ಬ್ರೇಕಿಂಗ್ ನ್ಯೂಸ್
03-01-26 03:43 pm Mangalore Correspondent ಕ್ರೈಂ
ಮಂಗಳೂರು, ಜ.3 : ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಬಂಟ್ವಾಳ ತಾಲೂಕಿನ ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಬ್ಯಾಂಕ್ ಶಾಖೆಯಿಂದ 70.86 ಲಕ್ಷ ರೂ. ಲಪಟಾಯಿಸಿದ್ದಲ್ಲದೆ, ಸೇಫ್ ಲಾಕರಿನಿಂದ 15 ಗ್ರಾಮ್ ಚಿನ್ನವನ್ನು ಎಗರಿಸಿ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
04-09-2023 ರಿಂದ 19-12-2025 ರ ಅವಧಿಯಲ್ಲಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ಆಂಧ್ರ ಮೂಲದ ಸುಬ್ರಹ್ಮಣ್ಯಂ (30) ಎಂಬ ವ್ಯಕ್ತಿ ಉಂಡ ಮನೆಗೇ ಭಾರೀ ದ್ರೋಹ ಎಸಗಿ ನಾಪತ್ತೆಯಾಗಿದ್ದಾನೆ. ಈತ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಹೊಂದಿದ್ದರು.
ಆರೋಪಿ ವ್ಯಕ್ತಿ 06-02-2024 ರಿಂದ 16-12-2025 ರ ವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ರೂ.70,86,000/- ಹಣವನ್ನು ದುರುಪಯೋಗ ಪಡಿಸಿದ್ದಾನೆ. 19-12-2025 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಹಣದ ದುರುಪಯೋಗ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ 17-12-2025 ರಂದು ಯಾರಿಗೂ ತಿಳಿಸದೇ ತೆರಳಿರುತ್ತಾರೆ. ಒಟ್ಟು ವಂಚನೆಯ ಮೌಲ್ಯ ರೂ.71,41,000/- ಆಗಿರುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಜೆಪ್ಪು ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ್ (50) ಡಿ.23ರಂದು ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
A major fraud has surfaced at the Bank of Baroda’s Perne branch in Bantwal taluk, where Assistant Manager Subrahmanyam (30), originally from Andhra Pradesh, allegedly misappropriated ₹70.86 lakh from the ATM cash loading process and stole 15 grams of gold worth ₹55,000 from the bank’s safe locker.
04-01-26 10:27 pm
Bangalore Correspondent
Janardhan Reddy, DK Shivakumar: ನನಗೆ ಜೀವ ಬೆದರ...
04-01-26 07:24 pm
ಜನಾರ್ದನ ರೆಡ್ಡಿ ದೊಡ್ಡ ಡ್ರಾಮಾ ಮಾಸ್ಟರ್.. ಕೋಟೆ ಕಟ...
03-01-26 10:40 pm
ಬಳ್ಳಾರಿ ಗಲಾಟೆ ; ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟು...
03-01-26 09:00 pm
SP Pavan Nejjur Suicide Attempt: ಬಳ್ಳಾರಿ ಗಲಾಟ...
03-01-26 03:24 pm
04-01-26 06:38 pm
Mangalore Correspondent
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
04-01-26 11:10 pm
Mangalore Correspondent
Suhas Shetty, Social Media Post, Bajpe Police...
04-01-26 02:44 pm
Dharmasthala Case, Belthangady Court: ಧರ್ಮಸ್ಥ...
04-01-26 01:57 pm
ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬರಲ್ಲಿ ಬಹಿರಂಗ ಕ...
03-01-26 11:04 pm
ಜನವರಿ 23-26 ; ಕದ್ರಿ ಪಾರ್ಕ್ ನಲ್ಲಿ ಫಲಪುಷ್ಪ ಪ್ರದ...
03-01-26 09:13 pm
04-01-26 11:02 pm
HK News Desk
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm
ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮುಸ್ಲಿಂ ಮಾ...
02-01-26 12:58 pm
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm