ಬ್ರೇಕಿಂಗ್ ನ್ಯೂಸ್
12-03-26 02:48 pm HK News Staffer ಕರ್ನಾಟಕ
ತಮಿಳುನಾಡಿನ, ಮಾ.13: ಮಗಳಿಗೆ ಮದುವೆಯಾಗುತ್ತಿಲ್ಲ ಎಂದು ಮನನೊಂದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈ ನಗರದ ವದಪಾಲನಿ ಪ್ರದೇಶದಲ್ಲಿ ಸಂಭವಿಸಿದೆ. 57 ವರ್ಷದ ಆಟೋ ರಿಕ್ಷಾ ಚಾಲಕ ಕೃಷ್ಣಕುಮಾರ್ ಮೃತ ದುರ್ದೈವಿ.
.
ತಂದೆಯ ಸಾವಿನಿಂದ ಮನನೊಂದ ಮಗಳು ಪಾಕಿಯಾ ಕೂಡ ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣ ಕುಮಾರ್ ಮಾರ್ಚ್ 7ರಂದು ಮನೆಬಿಟ್ಟು ಹೊರ ಹೋಗಿದ್ದವರು ಮರಳಿ ಮನೆಗೆ ಬಂದಿರಲಿಲ್ಲ. ಕುಟುಂಬದವರು ಹಲವು ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.
ಆದರೆ ಮಾರ್ಚ್ 8ರ ರಾತ್ರಿ ಅವರ ಮೊಬೈಲ್ ಫೋನ್ ಮನೆಯ ಸಮೀಪದ ಬಾವಿಯ ಬಳಿ ಪತ್ತೆಯಾದ ಬಳಿಕ ಪರಿಶೀಲಿಸಿದಾಗ, ಬಾವಿಯ ಬಳಿ ಅವರ ಶವ ಪತ್ತೆಯಾಗಿದೆ. ತಂದೆಯ ಮೃತದೇಹವನ್ನು ಕಂಡು ಆಘಾತಕ್ಕೊಳಗಾದ ಪಾಕಿಯಾ, ತಾಯಿಯನ್ನು ಕೋಣೆಯಲ್ಲಿ ಲಾಕ್ ಮಾಡಿ ತಾನು ಅಡುಗೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ತಾಯಿ ಹಿರಿಯ ಮಗಳು ಬ್ರಿಂಡಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬ್ರಿಂಡಾ ಸ್ಥಳಕ್ಕೆ ಬಂದು ತಾಯಿಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾವಿಯಿಂದ ಕೃಷ್ಣಕುಮಾರ್ ಅವರ ಶವವನ್ನು ಹೊರತೆಗೆದಿದ್ದಾರೆ. ಪಾಕಿಯಾ ಅವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಕೃಷ್ಣಕುಮಾರ್ ಅವರಿಗೆ ಇಬ್ಬರು ಪುತ್ರಿಯರಿದ್ದು ಹಿರಿಯ ಮಗಳು ಬ್ರಿಂಡಾಗೆ ಮದುವೆಯಾಗಿದೆ. ಆದರೆ ಅವರ 30 ವರ್ಷದ ಪಾಕಿಯಾ ಇನ್ನೂ ಮದುವೆಯಾಗದೇ ಇರುವುದರಿಂದ ಕುಟುಂಬದ ಮೇಲೆ ಸಾಮಾಜಿಕ ಒತ್ತಡ ಹೆಚ್ಚಾಗಿದ್ದರಿಂದ ಕೃಷ್ಣಕುಮಾರ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ. ಇದರಿಂದ ಕೃಷ್ಣಕುಮಾರ್ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 10:27 am
HK News Staffer
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm