ಬ್ರೇಕಿಂಗ್ ನ್ಯೂಸ್
10-07-21 09:27 pm Giridhar Shetty, Mangalore Correspondent ಕ್ರೈಂ
ಮಂಗಳೂರು, ಜುಲೈ 10: ಮೊನ್ನೆ ಜುಲೈ 5ರಂದು ಬೆಳಕಿಗೆ ಬಂದಿರುವ ಬಲ್ಮಠದ ಮೇಪಲ್ ಮೊಬೈಲ್ ಶೋರೂಂ ಕಳವು ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಮತ್ತು ಕದ್ರಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದರೂ ಕಳ್ಳರ ಬಗ್ಗೆ ಯಾವೊಂದು ಸುಳಿವೂ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಶೋರೂಂನಿಂದ 70 ಲಕ್ಷಕ್ಕೂ ಹೆಚ್ಚು ಬೆಲೆಯ ಏಪಲ್ ಐಫೋನ್ ಗಳನ್ನು ಕಳವು ಮಾಡಿದ್ದಲ್ಲದೆ, ಅಲ್ಲಿರುವ ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದರು. ಬಲ್ಮಠದ ಆಸುಪಾಸಿನಲ್ಲಿ ಸಿಸಿಟಿವಿಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಇನ್ನಿತರ ಡಿಜಿಟಲ್ ಸಾಕ್ಷ್ಯಕ್ಕಾಗಿಯೂ ತಡಕಾಡುತ್ತಿದ್ದಾರೆ. ಆದರೆ, ನಿಶ್ಚಿತ ಸುಳಿವು ಇಲ್ಲದೇ ತಲೆ ಚಚ್ಚಿಕೊಂಡಿದ್ದಾರೆ.
ಜುಲೈ 3 ಮತ್ತು 4ರಂದು ವೀಕೆಂಡ್ ಲಾಕ್ಡೌನ್ ಇದ್ದುದರಿಂದ ಜನ ಹೆಚ್ಚು ಇರಲ್ಲ ಎಂಬುದನ್ನು ಗಮನದಲ್ಲಿಟ್ಟು ಕಳ್ಳರು ಕೃತ್ಯ ಎಸಗಿದ್ದರು. ಅದಕ್ಕೂ ಮುನ್ನ ವಾರದ ಹಿಂದಷ್ಟೇ ಶೋರೂಂ ಓಪನ್ ಆಗಿದ್ದರಿಂದ ಸಾಕಷ್ಟು ಮೊಬೈಲ್ ಗಳು ರಿಪೇರಿಗೆ ಬಂದಿದ್ದವು. ಹೊಸ ಆಫರ್ ಕೂಡ ಇದ್ದುದರಿಂದ ಟ್ಯಾಬ್, ಇನ್ನಿತರ ಮಾಡರ್ನ್ ಮೊಬೈಲ್ ಗಳು ಶೋರೂಂ ಬಂದಿದ್ದವು. ಹೀಗಾಗಿ, ಇವೆಲ್ಲದರ ಬಗ್ಗೆ ಗೊತ್ತಿದ್ದವರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹಿಂಭಾಗದಲ್ಲಿ ಸರಳು ಇಲ್ಲದ ಸಣ್ಣ ಕಿಟಕಿ ಇರುವುದನ್ನು ಗೊತ್ತಿದ್ದವರೇ ಕೃತ್ಯ ಎಸಗಿದ್ದಾರೆ. ಅಲ್ಲದೆ, ಕೃತ್ಯ ಎಸಗಿದ್ದ ಸಂದರ್ಭದಲ್ಲಿ ಶೋರೂಂ ಪಕ್ಕದಲ್ಲಿ ವಾಸವಿದ್ದ ಕುಟುಂಬವೂ ಇರಲಿಲ್ಲ. ಹಿಂಭಾಗದಲ್ಲಿರುವ ಮನೆಯ ಕುಟುಂಬಸ್ಥರೇ ಪಕ್ಕದ ಮನೆಯಲ್ಲಿ ವಾಸವಿದ್ದರು. ಆದರೆ, ಮೊನ್ನೆ ಎರಡು ದಿನ ಲಾಕ್ಡೌನ್ ವೇಳೆ ಚಿಕ್ಕಮಗಳೂರಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಹಿಂದಿನ ಕಿಟಕಿಯನ್ನು ಮುರಿದು ಕಳ್ಳರು ಹೊಕ್ಕಿದ್ದು ಕಾಕತಾಳೀಯ.
ತಜ್ಞರೇ ಆಗಿದ್ದರು ಐಫೋನ್ ಕಳ್ಳರು
ಶೋರೂಂ ನುಗ್ಗಿರುವ ಕಳ್ಳರು ಸಾಕಷ್ಟು ತಾಂತ್ರಿಕ ಪರಿಣತರೇ ಆಗಿದ್ದರು ಅನ್ನೋದು ಗಮನಾರ್ಹ. ಶೋರೂಂ ಒಳಗೆ ಗ್ಲಾಸ್ ಕಪಾಟಿನಲ್ಲಿ ಮೊಬೈಲ್ ಗಳನ್ನು ಇಡಲಾಗಿತ್ತು. ಗ್ಲಾಸ್ ಕಪಾಟಿನ ಕೀ ಪ್ರತ್ಯೇಕ ಇದ್ದು, ಕೀ ಇಲ್ಲದೆ ಗ್ಲಾಸ್ ಓಪನ್ ಮಾಡಿದ ಕೂಡಲೇ ಸೈರನ್ ಆಗಬಲ್ಲದು. ಅಲ್ಲದೆ, ಟೇಬಲ್ ನಲ್ಲಿದ್ದ ಮೊಬೈಲ್ ಗಳಿಗೆ ಒಂದಕ್ಕೊಂದು ಜಾಯಿಂಟ್ ಕನೆಕ್ಷನ್ ಇದ್ದು, ಸೂಕ್ತ ಕೀ ಇಲ್ಲದೆ ಒಂದನ್ನು ರಿಮೂವ್ ಮಾಡಿದ್ರೂ ಸೈರನ್ ಆಗುವ ಸಿಸ್ಟಂ ಇತ್ತು. ಆದರೆ, ಇಷ್ಟೊಂದು ಪ್ರಭಾವಿ ಸೈರನ್ ಸಿಸ್ಟಂ ಇದ್ದರೂ ಯಾರಿಗೂ ತಿಳಿಯದಂತೆ 70ಕ್ಕೂ ಹೆಚ್ಚು ಮೊಬೈಲ್, ಐಪಾಡ್ ಗಳನ್ನು ಎಗರಿಸಿದ್ದು ಕಳ್ಳರು ತುಂಬ ಚಾಣಾಕ್ಷರಾಗಿದ್ದರು ಮತ್ತು ಅಷ್ಟೇ ಎಕ್ಸ್ ಪರ್ಟ್ ಆಗಿದ್ದರು ಎನ್ನಲಾಗುತ್ತಿದೆ. ಇದಲ್ಲದೆ, ಒಳಭಾಗದಲ್ಲಿ ವಿದ್ಯುತ್ ಕಡಿತಗೊಳಿಸಿಯೇ ಕಳವು ಕೃತ್ಯ ಮಾಡಿದ್ದಾರೆ. ಕೊನೆಗೆ ಒಳಗಿದ್ದ ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ಇವೆಲ್ಲವನ್ನೂ ಸಣ್ಣ ಕಿಟಕಿಯಲ್ಲೇ ಹೊರಗಡೆ ಒಯ್ದಿದ್ದು ಮತ್ತು ಅವರು ಕಟ್ಟಡದ ಮುಂದೆ ಬರದೆ ಜ್ಯೂಸ್ ಜಂಕ್ಷನ್ ವರೆಗೂ ಒಳದಾರಿಯಲ್ಲೇ ಸಾಗಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
2015ರಲ್ಲಿ ಸಿಕ್ಕಿಬಿದ್ದಿದ್ದರು ನೇಪಾಳಿ ಕಳ್ಳರು !
