ಉಪ್ಪಿನಂಗಡಿ ; ಎಟಿಎಂ ಒಡೆದು ಹಣ ಕಳವಿಗೆತ್ನಿಸಿದ್ದ ಆರೋಪಿ ಸೆರೆ

02-05-21 02:53 am       Mangaluru Correspondent   ಕ್ರೈಂ

ಉಪ್ಪಿನಂಗಡಿ ಪೇಟೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಮೆಷಿನ್ ಒಡೆದು ಹಣ ಕಳವಿಗೆತ್ನಿಸಿದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು, ಮೇ 1: ಉಪ್ಪಿನಂಗಡಿ ಪೇಟೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಮೆಷಿನ್ ಒಡೆದು ಹಣ ಕಳವಿಗೆತ್ನಿಸಿದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎ.27 ರಂದು ರಾತ್ರಿ ಯಾರೋ ಕಳ್ಳರು ಉಪ್ಪಿನಂಗಡಿ ಪೇಟೆಯಲ್ಲಿ ಎಸ್ ಬಿಐ ಎಟಿಎಂ ನಲ್ಲಿನ ಹಣ ಕಳವುಗೈಯಲು ಯತ್ನಿಸಿದ್ದರು. ಆರೋಪಿ ಎರಡು ಎಟಿಎಂ ಮತ್ತು ಒಳಭಾಗದಲ್ಲಿ ಅಳವಡಿಸಿದ್ದ ಮೂರು ಸಿಸಿಟಿವಿಗಳನ್ನು ಒಡೆದು ಹಾನಿಗೊಳಿಸಿದ್ದು ಹಣ ಕಳವುಗೈಯಲು ಯತ್ನಿಸಿದ್ದ. ಈ ಬಗ್ಗೆ ಉಪ್ಪಿನಂಗಡಿ ಎಸ್ ಬಿಐ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶ್ರೀಧರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ಆರೋಪಿ ಸವಣೂರು ಗ್ರಾಮದ ನಿವಾಸಿ ಸಮೀರ್ ಯಾನೆ ಅಮ್ಮಿ (23) ಎಂಬಾತನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

23-year-old youth have been arrested by Uppinangady police while he was robbing an ATM of State Bank of India in the city.