ಬ್ರೇಕಿಂಗ್ ನ್ಯೂಸ್
07-11-25 05:25 pm Mangalore Correspondent ಕರಾವಳಿ
ಮಂಗಳೂರು, ನ.7 : ಭಾರತದಲ್ಲಿ ಗೋಡಂಬಿ ಉದ್ಯಮ ಸ್ಥಾಪನೆಗೊಂಡು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ಆಶ್ರಯದಲ್ಲಿ ನ.14, 15 ಮತ್ತು 16ರಂದು ಕಾಜು ಶತಮಾನೋತ್ಸವ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಕೆ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 1925ರಲ್ಲಿ ಬ್ರಿಟಿಷರು ದೇಶದಲ್ಲೇ ಮೊದಲ ಬಾರಿಗೆ ಪಿಯರ್ಸ್ ಲೆಸ್ಲೀ ಇಂಡಿಯಾ ಲಿಮಿಟೆಡ್ ಹೆಸರಿನಲ್ಲಿ ಮಂಗಳೂರಿನಲ್ಲಿ ಗೋಡಂಬಿ ಉದ್ಯಮ ಆರಂಭಿಸಿದ್ದರು. ಆ ಕಾಲದಲ್ಲಿಯೇ ಮಂಗಳೂರಿನ ಗೋಡಂಬಿಯನ್ನು ವಿದೇಶಕ್ಕೆ ರಫ್ತು ಮಾಡುವ ವ್ಯವಹಾರ ಆರಂಭಿಸಲಾಗಿತ್ತು. 1940ರ ವೇಳೆಗೆ ಐದು ಫ್ಯಾಕ್ಟರಿಯಿಂದ ಆರಂಭಗೊಂಡ ಗೋಡಂಬಿ ಉದ್ಯಮ ಈಗ 250ರಷ್ಟಾಗಿದ್ದು, 1980ರ ವೇಳೆಗೆ 70 ಸಾವಿರ ಮೆಟ್ರಿಕ್ ಟನ್ ಇದ್ದ ವಹಿವಾಟು ಈಗ ಮಂಗಳೂರಿನಲ್ಲಿ 5 ಲಕ್ಷ ಟನ್ ನಷ್ಟಾಗಿದೆ. ಇಡೀ ದೇಶದ ಗೋಡಂಬಿ ಉದ್ಯಮದಲ್ಲಿ 25ರಷ್ಟು ಮಂಗಳೂರಿನದ್ದೇ ಆಗಿದ್ದು ಕ್ಯಾಶ್ಯೂ ಕ್ಯಾಪಿಟಲ್ ಎನ್ನುವ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.

ಗೋಡಂಬಿ ಉದ್ಯಮಕ್ಕೆ ನೂರು ವರ್ಷ ಪೂರೈಸಿದ ಸಲುವಾಗಿ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ಮೂರು ದಿನಗಳ ಸಮ್ಮೇಳನ ಹಮ್ಮಿಕೊಂಡಿದ್ದು, ಗೋಡಂಬಿ ಬೆಳೆ, ಉದ್ಯಮದ ಕುರಿತಾಗಿ ಚಿಂತನ- ಮಂಥನ ನಡೆಯಲಿದೆ. ನ.14ರಂದು ಸಂಜೆ 4 ಗಂಟೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮ್ಮೇಳ ಉದ್ಘಾಟಿಸುವರು. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ, ಸ್ಪೀಕರ್ ಯುಟಿ ಖಾದರ್, ಶಾಸಕ ವೇದವ್ಯಾಸ ಕಾಮತ್, ಎನ್ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಇಂಟರ್ನ್ಯಾಶನಲ್ ನಟ್ ಕೌನ್ಸಿಲ್ ಸ್ಪೈನ್ ಇದರ ಅಧ್ಯಕ್ಷ ಅಶೋಕ್ ಕೃಶನ್, ಇಟಿಜಿ ಗ್ರೂಪ್ ನಿರ್ದೇಶಕ ವಾಸುದೇವ ಬಾರ್ಕೂರ ಮತ್ತಿತರರು ಇರಲಿದ್ದಾರೆ.