ಕಳೆದ 2015ರ ಆಗಸ್ಟ್ 3ರಂದು ಇದೇ ಮೇಪಲ್ ಶೋರೂಮಿಗೆ ನೇಪಾಳಿ ಕಳ್ಳರು ನುಗ್ಗಿದ್ದರು. 20 ಲಕ್ಷ ಮೌಲ್ಯದ 14 ಮೊಬೈಲ್, ಐಪಾಟ್, ಲ್ಯಾಪ್ಟಾಪ್ ಕಳವಾಗಿದ್ದವು. ಹಿಂದಿನ ಗೋಡೆಯಲ್ಲಿದ್ದ ಎಕ್ಸಾಸ್ಟ್ ಫ್ಯಾನ್ ತೆರವು ಮಾಡಿದ್ದು ಕಂಡುಬಂದಿತ್ತು. ಅದೇ ಜಾಗದಿಂದ ಕಳ್ಳರು ಒಳನುಸುಳಿದ್ದ ಬಗ್ಗೆ ಸಂಶಯಿಸಿದ್ದ ಪೊಲೀಸರು, ಈ ಮಾದರಿಯಲ್ಲಿ ಕೃತ್ಯ ಎಸಗುವ ಅಂತಾರಾಜ್ಯ ಚೋರರ ಕೈವಾಡದ ಬಗ್ಗೆ ಕೆಲವರ ರೇಖಾಚಿತ್ರ ಬಿಡಿಸಿ ತನಿಖೆಗೆ ಮುಂದಾಗಿದ್ದರು. ಆನಂತರ ಸಿಸಿಟಿವಿಗಳನ್ನು ತಡಕಾಡಿದಾಗ, ಆಟೋ ರಿಕ್ಷಾ ಚಾಲಕನಿಂದ ಒಂದು ಸುಳಿವು ಸಿಕ್ಕಿತ್ತು. ಅಂದು ರಾತ್ರಿ ವೇಳೆ ಬಲ್ಮಠ ಹತ್ತಿರದಿಂದ ಸಾಗಿದ್ದ ಆಟೋದಲ್ಲಿ ಒಬ್ಬಾತ ನೇಪಾಳಿ ಕಾವೂರಿಗೆ ತೆರಳಿದ್ದ ಮಾಹಿತಿ ಸಿಕ್ಕಿತ್ತು. ಆಬಳಿಕ ಪೊಲೀಸರು ಕೆಲವು ಸುಳಿವುಗಳನ್ನು ಆಧರಿಸಿ, ಪಡುಬಿದ್ರಿಯಲ್ಲಿ ಗಣೇಶ್ ಸೊರ್ಕೆ ಎಂಬಾತನನ್ನು ಬಂಧಿಸಿದ್ದರು. ಆತನ ಬಳಿಯಿದ್ದ ಮೊಬೈಲ್ಸ್, ಡಿಜಿಟಲ್ ಕ್ಯಾಮರಾ, ಲ್ಯಾಪ್ಟಾಪ್ ಸೇರಿ ಮೂರು ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದರು. ಇನ್ನಿಬ್ಬರು ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ನಂಬಿದ್ದರು.
ಆದರೆ, ಮೇಪಲ್ ಶೋರೂಮಿನಲ್ಲಿ ಆಗಸ್ಟ್ 3ರಂದು ರಾತ್ರಿ ಕಳವು ನಡೆದಿದ್ದರೆ, ಮುನ್ನಾ ದಿನ ಆಗಸ್ಟ್ 2ರಂದು ಬಜ್ಪೆಯಲ್ಲಿ ಸೂಪರ್ ಮಾರ್ಕೆಟ್ ಒಂದರಲ್ಲಿ ಅದೇ ರೀತಿ ಎಕ್ಸಾಸ್ಟ್ ಫ್ಯಾನ್ ಎಬ್ಬಿಸಿ ಕಳವು ನಡೆದಿತ್ತು. ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ, ನೇಪಾಳಿ ಸೆಕ್ಯುರಿಟಿ ಗಾರ್ಡ್ ಬಗ್ಗೆ ಸಂಶಯ ಬಂದು ತನಿಖೆ ನಡೆಸಲಾಗಿತ್ತು. ಕುಳೂರಿನಲ್ಲಿ ನೆಲೆಸಿದ್ದ ನೇಪಾಳಿ ಮೂಲದ ಸೆಕ್ಯುರಿಟಿ ಗಾರ್ಡ್ ಗಳನ್ನು ತನಿಖೆ ನಡೆಸಿದಾಗ ಎರಡೂ ಕಡೆ ಕಳವು ನಡೆಸಿದ್ದು ಒಂದೇ ತಂಡ ಅನ್ನುವುದು ಬೆಳಕಿಗೆ ಬಂದಿತ್ತು. ಎರಡೇ ವಾರದಲ್ಲಿ ನೇಪಾಳಿ ಕಳ್ಳರು ಸಿಕ್ಕಿಬಿದ್ದಿದ್ದರು. ಕದ್ದ ಮಾಲು ಮಾತ್ರ ಬಹುತೇಕ ನೇಪಾಳಕ್ಕೆ ಸಾಗಣೆ ಆಗಿತ್ತು. ಬೇರೆಯವರ ಮೂಲಕ ನೇಪಾಳಕ್ಕೆ ಸಾಗಿಸಿ, ಅಲ್ಲಿ ಅದರ ಸ್ಪೇರ್ ಪಾರ್ಟ್ ಗಳನ್ನು ತೆಗೆದು ಬ್ಲಾಕ್ ಮಾರ್ಕೆಟಲ್ಲಿ ಮಾರಾಟ ಮಾಡುವ ಜಾಲದ ಬಗ್ಗೆ ಕಂಡುಬಂದಿತ್ತು.
