ಬ್ರೇಕಿಂಗ್ ನ್ಯೂಸ್
13-06-21 04:51 pm Satish, Bengaluru Correspondent ಕ್ರೈಂ
ಬೆಂಗಳೂರು, ಜೂನ್ 13: ಕರ್ನಾಟಕದ ಸಿಐಡಿ ವಿಭಾಗದ ಸೈಬರ್ ಕ್ರೈಮ್ ಪೊಲೀಸರು 290 ಕೋಟಿಗೂ ಮಿಕ್ಕಿದ ಹವಾಲಾ ದಂಧೆ ಮತ್ತು ಹಣ ದ್ವಿಗುಣದ ಆಮಿಷವೊಡ್ಡಿ ಮೋಸ ಮಾಡುವ ಜಾಲವನ್ನು ಭೇದಿಸಿದ್ದಾರೆ. ಈ ಸಂಬಂಧ ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅನಾಸ್ ಅಹ್ಮದ್ ಎಂಬಾತ ಈ ಜಾಲದ ಕಿಂಗ್ ಪಿನ್ ಎಂದು ಪೊಲೀಸರು ಗುರುತಿಸಿದ್ದಾರೆ. ಅನಾಸ್ ಅಹ್ಮದ್, ಚೀನಾ ಮೂಲದ ಹವಾಲಾ ವಹಿವಾಟುದಾರರ ಜೊತೆ ಹತ್ತಿರದ ನಂಟು ಹೊಂದಿದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲದೆ, ಈತ ಚೀನಾ ಮೂಲದ ಯುವತಿಯನ್ನು ಮದುವೆಯಾಗಿದ್ದ. ಚೀನಾದಲ್ಲೇ ಕಾಲೇಜು ಶಿಕ್ಷಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪವರ್ ಬ್ಯಾಂಕ್ ಎನ್ನುವ ಹೆಸರಿನ ಮೊಬೈಲ್ ಏಪ್ಸ್ ಮೂಲಕ ಕಾರ್ಯಾಚರಿಸುತ್ತಿದ್ದ ಈ ಜಾಲಕ್ಕೆ ಹಣ ದ್ವಿಗುಣದ ಆಮಿಷವೊಡ್ಡಿ ಅನಾಸ್ ಅಹ್ಮದ್, ಗ್ರಾಹಕರನ್ನು ಸೇರ್ಪಡೆ ಮಾಡುತ್ತಿದ್ದ. ಹಣ ಹೂಡಿಕೆ ಮಾಡುವ ಗ್ರಾಹಕರಿಗೆ ಆರಂಭದಲ್ಲಿ ಒಂದಷ್ಟು ರಿಟರ್ನ್ಸ್ ಬರುತ್ತಿದ್ದು ಆನಂತರ ಹಣ ಬರುವುದು ಸ್ಥಗಿತ ಆಗುತ್ತಿತ್ತು. ಇದಲ್ಲದೆ, ಹಣದ ವಹಿವಾಟು ಮಾಡುವುದಕ್ಕಾಗಿ ನಕಲಿ ಶೆಲ್ ಕಂಪನಿಗಳನ್ನೂ ರೆಡಿ ಮಾಡುತ್ತಿದ್ದರು. ಈಗ ಬಂಧಿತರಲ್ಲಿ ಇಬ್ಬರು ಚೀನಾ ಪ್ರಜೆಗಳು, ಇಬ್ಬರು ಟೆಬೆಟ್ ಪ್ರಜೆಗಳಾಗಿದ್ದಾರೆ. ಅಲ್ಲದೆ, ಐವರು ಬೆಂಗಳೂರು, ದೆಹಲಿ, ಸೂರತ್ ನಿವಾಸಿಗಳಾಗಿದ್ದು, ತಾವು ಕಂಪನಿಯ ನಿರ್ದೇಶಕರು ಎಂದು ಹೇಳಿಕೊಂಡಿದ್ದರು.
