ಸುಳ್ಯ ; ಜೂಜಾಟ ನಿರತ ಬಿಜೆಪಿ ಮುಖಂಡ ಸೇರಿ 10 ಮಂದಿ ಬಂಧನ

24-05-21 10:23 am       Mangalore Correspondent   ಕ್ರೈಂ

ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಮಾಜಿ ಜಿ.ಪಂ. ಸದಸ್ಯರೋರ್ವರ ಸಹಿತ 10 ಮಂದಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. 

Photo credits : Representative Image

ಸುಳ್ಯ, ಮೇ 24 : ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಮಾಜಿ ಜಿ.ಪಂ. ಸದಸ್ಯರೋರ್ವರ ಸಹಿತ 10 ಮಂದಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. 

ಎಲಿಮಲೆ ಸಮೀಪದ ನೆಲ್ಲೂರು ಕೆಮ್ರಾಜೆಯ ಮೋಂಟಡ್ಕ ಎಂಬಲ್ಲಿ ಆದಿತ್ಯವಾರ ಆರೋಪಿಗಳು ಜೂಜಾಟ ನಿರತರಾಗಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ದಾಳಿ ನಡೆಸಿದ್ದಾರೆ.‌ ಸುಳ್ಯ ಎಸ್ ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದು ವಾಹನ ಸಹಿತ 10 ಜನರನ್ನ ಬಂದಿಸಿದ್ದು ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಮಾಜಿ ಜಿಪಂ ಸದಸ್ಯ, ಬಿಜೆಪಿ ಮುಖಂಡ ಗಂಗಾಧರ ಕೇಪಳಕಜೆ, ಗೋಪಾಲಕೃಷ್ಣ, ಗಂಗಾಧರ, ಚಂದ್ರಶೇಖರ, ರಾಮ, ಸೋಮಶೇಖರ, ಜನಾರ್ದನ, ದೀಪಕ್, ಮೋಹನದಾಸ್, ಅಶೋಕ, ದಯಾನಂದ ಬಂಧಿತರು. 

ಆರೋಪಿಗಳ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಕಾಯ್ದೆಯಡಿ ಮತ್ತು ಅಕ್ರಮವಾಗಿ ಕೂಟ ಸೇರಿಕೊಂಡು ಜೂಜಾಡುತ್ತಿದ್ದ ಬಗ್ಗೆ ಕೇಸು ದಾಖಲಾಗಿದೆ. 

ಸ್ಥಳದಲ್ಲಿದ್ದ ಒಂದು ಕಾರು ಹಾಗು ಒಂದು ಜೀಪನ್ನ ಹೊರತುಪಡಿಸಿ 12 ಬೈಕ್ ಗಳನ್ನು ಲಾರಿಯಲ್ಲಿ ತುಂಬಿಸಿ ಪೊಲೀಸರು ಕೊಂಡೊಯ್ದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Sullia Police raid on Ilegal Gambling in which ten persons including BJP leader and Gram Panchayath Member have been arrested.