ಸಿಸಿಟಿವಿಯಲ್ಲಿ ದಾಖಲಾಗಿದ್ದರೂ ಕಳ್ಳರ ಪತ್ತೆ ಇಲ್ಲ !
ಸರಿಯಾಗಿ ಒಂದು ವರ್ಷದ ಹಿಂದೆ, 2020ರ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ನಲ್ಲಿ ಐಫೋನ್ ಮೊಬೈಲ್ ಶೋರೂಮ್ ನಿಂದ ಲಕ್ಷಾಂತರ ಬೆಲೆಯ ಐಫೋನ್ ಕಳವಾಗಿತ್ತು. ಮಾರ್ಚ್ 11ರಂದು ರಾತ್ರಿ ಶೋರೂಂ ಬಂದ್ ಮಾಡಿ ಅಲ್ಲಿನ ಸಿಬಂದಿ ತೆರಳಿದ್ದರು. ಮರುದಿನ ನೋಡಿದಾಗ, ಕಳವು ಕೃತ್ಯ ಬೆಳಕಿಗೆ ಬಂದಿತ್ತು. 32 ಲಕ್ಷ ಮೌಲ್ಯದ 54 ಐಫೋನ್ ಮತ್ತು ಎರಡು ಲಕ್ಷ ನಗದನ್ನೂ ಕಳ್ಳರು ಕಳವು ಮಾಡಿದ್ದರು. ಕೃತ್ಯ ಎಸಗಿದವರು ಒಳಗಿದ್ದ ಸಿಸಿಟಿವಿ ಡಿವಿಆರ್ ಅನ್ನೂ ಹೊತ್ತೊಯ್ದಿದ್ದರು. ಆನಂತರ ಬೇರೊಂದು ಕಟ್ಟಡದ ಸಿಸಿಟಿವಿಯಲ್ಲಿ ಐವರು ಆಗಂತುಕರು ಬಂದು ಮೊಬೈಲ್ ಶೋರೂಂ ನುಗ್ಗಿದ್ದ ಸಿಸಿಟಿವಿ ಪತ್ತೆಯಾಗಿತ್ತು. ಕೇವಲ ಅರ್ಧ ಗಂಟೆಯಲ್ಲಿ ಕಳವು ಕೃತ್ಯ ನಡೆದುಹೋಗಿತ್ತು. ಒಬ್ಬಾತ ಹೊರಗೆ ಗಾರ್ಡ್ ಆಗಿರುವಂತೆ ನಿಂತುಕೊಂಡಿದ್ದು ಇತರ ನಾಲ್ವರು ಸೇರಿ ಮೊಬೈಲನ್ನು ಕಂಬಳಿಯಲ್ಲಿ ಸುತ್ತಿಕೊಂಡು ತೆರಳಿದ್ದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಆಗಿದ್ದರೂ, ಈವರೆಗೂ ಕಳ್ಳರ ಪತ್ತೆ ಆಗಿಲ್ಲ.
ಕದ್ದ ಮೊಬೈಲ್ ಬಳಸಿದರೆ ಸಿಕ್ಕಿಬೀಳ್ತಾರೆ !
ಕದ್ದುಕೊಂಡು ಹೋದ ಐಫೋನ್ ಗಳೇ ಬಾಕ್ಸ್ ಪೀಸ್ ಗಳೇ ಆಗಿದ್ದರೂ, ಅವೆಲ್ಲದರ ಡಿಜಿಟಲ್ ನಂಬರ್ ಕಂಪನಿ ಬಳಿ ಇರುತ್ತವೆ. ಆ ಮೊಬೈಲ್ ಗಳನ್ನು ಹಾಗೇ ಸೇಲ್ ಮಾಡಿ, ಯಾರಾದ್ರೂ ಬಳಕೆ ಮಾಡಿದ್ರೂ ಅದನ್ನು ಪತ್ತೆ ಮಾಡಲು ಸಾಧ್ಯ ಎನ್ನುತ್ತಾರೆ, ಟೆಕ್ನಿಕಲ್ ತಜ್ಞರು. ಹಾಗಾಗಿ, ಈ ಮೊಬೈಲ್ ಗಳನ್ನು ಹೆಚ್ಚಾಗಿ ಹಾಗೇ ಸೇಲ್ ಮಾಡುವುದಿಲ್ಲ. ಬೆಂಗಳೂರು, ದೆಹಲಿಗಳಲ್ಲಿ ಐಫೋನ್ ಮೊಬೈಲ್ ಸ್ಪೇರ್ ಗಳಿಗೆ ಭಾರೀ ರೇಟ್ ಇದೆ. ಅಷ್ಟೇ ಬೇಡಿಕೆಯೂ ಇದೆ. ದೊಡ್ಡ ಮಾರುಕಟ್ಟೆಗಳಲ್ಲಿ ಇವುಗಳ ಒರಿಜಿನಲ್ ಸ್ಪೇರ್ ಪಾರ್ಟ್ ಬಿಲ್ ಇಲ್ಲದೆ ಸಿಗುತ್ತವೆ. ಹೀಗೆ ಸಿಗುವುದಿದ್ದರೆ, ಅವು ಇಂಥ ಕದ್ದ ಮಾಲುಗಳ ಸ್ಪೇರ್ ಗಳೇ ಆಗಿರುತ್ತವೆ ಎನ್ನುತ್ತಾರೆ, ಮೊಬೈಲ್ ಎಕ್ಸ್ ಪರ್ಟ್.
ಏಪಲ್ ಕಂಪನಿಯ ಐಫೋನ್ ಪಾಲಿಗೆ ಮಂಗಳೂರಿನ ಏಕೈಕ ಡೀಲರ್ ಆಗಿದ್ದರೂ, ಕಳೆದ ಒಂದು ವರ್ಷದಲ್ಲಿ ಲಾಕ್ಡೌನ್, ವ್ಯಾಪಾರ ನಷ್ಟದಿಂದಾಗಿ ಬಲ್ಮಠದ ಮೇಪಲ್ ಶೋರೂಂ ಫುಲ್ ಲಾಸ್ ಆಗಿತ್ತು. ಅದೇ ಕಾರಣಕ್ಕೆ ಸೆಕ್ಯುರಿಟಿ ಗಾರ್ಡನ್ನೂ ಇಟ್ಟುಕೊಂಡಿರಲಿಲ್ಲ. ಕಳೆದ ಬಾರಿಯೂ ಕಳ್ಳರು ನುಗ್ಗಿದ್ದರಿಂದ ಸೆಕ್ಯುರಿಟಿ ಇಟ್ಟಿರಬೇಕಿತ್ತು. ಕೋಟ್ಯಂತರ ಬೆಲೆಯ ಸೊತ್ತು ಇರುವಾಗ ಸೆಕ್ಯುರಿಟಿ ಇಟ್ಟಿಲ್ಲ ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದರು.
ಮತ್ತೆ ಏಪಲ್ ಶೋರೂಂ ನುಗ್ಗಿದ ಕಳ್ಳರು ! 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಐಫೋನ್ ಕಳವು !!
Maple iPhone Mobile showroom robbery in Mangalore for the second time. Burglars run away with 70 lakhs worth of iPhones and CCTV Hard drives. Robbery exhibitions reveal that someone who knows the showroom rightly has committed the crime. In 2015 CCB police had nabbed the watchman of the showroom for planning robbery. Kadri Police are now on high alert to nab the thieves.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm