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಕೆಕೆ ಫಾರ್ಚುನ್ ಸೆಂಟರ್ ಎಂಬ ವಾಟ್ಸಪ್ ಗ್ರೂಪಿಗೆ ಸೇರಿಸಿದ್ದರು. ಅದರಲ್ಲಿ ಹಲವು ಮಂದಿ ಅಡ್ಮಿನ್ ಗಳಿದ್ದರು. ಚಮನ್ ಸಿಂಗ್ ಮತ್ತು ನೀತಾ ಸಿಂಘಾನಿಯಾ ಎಂಬ ಇಬ್ಬರು ಈ ವ್ಯಕ್ತಿಯನ್ನು ಸಂಪರ್ಕಿಸಿ, ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು.
ಅಮೆರಿಕದ ಖಾಸಗಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಬಹುಬೇಗನೆ ಡಬಲ್ ಆಗುತ್ತೆ ಎಂದು ನಂಬಿಸಿದ್ದಾರೆ. ಅಲ್ಲದೆ, ವಾಟ್ಸಪ್ ನಲ್ಲಿ ವೆಬ್ ಸೈಟ್ ಒಂದರ ಲಿಂಕ್ ಕಳುಹಿಸಿದ್ದು, ಅದರಲ್ಲಿ ತಾವೇ ಖಾತೆಯನ್ನು ತೆರೆದು ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ರೀತಿ ಸಂಪರ್ಕ ಮಾಡಿದ್ದು, ಅದರಲ್ಲಿ ಹೂಡಿಕೆ ಮಾಡಿದ ಕಂಪನಿಗಳ ರೇಟಿಂಗ್ ಭಾರೀ ಏರುತ್ತಿದ್ದುದು ಕಂಡುಬಂದಿತ್ತು. ಅದನ್ನು ನೋಡುತ್ತ ಈ ವ್ಯಕ್ತಿಯೂ ಹೂಡಿಕೆ ಮಾಡಲು ಆಸಕ್ತರಾಗಿದ್ದು, ಫೆಬ್ರವರಿ ವೇಳೆಗೆ ಚಮನ್ ಸಿಂಗ್ ಮತ್ತು ನೀತಾ ಸೂಚನೆಯಂತೆ ಮೊದಲಿಗೆ 50 ಸಾವಿರ ಹೂಡಿಕೆ ಮಾಡಿದ್ದಾರೆ. ನೋಡ ನೋಡುತ್ತಲೇ ಇವರು ಹೂಡಿಕೆ ಮಾಡಿದ್ದ ಷೇರು ಲಾಭದತ್ತ ಹೋಗಿದ್ದರಿಂದ ಮತ್ತಷ್ಟು ಆಸಕ್ತಿ ಹುಟ್ಟಿಸಿತ್ತು.
ಇದರಿಂದ ಮತ್ತಷ್ಟು ಹಣವನ್ನು ಹೂಡಿಕೆ ಮಾಡುತ್ತ ಹೋಗಿದ್ದು, ಅಮೆರಿಕದ ಕಂಪನಿಯಿಂದ ಭಾರೀ ಲಾಭದ ನಿರೀಕ್ಷೆಯಲ್ಲಿದ್ದರು. ಭಾರೀ ಲಾಭ ಗಳಿಸಿರುವ ಬಗ್ಗೆ ಚಮನ್ ಸಿಂಗ್, ನಕಲಿ ಸರ್ಟಿಫಿಕೇಟನ್ನೂ ಕಳಿಸಿಕೊಟ್ಟು ನಂಬಿಸುವ ಕೆಲಸ ಮಾಡಿದ್ದ. ವಿಶೇಷ ಅಂದ್ರೆ, ಹಣ ಹೂಡಿಕೆ ಮಾಡಲು ನಿರ್ದಿಷ್ಟ ಬ್ಯಾಂಕ್ ಖಾತೆಗಳನ್ನು ಕಳಿಸಿಕೊಟ್ಟಿದ್ದರು. ಇತ್ತ ಹಣ ವರ್ಗಾವಣೆ ಆಗುತ್ತಲೇ ಏಪ್ ನಲ್ಲಿ ಹೂಡಿಕೆ ಮಾಡಿರುವಂತೆ ಕಾಣಿಸುತ್ತಿತ್ತು. ಅಲ್ಲದೆ, ಷೇರಿನ ಪ್ರಗತಿಯನ್ನೂ ಏಪ್ ನಲ್ಲಿ ತೋರಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲೇ ಗ್ರೂಪ್ ಅಡ್ಮಿನ್ ಗಳು, ಹೂಡಿಕೆ ಮಾಡಿರುವ ಕಂಪನಿ ಸಡನ್ ಲಾಸ್ ಆಗಿರುವ ಬಗ್ಗೆ ತಿಳಿಸಿದ್ದರು. ಅಮೆರಿಕದ ಸ್ಟಾಕ್ ಮಾರ್ಕೆಟ್ ಡೌನ್ ಆಗಿದ್ದು, ಇನ್ನೂ 20 ಪರ್ಸೆಂಟ್ ಹಣವನ್ನು ಅದೇ ಕಂಪನಿಗೆ ಹೂಡಿಕೆ ಮಾಡಿದರೆ ನಿಮ್ಮ ಹಣ ಸಿಗಬಹುದು ಎಂದು ನಂಬಿಸುತ್ತಾರೆ.
ಸಂತ್ರಸ್ತ ವ್ಯಕ್ತಿ ತಾನು ಈಗಾಗಲೇ 2.56 ಕೋಟಿ ಹೂಡಿಕೆ ಮಾಡಿದ್ದು, ಅದರಿಂದಲೇ ಕಳೆದು ನೀವು ಕಂಪನಿಗೆ ಸೇರಿಸಿಕೊಳ್ಳಿ. ಉಳಿದ ಮೊತ್ತವನ್ನು ತನಗೇ ಕೊಟ್ಟುಬಿಡಿ ಎಂದು ಕೇಳುತ್ತಾರೆ. ಆದರೆ, ಆ ಕಡೆಯಲ್ಲಿದ್ದ ಗ್ರೂಪ್ ಅಡ್ಮಿನ್ ಗಳು ಇವರ ಮಾತನ್ನು ಕೇಳುವುದಿಲ್ಲ. ಅಷ್ಟೇ ಅಲ್ಲದೆ, ಆ ವರೆಗೂ ಇದ್ದ ಸ್ಟಾಕ್ ಮಾರ್ಕೆಟ್ ಖಾತೆಯಿಂದಲೇ ಇವರನ್ನು ಬ್ಲಾಕ್ ಮಾಡುತ್ತಾರೆ. ವಾಟ್ಸಪ್ ಗ್ರೂಪಿನಿಂದಲೂ ರಿಮೂವ್ ಮಾಡುತ್ತಾರೆ. ಅಷ್ಟರಲ್ಲಿ ತಾನು ಮೋಸ ಹೋಗಿರುವುದು ಅರಿವಾಗಿದ್ದು, ಮುಂಬೈ ಸೈಬರ್ ಪೊಲೀಸರಲ್ಲಿ ಮೋಸದ ಬಗ್ಗೆ ಬಂದು ಅಲವತ್ತುಕೊಂಡಿದ್ದಾರೆ. ಸೈಬರ್ ಕಳ್ಳರು ಈಗ ವಾಟ್ಸಪಲ್ಲಿ ಮೆಸೇಜ್ ಕಳಿಸಿ, ನಾನಾ ರೀತಿಯಲ್ಲಿ ನಂಬಿಸಿ ಹಣ ಕೀಳಲು ಯತ್ನಿಸುತ್ತಾರೆ. ಖೆಡ್ಡಾಕ್ಕೆ ಬಿದ್ದವರನ್ನು ಕುಳಿತಲ್ಲೇ ಬೋಳಿಸುತ್ತಾರೆ.
A 60-year-old retired resident from Mumbai has become the latest victim of a growing trading scam. The victim was swindled out of Rs 2.56 crore through an elaborate online share trading scam, where the scammers lured him into investing in a fake company on the pretext of bigger returns.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm