ಬ್ರೇಕಿಂಗ್ ನ್ಯೂಸ್
20-11-25 06:01 pm Mangalore Correspondent ಕ್ರೈಂ
ಮಂಗಳೂರು, ನ.20 : ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪರಿಸರದಲ್ಲಿ ಲಕ್ಕಿ ಸ್ಕೀಮ್ ಗಳ ಹಾವಳಿ ಮಿತಿಮೀರಿದ್ದು ಈಗಾಗಲೇ ಕೆಲವರು ಸ್ಕೀಮ್ ಗಳ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಗ್ರಾಹಕರಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ. ಇವುಗಳ ಸಾಲಿಗೆ ಹೊಸತಾಗಿ ಬಿಎಂಆರ್ ಗ್ರೂಪ್ ಸೇರ್ಪಡೆಯಾಗಿದ್ದು ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಗ್ರಾಹಕರು ಬಿಎಂಆರ್ ಗ್ರೂಪ್ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆಗೈದ ಘಟನೆ ಕೃಷ್ಣಾಪುರದಲ್ಲಿ ನಡೆದಿದೆ.
ಬಿಎಂಆರ್ ಗ್ರೂಪಿನ ದಾವೂದ್ ಹಕೀಮ್ ಎಂಬಾತ ಈ ವಂಚನೆ ಎಸಗಿದ್ದು ದುಬಾರಿ ಗಿಫ್ಟ್ ನೀಡುವುದಾಗಿ ಹೇಳಿ 4-5 ವರ್ಷಗಳಿಂದ ಲಕ್ಕಿ ಸ್ಕೀಮ್ ನಡೆಸುತ್ತಿದ್ದಾನೆ. ಪ್ರತಿ ತಿಂಗಳು ದುಬಾರಿ ಕಾರು, ಫ್ಲಾಟ್ ಗಿಫ್ಟ್ ಸಿಗುವ ಆಮಿಷದಲ್ಲಿ ಸಾವಿರಾರು ಗ್ರಾಹಕರು ಹಣ ಕಟ್ಟಿದ್ದರು. 5 ವರ್ಷದಲ್ಲಿ ಎಂಟು ಸೀಸನ್ ಲಕ್ಕಿ ಸ್ಕೀಮ್ ಮಾಡಿದ್ದು ಸಾವಿರಾರು ಮಂದಿಗೆ ಕಟ್ಟಿದ ಹಣವೇ ಸಿಕ್ಕಿಲ್ಲ ಎಂಬ ಆರೋಪ ಇದೆ.




ಆದರೆ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿಯೇ ಗ್ರಾಹಕರನ್ನು ನಂಬಿಸಿಕೊಂಡು ಬಂದಿದ್ದ. ಆದರೆ ಇಲ್ಲಿಯವರೆಗೂ ಹಣ ಹಿಂತಿರುಗಿಸಿಲ್ಲ ಎಂದು ಗ್ರಾಹಕರು ಆಕ್ರೋಶಗೊಂಡು ಗುರುವಾರ ಬೆಳಗ್ಗೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಹಣ ಕಟ್ಟಿ ಕೈಸುಟ್ಟುಕೊಂಡಿದ್ದು ಕಚೇರಿ ಬಳಿಗೆ ಬಂದು ಗಲಾಟೆ ನಡೆಸಿದ್ದಾರೆ.
ಸುರತ್ಕಲ್ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ವಂಚನೆಯ ಬಗ್ಗೆ ದೂರು ನೀಡುವಂತೆ ಹೇಳಿದ್ದು ಆರೋಪಿತ ದಾವೂದ್ ಹಕೀಮ್ ನನ್ನು ಠಾಣೆಗೆ ಕರೆದೊಯ್ದು ಕೂರಿಸಿದ್ದಾರೆ. ಆದರೆ ಸಂಜೆಯ ವರೆಗೂ ವಂಚನೆಗೊಳಗಾದವರು ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ನಾಲ್ಕು ತಿಂಗಳ ಹಿಂದೆ ಎರಡು ಲಕ್ಕಿ ಸ್ಕೀಮ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆಬಳಿಕ ಬಡ್ಸ್ ಏಕ್ಟ್ ಮೂಲಕ ಅವರ ಸೊತ್ತುಗಳನ್ನು ಜಪ್ತಿ ಮಾಡಲು ಜಿಲ್ಲಾಡಳಿತಕ್ಕೆ ಬರೆದಿದ್ದಾರೆ. ಸೊತ್ತು ಜಪ್ತಿಗೆ ಮಂಗಳೂರು ವಿಭಾಗಾಧಿಕಾರಿಗೆ ಹೊಣೆ ನೀಡಲಾಗಿದ್ದರೂ ಅವರು ಮೀನ ಮೇಷ ಎಣಿಸುತ್ತಿದ್ದಾರೆ.
ಸುರತ್ಕಲ್ ವ್ಯಾಪ್ತಿಯಲ್ಲಿ ಇದೇ ರೀತಿಯ ಹತ್ತಕ್ಕೂ ಹೆಚ್ಚು ಲಕ್ಕಿ ಸ್ಕೀಮ್ ಗಳು ಕಾರ್ಯ ನಿರ್ವಹಿಸುತ್ತಿದ್ದು ರಾಜಾರೋಷವಾಗಿ ಜನರಿಗೆ ಟೋಪಿ ಹಾಕುತ್ತಿದೆ. ಪ್ರತಿ ತಿಂಗಳು ಐಷಾರಾಮಿ ಕಾರು, ಫ್ಲಾಟ್ ನೀಡುವ ಆಮಿಷದಲ್ಲಿ ಜನರನ್ನು ಮಂಗ ಮಾಡುತ್ತಿದ್ದಾರೆ. ಇಂಥವರಿಗೆ ಪ್ರಭಾವಿ ರಾಜಕಾರಣಿಗಳ ನಂಟು ಇರುವುದರಿಂದ ಪೊಲೀಸರು ಮಾತ್ರ ಮೌನ ವ್ರತದಲ್ಲಿದ್ದಾರೆ.
The menace of “lucky scheme” scams continues to grow in the Surathkal, Katipalla, and Krishnapura areas, with yet another major fraud coming to light. After several groups vanished with crores collected from local residents, BMR Group has now joined the list of scam operators.
20-11-25 03:30 pm
HK News Desk
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
19-11-25 06:47 pm
HK News Desk
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
20-11-25 01:42 pm
Udupi Correspondent
ಡಿ.3ರಂದು ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧೀಜಿ 'ಸಂವ...
19-11-25 10:46 pm
ಯಕ್ಷಗಾನದ ಬಗ್ಗೆ ಅವಹೇಳನ ; ಬಿಳಿಮಲೆ ಅವರನ್ನು ಅಧ್ಯಕ...
19-11-25 07:28 pm
Mangalore, Sbi General Insurance, Consumer Co...
19-11-25 01:01 pm
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
20-11-25 06:01 pm
Mangalore Correspondent
Bangalore ATM Van Robbery, Update: ಬೆಂಗಳೂರಿನ...
20-11-25 11:51 am
B C Road, Crime, Mangalore: ಗ್ರಾಹಕಿ ಸೋಗಿನಲ್ಲಿ...
19-11-25 11:17 pm
Shri Tatvamasi Charitable Trust, Fraud: ಸುಳ್ಯ...
19-11-25 09:26 pm
Mangalore Sukhananda Shetty murder, Arrest: ಸ...
19-11-25 07:55 pm