ಬ್ರೇಕಿಂಗ್ ನ್ಯೂಸ್
10-07-24 05:32 pm HK News Desk ಕ್ರೈಂ
ವಿಜಯವಾಡ, ಜುಲೈ 10: ನಿಜಕ್ಕೂ ಇದು ಕರುಣಾಜನಕ ಕಥೆ.. ಯಾವ ಶತ್ರುವಿಗೂ ಈ ಸ್ಥಿತಿ ಬರಬಾರದು. ಇಂಥಾ ನಯವಂಚನೆಯ ಕೆಲಸವನ್ನ ಯಾರೂ ಮಾಡಬಾರ್ದು. ಪಾಪ ಈ ಆಟೋ ಡ್ರೈವರ್ ಕಷ್ಟ ಕೇಳಿದ್ರೆ ಎಂತವರ ಕರುಳು ಚುರುಕ್ ಅನ್ನೋದೇ ಇರಲ್ಲ. ಕಿರಾತಕರು, ಕಿಡಿಗೇಡಿಗಳು ಅದೆಂಥಾ ಮೋಸ ಮಾಡಿ ಇವರಿಗೆ ಪಂಗನಾಮ ಹಾಕಿದ್ದಾರೆ ಗೊತ್ತಾ.
ಈತನ ಹೆಸರು ಮಧುಬಾಬು. ವಯಸ್ಸು 31. ಗುಂಟೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಇದ್ದವನು. ತಾನಾಯ್ತು ತನ್ನ ಆಟೋ ಆಯ್ತು ಅಂತ ಇದ್ದವನಿಗೆ ಹಣಕಾಸಿನ ಸಮಸ್ಯೆ ಇತ್ತು. ಇದರ ಮಧ್ಯೆ ಸಾಲದ ಹೊರೆ ಬೇರೆ ಇತ್ತು. ಲೋನ್ ಆ್ಯಪ್‌ಗಳ ಸಾಲದ ಸುಳಿಗೆ ಸಿಲುಕಿದ್ದ ಆಟೋ ಡ್ರೈವರ್‌ಗೆ ಯಾರೋ ನಯವಂಚಕರು ಸಖತ್ ಮೋಸ ಮಾಡಿದ್ದಾರೆ.
ಮಧುಬಾಬು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವಾಗ ಒಂದು ದಿನ ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ್ದಾನೆ. ಅದರಲ್ಲಿ ಕಿಡ್ನಿ ದಾನ ಮಾಡಿದರೆ 30 ಲಕ್ಷ ರೂ. ನೀಡುವುದಾಗಿ ಜಾಹೀರಾತು ಕೊಟ್ಟಿದ್ದರು. ಆ ಜಾಹೀರಾತು ನಂಬಿದ ಮಧುಬಾಬು ಅದರಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದ್ದಾನೆ.
ಫೋನ್ ಸ್ವೀಕರಿಸಿದ ಅಪರಿಚಿತರು ಮತ್ತೊಬ್ಬ ಮಧ್ಯವರ್ತಿಯ ನಂಬರ್ ಕೊಟ್ಟಿದ್ದಾನೆ. ಅವನು ಮಧುಬಾಬು ಅವರನ್ನ ವಿಜಯವಾಡದ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬರುವಂತೆ ಹೇಳಿದ್ದಾನೆ. ಅಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಡಗಡೆಯ ಕಿಡ್ನಿ ತೆಗೆದುಕೊಳ್ಳುತ್ತೇವೆ ಎಂದವರು ಆಪರೇಷನ್ ಥಿಯೇಟರ್‌ನಲ್ಲಿ ಬಲಗಡೆಯ ಕಿಡ್ನಿ ಎಗರಿಸಿಬಿಟ್ಟಿದ್ದಾರೆ.
ಮಧುಬಾಬು ಕಿಡ್ನಿ ದಾನ ಮಾಡಿದರೂ ಹೇಳಿದಂತೆ 30 ಲಕ್ಷ ರೂಪಾಯಿ ಹಣವನ್ನು ಕೊಟ್ಟಿಲ್ಲ. ಕಿಡ್ನಿ ನೀಡೋದಕ್ಕೆ ಮೊದಲು ಆಮೇಲೆ ಓಡಾಟಕ್ಕೆ ಅಂತ ಬರೀ 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಕಿಡ್ನಿ ಸ್ವೀಕರಿಸಿದ ವ್ಯಕ್ತಿಗೂ ಆಟೋ ಡ್ರೈವರ್ ಮಧುಬಾಬುಗೂ ಯಾವುದೇ ರಕ್ತ ಸಂಬಂಧ ಇಲ್ಲ. ಆದರೆ ರಕ್ತ ಸಂಬಂಧ ಇರುವಂತೆ ದಾಖಲೆ ಸೃಷ್ಟಿಸಿ ಕಿಡ್ನಿ ಪಡೆದಿದ್ದಾರೆ. ಕಿಡ್ನಿ ಪಡೆದ ಬಳಿಕ ಭರವಸೆ ನೀಡಿದಂತೆ 30 ಲಕ್ಷ ರೂಪಾಯಿ ನೀಡಲಿಲ್ಲ ಎಂದು ಮಧು ಬಾಬು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
G Madhu Babu, an auto driver from KVP Colony in Guntur, alleged that he was defrauded in the kidney sale transaction. Madhu Babu, who has been facing severe financial difficulties, claimed in his complaint to the Guntur Superintendent of Police (SP) that he was promised Rs. 30 lakhs for donating his kidney but received only Rs. 1.10 lakh.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm