ಬೆಳಿಗ್ಗೆ ಗೋಬಿ ಮಾರಾಟ, ರಾತ್ರಿ ಕಳ್ಳತನದ ದಂಧೆ

24-08-20 05:11 pm       Headline Karnataka News Network   ಕ್ರೈಂ

ಬೆಳಿಗ್ಗೆ ಗೋಬಿ ಮಾರಾಟ, ರಾತ್ರಿ ಕಳ್ಳತನದ ದಂಧೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟೋದಲ್ಲಿ ಮನೆಗೆ ಬರುವ ಇವರು ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು

ವಿಜಯಪುರ: ಮನೆಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸುವಲ್ಲಿ ವಿಜಯಪುರದ ಜಲನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಅಟೋ ವಶ ಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಗೋಬಿಮಂಚೂರಿ ಮಾರಾಟ ಮಾಡುತ್ತಿದ್ದ ಗಣೇಶ ನಗರ ನಿವಾಸಿ ಕಿರಣ ವಿಶಾಲ ಶರ್ಮಾ, ಆಟೋರಿಕ್ಷಾ ಚಾಲಕ ವಿರೇಶ ಶಿವಾನಂದ ಬಂಥನಾಳ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟೋದಲ್ಲಿ ಮನೆಗೆ ಬರುವ ಇವರು ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದು, ಜಲನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ಹಾಗೂ ಗಾಂಧಿಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ.

ಆರೋಪಿಗಳಿಂದ 190 ಗ್ರಾಂ ಚಿನ್ನ ಮತ್ತು 145 ಗ್ರಾಂ ಬೆಳ್ಳಿ ಜತೆಗೆ 1.50 ಲಕ್ಷ ರೂ ನಗದು, ಒಂದು ಲ್ಯಾಪಟ್ಯಾಪ್, ಒಂದು ಕ್ಯಾಮರಾ ವಶ ಪಡಿಸಿಕೊಂಡಿದ್ದಾರೆ. ಪ್ರಕರಣ ಭೇದಿಸಿದ ಎಲ್ಲ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.