Dharwad Accident, Police Inspector: ಧಾರವಾಡ; ಡಿವೈಡರ್​ಗೆ ಡಿಕ್ಕಿ ಹೊಡೆದು ಧಗಧಗ ಹೊತ್ತಿ ಉರಿದ ಕಾರು ; ರಜೆಗೆಂದು ಊರಿಗೆ ಹೊರಟ ಲೋಕಾಯುಕ್ತ ಇನ್ಸ್‌ಪೆಕ್ಟರ್ ಸುಟ್ಟು ಕರಕಲು

05-12-25 11:20 pm       HK News Desk   ಕರ್ನಾಟಕ

ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದಿದ್ದು,  ಲೋಕಾಯುಕ್ತ ಇನ್ಸ್​​ಪೆಕ್ಟರ್ ಸಜೀವ ದಹನವಾಗಿದ್ದಾರೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಪಂಚಾಕ್ಷರಿ ಸಾಲಿಮಠ ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

ಧಾರವಾಡ, ಡಿ 05 : ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿದಿದ್ದು,  ಲೋಕಾಯುಕ್ತ ಇನ್ಸ್​​ಪೆಕ್ಟರ್ ಸಜೀವ ದಹನವಾಗಿದ್ದಾರೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಪಂಚಾಕ್ಷರಿ ಸಾಲಿಮಠ ಅವರು ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ. ತಮ್ಮ ಐ20 ಕಾರಿನಲ್ಲಿ ಗದಗ ಕಡೆ ಹೊರಟ್ಟಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಡಿವೈಡ್ರ್ ಗೆ ಡಿಕ್ಕಿಯಾಗಿ ಬಳಿಕ ಬೆಂಕಿ ಹೊತ್ತಿಕೊಂಡಿದೆ. 

ಕಾರು ನೋಡ ನೋಡುತ್ತಿದ್ದಂತೆಯೇ ಧಗಧಗ ಹೊತ್ತಿ ಉರಿದಿದೆ. ಇದರಿಂದ ಇನ್ಸ್​ಪೆಕ್ಟರ್ ಲಾಕ್ ತೆಗೆದು ಹೊರಬರಲಾಗದೇ ಕಾರಿನೊಳಗೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡು ನೋಡುತ್ತಿದ್ದಂತೆಯೇ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದ್ರೆ, ಅಷ್ಟರೊಳಗೆ ಇನ್ಸ್​ಪೆಕ್ಟರ್​ ಕಾರಿನೊಳಗೆ ಸುಟ್ಟು ಕರಕಲಾಗಿದ್ದಾರೆ.

ಇನ್ಸ್ಪೆಕ್ಟರ್ ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುಲು ಹೋಗುತ್ತಿದ್ದರು. ಆದ್ರೆ, ವಿಧಿ ಅವರನ್ನು ಅರ್ಧ ಹಾದಿಯಲ್ಲೇ ಈ ರೀತಿ ಬಲಿಪಡೆದುಕೊಂಡಿದೆ. ಮೊನ್ನೆ ಅಷ್ಟೇ  ಕರ್ನಾಟಕ ಹಿರಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕಣ ಮಾಸುವ ಮುನ್ನೇ ಕಾರು ಅಪಘಾತದಲ್ಲಿ ಲೋಕಾಯುಕ್ತ ಇನ್ಸ್​ಪೆಕ್ಟರ್​​ ಬಲಿಯಾಗಿದ್ದಾರೆ.

A horrific accident occurred on the outskirts of Annigeri town in Dharwad district, where a car burst into flames after hitting a road divider, killing a Lokayukta Inspector who was trapped inside.