ಮಾಹಿತಿ ಪ್ರಕಾರ, ಈ ಪೈಕಿ ಚೀನಾ ಪ್ರಜೆಗಳು ಹಲವಾರು ಶೆಲ್ ಕಂಪನಿಗಳನ್ನು ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಕೆಲಸ ಮಾಡುತ್ತಿದ್ದರು. ಭಾರತ ಮತ್ತು ಟಿಬೆಟಿನ ಸಾವಿರಾರು ಮಂದಿ ಈ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಕೋಟ್ಯಂತರ ರೂಪಾಯಿ ಹಣ ಕಳಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ರೇಝರ್ ಪೇ ಸಾಫ್ಟ್ ವೇರ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯವರು ಸೈಬರ್ ಕ್ರೈಮ್ ಬ್ರಾಂಚ್ ವಿಭಾಗಕ್ಕೆ ದೂರು ನೀಡಿದ್ದರು. ಇದರಂತೆ, ಪೊಲೀಸರು ಬೆನ್ನುಬಿದ್ದು ತನಿಖೆ ನಡೆಸಿದಾಗ ಭಾರೀ ಅಕ್ರಮ ಜಾಲ ಹೊರಬಿದ್ದಿದೆ.
ಪವರ್ ಬ್ಯಾಂಕ್ ಎನ್ನುವ ಆಪ್ ಮೂಲಕ ಹಣ ಹೂಡಿಕೆ ಮಾಡಿದರೆ, ದುಪ್ಪಟ್ಟು ಬಡ್ಡಿ ದಿನವಹಿ ಮತ್ತು ವಾರದ ಅಂತರದಲ್ಲಿ ನೀಡಲಾಗುತ್ತದೆ ಎಂದು ನಂಬಿಸಲಾಗುತ್ತಿತ್ತು. ಹೀಗೆ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ಒಂದಷ್ಟು ಮೊತ್ತ ರಿಟರ್ನ್ಸ್ ರೂಪದಲ್ಲಿ ಕೈಸೇರುತ್ತಿತ್ತು. ಆದರೆ, ಆನಂತರ ಹೂಡಿಕೆ ಮಾಡಿದ ಮೊತ್ತದ ಬಗ್ಗೆ ಕೇಳಿದರೆ, ಉತ್ತರ ಬರುತ್ತಿರಲಿಲ್ಲ. ಅದರ ಹಿಂದಿರುವ ಮಂದಿ ತಪ್ಪಿಸಿಕೊಂಡು ಗ್ರಾಹಕರ ಹೂಡಿಕೆಯ ಹಣ ಗೋತಾ ಆಗುತ್ತಿತ್ತು. ದೇಶದಲ್ಲಿ ಶೆಲ್ ಕಂಪನಿಗಳ ಹೆಸರಲ್ಲಿ ಈ ರೀತಿಯ ಅನಧಿಕೃತ ಕಂಪನಿಗಳು ಸಾವಿರಾರು ಇದ್ದು, ಹಣದ ವರ್ಗಾವಣೆಗೆ ಬಳಕೆಯಾಗುತ್ತದೆ. ಬ್ಯಾಂಕ್ ವಹಿವಾಟಿನ ಬದಲು ತೆರಿಗೆ ತಪ್ಪಿಸಲು ಈ ಮಾದರಿಯ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ. ಇವು ನಕಲಿ ಆಗಿದ್ದರೂ, ಸಾವಿರಾರು ಮಂದಿ ಇದರಲ್ಲಿ ಹಣ ಹೂಡಿಕೆ ಮಾಡುತ್ತಿರುವುದು ಕಂಡುಬಂದಿದೆ.
ಶೆಲ್ ಕಂಪನಿಗಳ ಹಿಂದೆ ಚೀನಾ ಸೇರಿದಂತೆ ವಿದೇಶಿಯರು ಇದ್ದು ಮೊಬೈಲ್ ಏಪ್ಸ್ ಗಳ ಮೂಲಕ ಕಾರ್ಯ ಚಟುವಟಿಕೆ ನಡೆಯುತ್ತದೆ. ಹಣ ದ್ವಿಗುಣದ ಆಮಿಷವೊಡ್ಡಿ ಜನ ಸಾಮಾನ್ಯರಲ್ಲಿಯೂ ಹೂಡಿಕೆ ಮಾಡಿಸಲು ಪ್ರೇರಣೆ ನೀಡುತ್ತಾರೆ. ಬಳಿಕ ವ್ಯವಸ್ಥಿತವಾಗಿ ವಂಚನೆ ಮಾಡಲಾಗುತ್ತದೆ.
Karnataka police have arrested nine people, including four foreign nationals, for their alleged involvement in a hawala racket and busted a money-laundering scam amounting to Rs 290 crore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm