Meesho scam online, Fraud: ಮೀಶೋ ಏಪ್ ನಲ್ಲಿ 15 ಲಕ್ಷದ ಕ್ಯಾಶ್ ಪ್ರೈಸ್ ನಂಬಿ ಹೋದ ವ್ಯಕ್ತಿ ಕಳಕೊಂಡಿದ್ದು 6.62 ಲಕ್ಷ ; ಟೆಲಿಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಹುಡುಕಿದವಗೆ 9.20 ಲಕ್ಷ ಖೋತಾ ! 

09-07-24 11:15 pm       Mangalore Correspondent   ಕ್ರೈಂ

ಮೀಶೋ ಏಪ್ ನಲ್ಲಿ ಕ್ಯಾಶ್ ಪ್ರೈಸ್ ಬಂದಿದೆ ಎಂಬ ಮೆಸೇಜ್ ನಂಬಿದ ವ್ಯಕ್ತಿಯೊಬ್ಬರು ಅಪರಿಚಿತರ ಮಾತು ಕೇಳಿ 6.62 ಲಕ್ಷ ರೂ. ಕಳಕೊಂಡ ಘಟನೆ ನಡೆದಿದ್ದು ಮೋಸ ಹೋದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಮಂಗಳೂರು, ಜುಲೈ 9: ಮೀಶೋ ಏಪ್ ನಲ್ಲಿ ಕ್ಯಾಶ್ ಪ್ರೈಸ್ ಬಂದಿದೆ ಎಂಬ ಮೆಸೇಜ್ ನಂಬಿದ ವ್ಯಕ್ತಿಯೊಬ್ಬರು ಅಪರಿಚಿತರ ಮಾತು ಕೇಳಿ 6.62 ಲಕ್ಷ ರೂ. ಕಳಕೊಂಡ ಘಟನೆ ನಡೆದಿದ್ದು ಮೋಸ ಹೋದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. 

2024ನೇ ಎಪ್ರಿಲ್ ತಿಂಗಳಲ್ಲಿ  Meesho ನಲ್ಲಿ Cash Prize ಬಂದಿರುವುದಾಗಿ ಅಂಚೆ ಮುಖೇನ ಕೂಪನ್ ಬಂದಿದ್ದು, ಅದರಲ್ಲಿದ್ದ ಕೂಪನ್ ನಲ್ಲಿ  ರೂ.14,75,000/- Cash Prize Win ಆಗಿರುತ್ತೀರಿ ಎಂದು ನಮೂದಿಸಿತ್ತು. ಸದ್ರಿ ಕೂಪನ್‌ ನೊಂದಿಗೆ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಫಿರ್ಯಾದಿದಾರರ ಬ್ಯಾಂಕ್ ಮಾಹಿತಿಗಳನ್ನು ಹಾಗೂ ಗುರುತಿನ ಚೀಟಿಗಳನ್ನು ಕೇಳಿದ್ದ. ಅದರಂತೆ ತನ್ನ ವಾಟ್ಸಪ್ ಮುಖೇನ ಮಾಹಿತಿಗಳನ್ನು ಕಳುಹಿಸಿದ್ದರು. ನಂತರ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ Cash Prize ನಲ್ಲಿ ಬಂದಿರುವ ಹಣ ಪಡೆಯಬೇಕಾದರೆ TDS, GST, NOC ಹಾಗೂ ಇನ್ನಿತರ ಚಾರ್ಜಸ್ಗಳಿಗೆ ಹಣ ಕಟ್ಟಬೇಕೆಂದು ತಿಳಿಸಿದ್ದರು. 

ಅದರಂತೆ, ತನ್ನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ  ರೂ.6,62,450/- ಹಣವನ್ನು ಕಳುಹಿಸಿದ್ದಾರೆ. ಅಪರಿಚಿತರು ಬಳಿಕ ವ್ಯಕ್ತಿಯಿಂದ ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 21/2024 ಕಲಂ: 66(C), 66(D) IT act ಅಡಿ ಪ್ರಕರಣ ದಾಖಲಾಗಿದೆ.

ವರ್ಕ್ ಫ್ರಮ್ ಹೋಮ್ ಹೆಸರಲ್ಲಿ 9.20 ಲಕ್ಷ ಕಳಕೊಂಡ ! 

ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳದ ವ್ಯಕ್ತಿಯೊಬ್ಬರು ವರ್ಕ್ ಫ್ರಮ್ ಹೋಮ್ ಕೆಲಸ ಹುಡುಕುತ್ತಿದ್ದಾಗ ಅನಾಮಧೇಯ ಟೆಲಿಗ್ರಾಂ ಆಪ್ ನಲ್ಲಿ ವರ್ಕ್ ಫ್ರಮ್ ಹೋಮ್ ಕುರಿತ ಮೆಸೇಜ್ ಬಂದಿತ್ತು‌. ಇದೇ ವೇಳೆ, 11-04-2024ರಂದು ಅಪರಿಚಿತ ವ್ಯಕ್ತಿಯೊಬ್ಬ ಟೆಲಿಗ್ರಾಂ ಮೂಲಕ ಕರೆ ಮಾಡಿ ಸಂಪರ್ಕಿಸಿದ್ದ. ವರ್ಕ್ ಫ್ರಮ್ ಹೋಮ್ ಬಗ್ಗೆ ಆತನ ಸೂಚನೆಗಳನ್ನು ಪಾಲಿಸುತ್ತ ಬಂದಿದ್ದ ವ್ಯಕ್ತಿ ಎಪ್ರಿಲ್ 11ರಿಂದ ಈವರೆಗೆ, ಹಂತ ಹಂತವಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ, ಬ್ಯಾಂಕ್ ಖಾತೆಗಳಿಗೆ ಒಟ್ಟು 9,20,000 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದು ಮೋಸ ಹೋಗಿದ್ದಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 119/2024 ಕಲಂ: 66(C), 66(D), It Act ಹಾಗೂ ಕಲಂ: 419, 420 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

Mangalore Meesho scam online fraud, man looses 6.67 lakhs trusting cash back.