ಬ್ರೇಕಿಂಗ್ ನ್ಯೂಸ್
29-08-20 04:29 pm Mangalore Reporter ಕ್ರೈಂ
ಕಾಸರಗೋಡು, ಆಗಸ್ಟ್ 29: ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಮತ್ತು ಶಾಸಕರ ಒಡೆತನದ ಫ್ಯಾಷನ್ ಗೋಲ್ಡ್ ಜುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯ ತಂಗಳ್ ವಿರುದ್ಧ ಭಾರೀ ವಂಚನೆ ಪ್ರಕರಣ ದಾಖಲಾಗಿದೆ. ಕಾಸರಗೋಡಿನ ಚಂದೇರಾ ಪೊಲೀಸ್ ಠಾಣೆಯಲ್ಲಿ ಮೂವರು ಈಗ ದೂರು ದಾಖಲಿಸಿದ್ದು ಇನ್ನೂ ನೂರಾರು ಮಂದಿ ಪೊಲೀಸ್ ಠಾಣೆ ಮೆಟ್ಟಿಲೇರಲು ತಯಾರಿ ನಡೆಸಿದ್ದಾರೆ.
ಮತ್ತೊಂದು ಐಎಂಎ ಜುವೆಲ್ಲರಿ ಮಾದರಿಯ ವಂಚನೆ ಪ್ರಕರಣ ಇದಾಗಿದ್ದು ದೊಡ್ಡ ಮಟ್ಟಿನ ಲಾಭಾಂಶ ನೀಡುವುದಾಗಿ ನಂಬಿಸಿ ನೂರಾರು ಮಂದಿಗೆ ವಂಚನೆ ಎಸಗಿದ್ದಾರೆ. ವಕ್ಫ್ ಇಲಾಖೆಗೆ ಸೇರಿದ ಆಸ್ತಿಯನ್ನೂ ಕಬಳಿಸಿ, ಫ್ಯಾಷನ್ ಗೋಲ್ಡ್ ಉದ್ಯಮಕ್ಕೆ ಬಳಸಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.
ಪಡನ್ನ, ತೃಕರೀಪುರ, ವಲಿಯಪರಂಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಕ್ಫ್ ಇಲಾಖೆಗೆ ಸೇರಿದ ಮಸೀದಿ ಕಮಿಟಿಗಳಿಂದಲೂ ಕಾನೂನು ಉಲ್ಲಂಘಿಸಿ ಹಣ ಸಂಗ್ರಹಿಸಲಾಗಿದೆ. ಕೇರಳ ವಕ್ಫ್ ಬೋರ್ಡ್ ಕಮಿಟಿಯ ಪರವಾನಗಿ ಪಡೆಯದೆ ಈ ಹೂಡಿಕೆ ಮಾಡಲಾಗಿದೆ ಎಂದು ಕಮ್ಯುನಿಸ್ಟ್ ಮುಖಂಡರು ಆರೋಪಿಸಿದ್ದಾರೆ.
ಶಾಸಕ ಕಮರುದ್ದೀನ್ ಫ್ಯಾಷನ್ ಗೋಲ್ಡ್ ಸಂಸ್ಥೆಯ ಅಧ್ಯಕ್ಷನಾಗಿದ್ದರೆ, ಟಿ.ಕೆ. ಪೂಕೋಯ ತಂಗಳ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪೂಕೋಯ ತಂಗಳ್, ಸುನ್ನಿ ಮಹಲ್ ಫೆಡರೇಶನ್ ಜಿಲ್ಲಾಧ್ಯಕ್ಷರೂ ಆಗಿರುವುದಲ್ಲದೆ, ಮುಸ್ಲಿಂ ಜಮಾತ್ ಕಮಿಟಿಯ ಪ್ರಭಾವಿ ನಾಯಕ ಆಗಿರುವುದರಿಂದ ವಕ್ಫ್ ಆಸ್ತಿ ಕಬಳಿಸಿದ್ದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎನ್ನುವಂತಾಗಿದೆ. ಪ್ರತಿ ತಿಂಗಳು ಡಿವಿಡೆಂಡ್ ನೀಡುವ ಭರವಸೆಯಲ್ಲಿ ಹಲವರು ಫ್ಯಾಷನ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿದ್ದರು. ಈ ಪೈಕಿ ಬಹುತೇಕ ಮಂದಿ ಈಗ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಕಳಕೊಂಡು ಊರಿಗೆ ಮರಳಿದ್ದು ತಿಂಗಳ ಡಿವಿಡೆಂಡ್ ಕೂಡ ಸಿಗದೆ ಮರಳಿ ತಮ್ಮ ಹಣ ಮತ್ತು ಜುವೆಲ್ಲರಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಕಾಸರಗೋಡು, ಚೆರುವತ್ತೂರು, ಪಯ್ಯನ್ನೂರು ಸೇರಿದಂತೆ ಮೂರು ಕಡೆಯಲ್ಲಿ ಫ್ಯಾಷನ್ ಗೋಲ್ಡ್ ಜುವೆಲ್ಲರಿಯನ್ನು ಮುಚ್ಚಿರುವುದಲ್ಲದೆ, ಸಂಸ್ಥೆಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡಿರುವು ಈಗ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಫ್ಯಾಷನ್ ಗೋಲ್ಡ್ ಸಂಸ್ಥೆಯಲ್ಲಿ 800 ಕ್ಕೂ ಹೆಚ್ಚು ಹೂಡಿಕೆದಾರರಿದ್ದು ಆರು ತಿಂಗಳ ಹಿಂದೆ ಠೇವಣಿ ಇರಿಸಿದ್ದ ಮದರಸಾ ಶಿಕ್ಷಕ ಸೇರಿ ಏಳು ಮಂದಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ಸಲ್ಲಿಸಿದ್ದರು.
ಚಂದೇರಾ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಶುಕೂರ್ (30 ಲಕ್ಷ ರೂ.), ಎಂ.ಟಿ.ಪಿ ಸುಹರಾ (15 ಪವನ್ ಚಿನ್ನ ಮತ್ತು ಒಂದು ಲಕ್ಷ ರೂ.), ವಲಿಯಾಪರಂಬ ಇ.ಕೆ.ಆರಿಫಾ (3 ಲಕ್ಷ ರೂ) ಈಗ ದೂರು ದಾಖಲಿಸಿದ್ದಾರೆ. ಮೂರು ಜುವೆಲ್ಲರಿ ಶಾಖೆಗಳನ್ನು ಮುಚ್ಚಿದ್ದರಿಂದ ಸುಮಾರು 150 ಕೋಟಿ ವಂಚನೆಯಾಗಿದೆ ಎನ್ನಲಾಗ್ತಿದೆ. ಫ್ಯಾಷನ್ ಗೋಲ್ಡ್ ಸಂಸ್ಥೆ ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದು ನಷ್ಟದ ಹಿನ್ನೆಲೆ ಅದನ್ನೂ ಮಾರಾಟ ಮಾಡಿದ್ದು ಬೆಂಗಳೂರಿನ ಐಎಂಎ ಜುವೆಲ್ಲರಿ ಮಾದರಿಯ ಮತ್ತೊಂದು ವಂಚನಾ ಜಾಲ ಬಯಲಾಗಿದೆ.
ಶಾಸಕನಿಂದ ವಕ್ಫ್ ಆಸ್ತಿ ಗೋಲ್ಮಾಲ್ !
ತೃಕ್ಕರೀಪುರದಲ್ಲಿ ಶಾಸಕ ಕಮರುದ್ದೀನ್ ಮತ್ತು ಇತರೇ ಆರು ಮುಸ್ಲಿಂ ಲೀಗ್ ಮುಖಂಡರು ಟ್ರಸ್ಟಿ ಆಗಿರುವ ಶಿಕ್ಷಣ ಸಂಸ್ಥೆಯಿದ್ದು ಸಂಸ್ಥೆಯ ಹೆಸರಲ್ಲಿ ವಕ್ಫ್ ಇಲಾಖೆಗೆ ಸೇರಿದ ಎರಡು ಎಕ್ರೆ ಭೂಮಿಯನ್ನು ಅಕ್ರಮವಾಗಿ ಖರೀದಿಸಲಾಗಿದೆ ಎನ್ನಲಾಗ್ತಿದೆ. ಆರು ಕೋಟಿ ಮಾರುಕಟ್ಟೆ ಬೆಲೆ ಇರುವ ಭೂಮಿಯನ್ನು ಕೇವಲ 30 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಜಾಗ ವಕ್ಪ್ ಇಲಾಖೆಗೆ ಸೇರಿದ ಜಾಮಿಯಾ ಸಾದಿಯಾ ಇಸ್ಲಾಮಿಯಾಗೆ ಸೇರಿದ್ದಾಗಿದೆ. ವಿಶೇಷ ಅಂದರೆ, ಜಾಮಿಯಾ ಸಾದಿಯಾ ಸಂಸ್ಥೆಯ ಅಧ್ಯಕ್ಷರೂ ಪೂಕೋಯ ತಂಗಳ್ ಆಗಿರುವುದು. ಈ ಭೂಮಿಯನ್ನು ವಕ್ಪ್ ಬೋರ್ಡ್ ಅನುಮತಿ ಇಲ್ಲದೆ ಶಾಸಕ ಕಮರುದ್ದೀನ್ ಒಡೆತನದ ಶಿಕ್ಷಣ ಸಂಸ್ಥೆಗೆ ಮಾರಾಟ ಮಾಡಿ ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ವಕ್ಫ್ ಆ್ಯಕ್ಟ್ 52 ಎ ಪ್ರಕಾರ, ಇಲಾಖೆಯ ಬೋರ್ಡ್ ಪರವಾನಗಿ ಇಲ್ಲದೆ ವಕ್ಪ್ ಆಸ್ತಿಯ ಖರೀದಿ ಅಥವಾ ಮಾರಾಟ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು ಆರೋಪ ಸಾಬೀತಾದರೆ ಎರಡು ವರ್ಷದ ಕಠಿಣ ಸಜೆಗೆ ಗುರಿಯಾಗಬೇಕಾಗುತ್ತದೆ.
ಮಾರಾಟ ಮಾಡಿರುವ ಎರಡು ಎಕ್ರೆ ಜಾಗದಲ್ಲಿ ಹತ್ತು ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣದ ಎರಡಂತಸ್ತಿನ ಕಟ್ಟಡ ಇದ್ದು ಅದರಲ್ಲಿ ಜೆಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದೆ. ಮತ್ತೊಂದು 1000 ಸ್ಕ್ವೇರ್ ಫೀಟ್ ವಿಸ್ತೀರ್ಣದ ಕಟ್ಟಡದಲ್ಲಿ ಮಸೀದಿ ಇದೆ. ಇದೇ ಜಾಗದಲ್ಲಿ ಮತ್ತೆರಡು ಕಟ್ಟಡಗಳೂ ಇದ್ದು ಈ ಬಗ್ಗೆ ಕೇರಳ ರಾಜ್ಯ ವಕ್ಫ್ ಬೋರ್ಡ್ ಸಿಇಒ ಬಿ.ಎಂ.ಜಮಾಲ್ ಶೋಕಾಸ್ ನೋಟಿಸ್ ನೀಡಿದ್ದಾರೆ.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm