ಮಂಡೆಕೋಲು : ಇರ್ತಲೆ ಹಾವು ಮಾರಾಟಕ್ಕೆ ಒಯ್ಯುತ್ತಿದ್ದ ಐವರು ಆರೋಪಿಗಳ ಸೆರೆ

05-05-21 03:09 pm       Mangalore Correspondent   ಕ್ರೈಂ

ಇರ್ತಲೆ ಹಾವನ್ನು ಒಯ್ಯುತ್ತಿದ್ದ ಕೇರಳ ಮೂಲದ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಸುಳ್ಯ, ಮೇ 5 : ಕಾರಿನಲ್ಲಿ ಇರ್ತಲೆ ಹಾವನ್ನು ಒಯ್ಯುತ್ತಿದ್ದ ಕೇರಳ ಮೂಲದ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ. ತೂಕದ ಇರ್ತಲೆ ಹಾವನ್ನು ಸಾಗಿಸುತ್ತಿದ್ದರು. ಈ ವೇಳೆ ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು, ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದತ್ತ ಚಲಾಯಿಸಿದ್ದಾರೆ. ಇದನ್ನು ಕಂಡ ಪೊಲೀಸರು ಕಾರನ್ನು ಚೇಸ್ ಮಾಡಿ ಪರಿಶೀಲಿಸಿದಾಗ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವುದು ತಿಳಿದುಬಂತು. 

ಕಾಸರಗೋಡು ಜಿಲ್ಲೆಯ ಪಯ್ಯನ್ನೂರು ನಿವಾಸಿ ಜಬ್ಬಾರ್, ಅಶ್ರಫ್, ರಾಜೇಶ್, ರಮೇಶನ್, ಬಿಪಿನ್ ಆರೋಪಿಗಳು. ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮೆಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್.ಐ. ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್ , ಸಂತೋಷ್, ಸರಸ್ವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Five of Keralites held with sand boa snake have been arrested by forest officials in Sullia.