ಮೇಳದಲ್ಲಿ 120 ಸ್ಟಾಲ್ ಇರಲಿದ್ದು, ಗೋಡಂಬಿ ಕತ್ತರಿಸುವುದು ಸೇರಿದಂತೆ ನವೀನ ಮಾದರಿಯ ಭಾರತ ಮತ್ತು ವಿಯೆಟ್ನಾಂ ದೇಶದ ಯಂತ್ರೋಪಕರಣಗಳ ಬಳಕೆಯನ್ನು ತೋರಿಸಲಿದೆ. ಮೂರು ದಿನಗಳಲ್ಲಿ ಉದ್ಯಮ ತಜ್ಞರು ಭಾಗವಹಿಸಲಿದ್ದು ಉದಯೋನ್ಮುಖ ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳು, ಸಾಂಪ್ರದಾಯಿಕ ವ್ಯಾಪಾರದಿಂದ ಇ-ವಾಣಿಜ್ಯ ಮಾರುಕಟ್ಟೆಗೆ ಬದಲಾಯಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವಿಮರ್ಶೆ ನಡೆಯಲಿದೆ ಎಂದರು.
25 ವರ್ಷಗಳ ಹಿಂದೆ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್ ಎಂಬ ದೇಶವು 60-70 ಸಾವಿರ ಟನ್ ಗೇರು ವಹಿವಾಟು ಹೊಂದಿತ್ತು. ಅಲ್ಲಿನ ಸರ್ಕಾರದ ಪ್ರೋತ್ಸಾಹದಿಂದಾಗಿ ಈಗ 18 ಲಕ್ಷ ಟನ್ ಗೇರು ವಹಿವಾಟು ನಡೆಸುತ್ತಿದ್ದಾರೆ. ನಮ್ಮ ದೇಶದಲ್ಲಿ ಈಗಲೂ 50 ಸಾವಿರ ಟನ್ ಅಷ್ಟೇ ಗೇರು ಬೆಳೆಯುವುದು. ಉಳಿದಿದ್ದನ್ನು ಆಫ್ರಿಕನ್ ದೇಶಗಳಿಂದ ಆಮದು ಮಾಡಲಾಗುತ್ತದೆ. ವಿಯೆಟ್ನಾಂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಏಳೂವರೆ ಲಕ್ಷ ಟನ್ ಗೇರು ಬೆಳೆಯುತ್ತಿದೆ. ಅಂಥದ್ದರಲ್ಲಿ ನಮ್ಮ ದೇಶದಲ್ಲೂ ಸರಕಾರದ ಬೆಂಬಲ ಸಿಕ್ಕಿದರೆ, ಬಾದಾಮಿ ರೀತಿ ಮಾರ್ಕೆಟ್ ಮಾಡಲು ಸಾಧ್ಯವಾದರೆ ನಮ್ಮಲ್ಲೂ ಗೋಡಂಬಿ ಉತ್ಪಾದಿಸಿ, ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಿದೆ ಎಂದು ಸಮ್ಮೇಳನದ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್ ಹೇಳಿದರು.
ರಾಜ್ಯದ ಗೇರು ಅಭಿವೃದ್ಧಿ ನಿಗಮದಲ್ಲಿ 65 ಸಾವಿರ ಎಕ್ರೆ ಗೇರು ತೋಟಗಾರಿಕೆ ಇದೆ. ಆದರೆ ಅಲ್ಲಿ ಗೇರು ಬೆಳೆಯಲು ಆದ್ಯತೆ ಸಿಗುವುದಿಲ್ಲ. ಎಕ್ರೆಗೆ ಕನಿಷ್ಠ 300 ಕೇಜಿ ಬೆಳೆದರೂ 5-6 ಸಾವಿರ ಟನ್ ಆಗಬಹುದು. ಆದರೆ ರಾಜ್ಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಆದರೆ ಗೇರನ್ನೇ ಬೆಳೆಯದ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರದ ಪ್ರೋತ್ಸಾಹದಿಂದಾಗಿ ಈಗ ನಮಗಿಂತ ಹೆಚ್ಚು ಗೇರು ಬೀಜ ಬೆಳೆಯುತ್ತಿದ್ದಾರೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ತುಕಾರಾಮ ಪ್ರಭು, ಖಜಾಂಚಿ ಗಣೇಶ ಕಾಮತ್ ಉಪಸ್ಥಿತರಿದ್ದರು.
As the Indian cashew industry celebrates its centenary, the Karnataka Cashew Manufacturers Association has announced a three-day Cashew Centenary Conference to be held from November 14 to 16 at the TMA Pai Convention Hall, Mangaluru.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 05:25 pm
Mangalore Correspondent
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
ನ.9ರಂದು ಕೊಟ್ಟಾರದಲ್ಲಿ ಎಸ್.ಕೆ ಗೋಲ್ಡ್ ಸ್ಮಿತ್ ಸೊಸ...
06-11-25 10:50 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm