ಬ್ರೇಕಿಂಗ್ ನ್ಯೂಸ್
09-05-21 03:22 pm Mangaluru Correspondent ಕ್ರೈಂ
ಮಂಗಳೂರು, ಮೇ 9: 14 ದಿನಗಳ ಕಠಿಣ ಲಾಕ್ಡೌನ್ ರಾಜ್ಯದಲ್ಲಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಫೇಸ್ಬುಕ್ ನಲ್ಲಿ ಲೈವ್ ಬಂದು ಸಾರ್ವಜನಿಕರ ಜೊತೆ ಸಂವಾದ ನಡೆಸಿದ್ದಾರೆ. ಜನರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದ್ದಾರೆ.
ಮೊದಲಿಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮತ್ತು ಪೊಲೀಸ್ ಸಿಬಂದಿಯ ಸಾಮರ್ಥ್ಯದ ಬಗ್ಗೆ ಹೇಳಿದ್ದಾರೆ. ಆಬಳಿಕ ಮಂಗಳೂರು ಸುಸಜ್ಜಿತ ನಗರ. ಈ ಭಾಗದ ಜನರು ತುಂಬ ಸೆನ್ಸಿಟಿವ್ ಮತ್ತು ಬುದ್ಧಿವಂತರು. ಸರಕಾರದ ಮಾರ್ಗಸೂಚಿಯನ್ನು ಸೂಕ್ತವಾಗಿ ಪಾಲನೆ ಮಾಡಿ, ಕೊರೊನಾ ಮಹಾಮಾರಿಯನ್ನು ದೂರವಿಡೋಣ ಎನ್ನುತ್ತಲೇ ಜನರು ಕೇಳಿದ ಪ್ರಶ್ನೆಗಳನ್ನು ಓದಿ ಹೇಳಿಕೊಂಡು ಅದಕ್ಕೆ ಉತ್ತರಿಸುತ್ತಾ ಹೋಗಿದ್ದಾರೆ.
ಲ್ಯಾಪ್ಟಾಪ್ ಸ್ಕ್ರೀನಲ್ಲಿ ಬರುತ್ತಿದ್ದ ಪ್ರಶ್ನೆಗಳನ್ನು ಓದುತ್ತಲೇ ಸಂಯಮದಿಂದ ಉತ್ತರಿಸುತ್ತಿದ್ದುದಕ್ಕೆ ಹೆಚ್ಚಿನ ಜನ ಅಭಿನಂದನೆ ಹೇಳಿದ್ದಾರೆ. ಕೆಲವರು ಪೊಲೀಸರಿಗೆ ಕೌಂಟರ್ ಪ್ರಶ್ನೆಗಳನ್ನೂ ಮುಂದಿಟ್ಟಿದ್ದರು. ಪೊಲೀಸರಿಗೆ ಕೋವಿಡ್ ಕಾನೂನು ಅಪ್ಲೈ ಆಗಲ್ವೇ.. ಅವರ್ಯಾಕೆ ಗುಂಪಾಗಿ ಇರುತ್ತಾರೆ ಎಂದು ಕೇಳಿದ್ದಾರೆ. ಹೌದು.. ನಿಮ್ಮ ಕಾಳಜಿಯನ್ನು ಒಪ್ಪಿಕೊಳ್ಳುತ್ತೇನೆ. ಮಾರ್ಗಸೂಚಿ ಎಲ್ಲರಿಗೂ ಅನ್ವಯ ಆಗತ್ತೆ. ನಮ್ಮ ಸಿಬಂದಿ ಗುಂಪು ಸೇರದಂತೆ ಮತ್ತು ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡುತ್ತೇನೆ ಎಂದು ಕಮಿಷನರ್ ಹೇಳಿದ್ದಾರೆ.
ಅಲ್ಲದೆ, ಹೆಚ್ಚಿನ ಮಂದಿ ನಾವು ಗ್ರೋಸರಿ ಸಾಮಗ್ರಿ ತರಲು ದ್ವಿಚಕ್ರ ವಾಹನಗಳನ್ನು ಉಪಯೋಗಿಸಬಹುದಾ ಎಂದು ಕೇಳಿದ್ದಾರೆ. ಮಾರ್ಗಸೂಚಿ ಪ್ರಕಾರ, ಯಾವುದೇ ವಾಹನ ಬಳಕೆ ಮಾಡಲು ಅವಕಾಶ ಇಲ್ಲ. ಮಂಗಳೂರಿನಂಥ ಮುಂದುವರಿದ ನಗರದಲ್ಲಿ ಎಲ್ಲ ಕಡೆಯೂ ಗ್ರೋಸರಿ, ಮೀನು, ತರಕಾರಿ ಮಾರುಕಟ್ಟೆ ಇರುತ್ತದೆ. ಜನರು ತಮ್ಮ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗಿ ಅಗತ್ಯ ಸಾಮಗ್ರಿ ತರಲು ತೊಂದರೆ ಇಲ್ಲ. ವಯಸ್ಸಾದವರು ಚೆಕ್ ಪೋಸ್ಟಿನಲ್ಲಿರುವ ಸಿಬಂದಿಯಲ್ಲಿ ಸೂಕ್ತ ಕಾರಣ ಕೊಟ್ಟು, ವಾಹನ ಬಳಕೆ ಮಾಡಬಹುದು ಎಂದು ಕಮಿಷನರ್ ಹೇಳಿದ್ದಾರೆ.
ಕೆಲವರು ಬೆಳಗ್ಗೆ ಹತ್ತು ಗಂಟೆ ವರೆಗೆ ಮಾತ್ರ ಯಾಕೆ. ಅದರಿಂದ ಕಷ್ಟ ಆಗುತ್ತಿದೆ, 12 ಗಂಟೆ ವರೆಗಾದ್ರೂ ಅಗತ್ಯ ಸಾಮಗ್ರಿ ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅಂಥ ಅವಕಾಶ ಇಲ್ಲ. ಸರಕಾರ ಏನು ಮಾರ್ಗಸೂಚಿ ಕೊಟ್ಟಿದೆಯೋ ಅದನ್ನು ಪಾಲನೆ ಮಾಡಬೇಕು ಎಂದಿದ್ದಾರೆ. ಇನ್ನು ಕೆಲವರು ಮಾರ್ಗಸೂಚಿಯಲ್ಲಿ ಕೆಲವು ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿದೆ, ಯಾವುದಕ್ಕೆ ಅವಕಾಶ ಇದೆ ಹೇಳಬಹುದಾ ಎಂದು ಕೇಳಿದ್ದಾರೆ. ಅದಕ್ಕೆ ಕಮಿಷನರ್, ಸರಕಾರದ ಮಾರ್ಗಸೂಚಿ ಜಾಲತಾಣದಲ್ಲಿದೆ, ಸಿಕ್ಕಿರದಿದ್ದರೆ ಯಾವುದಕ್ಕೆ ಅವಕಾಶ ಇದೆ ಎಂಬ ಬಗ್ಗೆ ನಾವೇ ಇಲ್ಲಿ ಪೋಸ್ಟ್ ಮಾಡ್ತೀವಿ. ಪ್ರತ್ಯೇಕ ಪಟ್ಟಿಯೇ ಇದೆ ಎಂದು ಹೇಳಿದ್ದಾರೆ.
ಮೆಡಿಕಲ್ ಅಂಗಡಿಗಳ ಸಿಬಂದಿಗೆ ಪ್ರತ್ಯೇಕ ಪಾಸ್ ಕೊಡಬಹುದೇ ಎಂಬ ಪ್ರಶ್ನೆಯೂ ಬಂದಿತ್ತು. ಅದಕ್ಕೆ, ಪ್ರತ್ಯೇಕ ಪಾಸ್ ಬೇಕಾಗಿಲ್ಲ. ನಿಮ್ಮ ಮೆಡಿಕಲ್ ಸ್ಟೋರ್ ಗಳಿಗೆ ಕೊಡಲಾಗಿರುವ ಲೈಸನ್ಸ್ ಅಥವಾ ಇನ್ನಿತರ ದಾಖಲೆ ಪತ್ರಗಳನ್ನು ತೋರಿಸಿದರೆ ಸಾಕು, ಪೊಲೀಸ್ ಸಿಬಂದಿ ಬಿಡುತ್ತಾರೆ ಎಂದು ಹೇಳಿದ್ದಾರೆ. ಬಂದರಿನಲ್ಲಿ ಹೋಲ್ ಸೇಲ್ ವ್ಯಾಪಾರಸ್ಥರಿಗೆ ಅನ್ ಲೋಡಿಂಗ್ ಸಮಸ್ಯೆ ಆಗಿದೆ, ಸಮಯ ಸಾಕಾಗಲ್ಲ ಎಂದು ಒಬ್ಬರು ಪ್ರಶ್ನೆ ಮಾಡಿದ್ದರು. ಸಮಯ ಹೆಚ್ಚು ಕೊಡಲು ಸಾಧ್ಯವಾಗಲ್ಲ. ಅದೇ ವೇಳೆಯಲ್ಲಿ ಎಲ್ಲವನ್ನೂ ಮಾಡಬೇಕು. ಅಂಥದ್ದೇನಾದ್ರೂ ಪ್ರಾಬ್ಲಂ ಇದ್ದರೆ ಸ್ಥಳೀಯ ಠಾಣೆಯನ್ನು ಸಂಪರ್ಕಿಸಿ, ಅವರು ಸಹಾಯ ಮಾಡುತ್ತಾರೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಕೆಲವರು ಪೊಲೀಸರು ತುಂಬ ಕಷ್ಟ ಪಡುತ್ತಿದ್ದಾರೆ, ಅವರಿಗೆ ಊಟ, ನೀರು ಕೊಡಲು ಅನುಮತಿ ಕೊಡಿ ಎಂದಿದ್ದಾರೆ. ನಿಮ್ಮ ಕಾಳಜಿಗೆ ಥ್ಯಾಂಕ್ಸ್. ಸದ್ಯಕ್ಕೆ ಅಂಥ ತೊಂದರೆ ಬಂದಿಲ್ಲ. ಊಟ, ನೀರು ಎಲ್ಲವನ್ನೂ ಒದಗಿಸಲಾಗುತ್ತಿದೆ, ಸಮಸ್ಯೆಯಾದರೆ ಖಂಡಿತ ಕೇಳುತ್ತೀವಿ ಎಂದಿದ್ದಾರೆ. ಎಲ್ಲ ಪೊಲೀಸರಿಗೆ ವ್ಯಾಕ್ಸಿನ್ ಮಾಡಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಕಮಿಷನರೇಟ್ ವ್ಯಾಪ್ತಿಯ 90 ಪರ್ಸೆಂಟ್ ಸಿಬಂದಿಗೆ ಮೊದಲ ಡೋಸ್ ಆಗಿದೆ, 80 ಪರ್ಸೆಂಟ್ ಮಂದಿಗೆ ಸೆಕಂಡ್ ಡೋಸ್ ಕೂಡ ಆಗಿದೆ. ಉಳಿದ ಕೆಲವರು ಈಗಷ್ಟೇ ತೆಗೆದುಕೊಳ್ಳುತ್ತಿದ್ದಾರೆ. ಒಂದಷ್ಟು ಮಂದಿ ವೈದ್ಯರ ಸೂಚನೆಯಂತೆ ಸದ್ಯಕ್ಕೆ ಡೋಸ್ ಪಡೆಯುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾಗಿ ಕಮಿಷನರ್ ಹೇಳಿದರು.
ಬೆಳಗ್ಗೆ 11ರಿಂದ 12ರ ನಡುವೆ ಲೈವ್ ಬಂದು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಕಮಿಷನರ್ ಶಶಿಕುಮಾರ್ ಅವರ ನಡೆಯ ಬಗ್ಗೆ ಹೆಚ್ಚಿನ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
Watch Video: IPS SHASHI KUMAR, MANGALORE CITY POLICE
Mangaluru city police commissioner N Shashi Kumar on Sunday, May 9 was Live on Facebook to answer the questions of the general public and also clarified about the guidelines issued by the government to contain the spiking cases of infection in the state.
24-11-24 08:39 pm
Bangalore Correspondent
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
24-11-24 09:13 pm
Mangalore Correspondent
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
MP Captian Brijesh Chowta, Mangalore: ಐಬಿಆರ್...
23-11-24 10:37 pm
24-11-24 04:33 pm
Bangalore Correspondent
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm