ಬ್ರೇಕಿಂಗ್ ನ್ಯೂಸ್
30-01-26 09:01 pm Giridhar Shetty, Mangaluru ಕರಾವಳಿ
ಮಂಗಳೂರು, ಜ.30 : ಇಡೀ ಜಗತ್ತಿನಲ್ಲಿ ರಸ್ತೆ ಅಪಘಾತ ಸಾವಿನಲ್ಲಿ ಭಾರತ ನಂಬರ್ ಒಂದನೇ ಸ್ಥಾನದಲ್ಲಿದೆ. ಈ ಮಾತನ್ನು ಸ್ವತಃ ಸಾರಿಗೆ ಸಚಿವ ನಿತಿನ್ ಗಡ್ಕರಿಯವರೇ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. 2020-21ರಲ್ಲಿ ಕೊರೊನಾಕ್ಕಿಂತ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು. ದೇಶದಲ್ಲಿ ರಸ್ತೆಗಳು ಸುಸ್ಥಿತಿಗೆ ಬರುತ್ತಿದ್ದರೂ, ಪ್ರತಿವರ್ಷ ಅತಿ ವೇಗ, ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಷ್ಟೇ ವೇಗದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ.
2024ರಲ್ಲಿ ರಸ್ತೆ ಅಪಘಾತದಿಂದಾಗಿ 1.77 ಲಕ್ಷ ಜನರು ಬಲಿಯಾಗಿದ್ದಾರೆ, ಪ್ರತಿ ದಿನಕ್ಕೆ 485 ಜನರು ಅಪಘಾತದಲ್ಲಿ ಸಾಯುತ್ತಿದ್ದಾರೆ ಎಂದು ಕಳೆದ ಡಿಸೆಂಬರ್ ನಲ್ಲಿ ಸಚಿವ ಗಡ್ಕರಿ ಸಂಸತ್ತಿಗೆ ಮಾಹಿತಿ ನೀಡಿದ್ದರು. 2023ರಲ್ಲಿ 4.80 ಲಕ್ಷ ರಸ್ತೆ ಅಪಘಾತಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು, ಈ ಪೈಕಿ 1,72,890 ಮಂದಿ ಜೀವ ಕಳಕೊಂಡಿದ್ದಾರೆ. ಒಂದೇ ವರ್ಷದಲ್ಲಿ 4,62,285 ಜನರು ಗಂಭೀರ ಗಾಯಗೊಂಡಿದ್ದಾರೆ. ಕೇಂದ್ರ ಸಾರಿಗೆ ಸಚಿವಾಲಯದ ವೆಬ್ ಸೈಟ್ ನಲ್ಲಿ 2018ರ ಬಳಿಕ ಪ್ರತಿ ವರ್ಷ ಅಪಘಾತ ಮತ್ತು ಸಾವಿನ ಪ್ರಕರಣದ ಬಗ್ಗೆ ಅಂಕಿ ಅಂಶಗಳಿವೆ. 2018ರಲ್ಲಿ 1,57,593 ಮಂದಿ ಜೀವ ಕಳಕೊಂಡಿದ್ದರೆ, 2019ರಲ್ಲಿ 1,59,984 ಜನರ ಜೀವ ಹಾನಿಯಾಗಿದೆ. 2020ರಲ್ಲಿ 1,38,383 ಮಂದಿ ಸಾವನ್ನಪ್ಪಿದ್ದರೆ, 2021ರಲ್ಲಿ 1,53,972 ಜನ ಜೀವ ಹೋಗಿದೆ. 2022ರಲ್ಲಿ ರಸ್ತೆ ಅಪಘಾತದಿಂದ ಸಾವಿನ ಸಂಖ್ಯೆ 1,68,491ಕ್ಕೆ ಏರಿಕೆಯಾಗಿತ್ತು. ಸಾವನ್ನಪ್ಪಿದವರಲ್ಲಿ 20-35 ವಯಸ್ಸಿನವರೇ ಹೆಚ್ಚು.

2022ರ ರಸ್ತೆ ಅಪಘಾತದ ಮಾಹಿತಿ ನೋಡಿದರೆ, ಓವರ್ ಸ್ಪೀಡ್ ನಿಂದಾಗಿ 1,19,904 ಮಂದಿ ಜೀವ ಕಳಕೊಂಡಿದ್ದಾರೆ. ಕುಡಿದು ವಾಹನ ಚಲಾಯಿಸಿ 4201 ಮಂದಿ ಸಾವು, ರಾಂಗ್ ಸೈಡ್ ನಿಂದ ವಾಹನ ಚಲಾಯಿಸಿ 9094 ಮಂದಿ ಸಾವನ್ನಪ್ಪಿದ್ದಾರೆ. ಸಿಗ್ನಲ್ ಜಂಪ್ ಮಾಡಿದ್ದರಿಂದ 1462 ಸಾವಾಗಿದ್ದು, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ದರಿಂದ 3395 ಮಂದಿ ಜೀವ ಕಳಕೊಂಡಿದ್ದಾರೆ. ಇತರೇ ಕಾರಣದಿಂದ 30,435 ಮಂದಿ ಸೇರಿ 2022ರ ಒಂದೇ ವರ್ಷದಲ್ಲಿ 1,68,491 ಮಂದಿ ಅಪಘಾತಕ್ಕೀಡಾಗಿ ಜೀವ ಕಳಕೊಂಡಿದ್ದಾರೆ.
ಕೇವಲ ರಸ್ತೆ ಅಪಘಾತದಿಂದಾಗಿಯೇ ಇಷ್ಟೊಂದು ಜನ ಸಾವನ್ನಪ್ಪುತ್ತಿದ್ದರೂ ನಮ್ಮ ಸರ್ಕಾರಗಳು ಇದು ಯಾಕೆ ಆಗುತ್ತಿದೆ ಎನ್ನುವ ಚಿಂತನೆಗೆ ಮುಂದಾಗಿಲ್ಲ. ರಸ್ತೆ ಅಪಘಾತಗಳ ಬಗ್ಗೆ ಕಾಳಜಿ ಹೊಂದಿರುವ ಸಚಿವ ನಿತಿನ್ ಗಡ್ಕರಿಯವರು ಆಗಿಂದಾಗ್ಗೆ ನೀಡುತ್ತಿರುವ ಈ ಬಗ್ಗೆ ಹೇಳಿಕೆಗಳು ಪತ್ರಿಕೆಗಳಲ್ಲಿ ಬರುತ್ತಿವೆ. ಕಳೆದ ಡಿಸೆಂಬರಿನಲ್ಲಿ ಸಂಸತ್ತಿನಲ್ಲಿ ಮಾತನಾಡುತ್ತ 2030ರ ವೇಳೆಗೆ ರಸ್ತೆ ಅಪಘಾತಗಳ ಸಾವನ್ನು ಅರ್ಧಕ್ಕೆ ಇಳಿಸಬೇಕಿದೆ, ಇದಕ್ಕಾಗಿ ಜನರು ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದಷ್ಟೇ ಹೇಳುತ್ತಾರೆ. ಅದು ಬಿಟ್ಟರೆ ಈ ಸಾವಿಗೆ ಯಾರು ಹೊಣೆ, ಇದಕ್ಕೇನು ಕಾರಣ ಎಂಬ ಬಗ್ಗೆ ಚಿಂತನೆ ಮಾಡುವುದಿಲ್ಲ.



‘ಯುದ್ಧ –ಉಗ್ರವಾದಕ್ಕಿಂತ ಹೆಚ್ಚು ಅಪಘಾತಕ್ಕೇ ಬಲಿ’, ‘ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಕ್ಕೆ ಸರಾಸರಿ 148 ಸಾವು’, ‘ಹೆದ್ದಾರಿಯಲ್ಲಿ ಸಾವು ತಪ್ಪಿಸಲು ಹದಿನೈದು ನಿಮಿಷದಲ್ಲಿ ಅಂಬುಲೆನ್ಸ್ ಸ್ಥಳಕ್ಕೆ’, ‘ಓವರ್ ಸ್ಪೀಡ್ ನಿಂದ ಒಂದೇ ವರ್ಷದಲ್ಲಿ ಲಕ್ಷಕ್ಕೂ ಹೆಚ್ಚು ಜನ ಮರಣ’, ‘ವಿದೇಶದ ಸಭೆಗಳಲ್ಲಿ ಭಾರತದ ರಸ್ತೆಗಳ ಬಗ್ಗೆ ಮಾತನಾಡುವುದಕ್ಕಿಂತ ನನ್ನ ಮುಖ ಮರೆಮಾಚಲು ಪ್ರಯತ್ನಿಸುತ್ತೇನೆ-ಗಡ್ಕರಿ’ ಹೀಗೆ ಪತ್ರಿಕೆಗಳಲ್ಲಿ ಹೆದ್ದಾರಿ ಅಪಘಾತಗಳ ಬಗ್ಗೆ ದಿನವೂ ಸುದ್ದಿಯಾಗುತ್ತಿರುತ್ತವೆ. ಪ್ರತಿ ಹೇಳಿಕೆಯಲ್ಲೂ ನಿತಿನ್ ಗಡ್ಕರಿಯವರು ರಸ್ತೆ ಅಪಘಾತಗಳ ಬಗ್ಗೆ ಚಿಂತೆ ಹೊಂದಿರುವುದು, ದಿನವೂ ಅಮಾಯಕರು ಸಾವನ್ನಪ್ಪುತ್ತಿರುವ ಬಗ್ಗೆ ಬೇಸರ ಹೊಂದಿರುವುದನ್ನೂ ತೋರಿಸುತ್ತಿದ್ದಾರೆ.

ಯಾಕಂದ್ರೆ, ಈ ದೇಶದಲ್ಲಿ ನಿತಿನ್ ಗಡ್ಕರಿ ಎನ್ನುವುದಕ್ಕಿಂತ ಅವರನ್ನು ರೋಡ್ ಗಡ್ಕರಿಯೆಂದೇ ಹೆಸರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 1997ರಲ್ಲಿ ಮೊದಲ ಬಾರಿಗೆ ಸಾರಿಗೆ ಸಚಿವನಾಗಿದ್ದಾಗ ಮುಂಬೈ- ಪುಣೆ ಮಧ್ಯೆ 100 ಕಿಮೀ ಹೆದ್ದಾರಿಯನ್ನು ಗಡ್ಕರಿಯವರು ಎಕ್ಸ್ ಪ್ರೆಸ್ ವೇ ಎನ್ನುವ ಹೆಸರಲ್ಲಿ ಚತುಷ್ಪಥ ಮಾಡಿದ್ದರು. ರಾಜ್ಯ ಮತ್ತು ಖಾಸಗಿ ಅನುದಾನದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು ವಾಜಪೇಯಿ ಅವರನ್ನೂ ಆಕರ್ಷಿಸಿತ್ತು. ಇದನ್ನು ನೋಡಿ ದೇಶಾದ್ಯಂತ ಲಕ್ಷಕ್ಕೂ ಹೆಚ್ಚು ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಮಾಡುವಂತೆ ಹೇಳಿದ್ದು ವಾಜಪೇಯಿ ಸರ್ಕಾರ. ಗಡ್ಕರಿಯವರನ್ನೇ ಸಾರಿಗೆ ಸಚಿವರನ್ನಾಗಿಸಿ, ರಸ್ತೆಗಳಂದ್ರೆ ನಮ್ಮ ದೇಶದ ನರನಾಡಿಗಳು, ಎಲ್ಲವನ್ನೂ ಕಾಲಮಿತಿಯಲ್ಲಿ ಚತುಷ್ಪಥ ಮಾಡಿಸಬೇಕು ಎಂದು ಆರ್ಡರ್ ಮಾಡಿದ್ದರು.
ಮುಂಬೈ- ಪುಣೆ ಎಕ್ಸ್ ಪ್ರೆಸ್ ವೇ ಈಗಲೂ ಅದ್ಭುತ ರಸ್ತೆಯಾಗಿಯೇ ಉಳಿದಿದೆ ಯಾಕಂದ್ರೆ, ಅಲ್ಲಿ ಗಡ್ಕರಿ ವಹಿಸಿದ್ದ ಕಾಳಜಿ. ಇತರ ಕಡೆಯೂ ಚತುಷ್ಪಥ ಆಗಿದ್ದರೂ, ಆ ಮಟ್ಟಿಗೆ ಕ್ವಾಲಿಟಿ ಬಂದಿಲ್ಲ. ಆಯಾ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಬಗ್ಗೆ ಕಾಳಜಿ ವಹಿಸುವುದು ಬಿಟ್ಟು ಜೇಬು ತುಂಬಿಸುವುದಕ್ಕೇ ಕಾಳಜಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ -1 ಇರುವ ದೆಹಲಿಯಲ್ಲೂ ಪುಣೆ ಬೆನ್ನಲ್ಲೇ ಚತುಷ್ಪಥ ಹೆದ್ದಾರಿ ಆಗಿತ್ತು. ಆನಂತರದ 20 ವರ್ಷಗಳಲ್ಲಿ ದೇಶಾದ್ಯಂತ ಚತುಷ್ಪಥ, ಷಟ್ಪಥ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಆಗ್ರಾ, ಚೆನ್ನೈ, ಬೆಂಗಳೂರು-ಮೈಸೂರು- ಹುಬ್ಬಳ್ಳಿ ರಸ್ತೆಗಳು ಪಳಪಳ ಅನ್ನುವಂತೆ ಹೊಳೆಯತೊಡಗಿವೆ. ಆದರೆ ರಸ್ತೆ ಸುಗಮಗೊಂಡಷ್ಟು ಅಪಘಾತಗಳೂ ಹೆಚ್ಚುತ್ತಿರುವುದನ್ನು ತಪ್ಪಿಸಲು ಸರ್ಕಾರದಲ್ಲಿ ಐಡಿಯಾಗಳಿಲ್ಲ. ಆ ಬಗ್ಗೆ ಚಿಂತನೆಯನ್ನೂ ಮಾಡಿಲ್ಲ ಎನ್ನುವುದು ವಿಪರ್ಯಾಸ. (ಸರಣಿ ಲೇಖನ-ಭಾಗ 1)
India tops the world in road accident deaths, with 1.77 lakh people killed in 2024 alone—an average of 485 deaths every day. Most victims are aged between 20 and 35. Despite better highways and repeated warnings from Union Transport Minister Nitin Gadkari, overspeeding, reckless driving, and weak enforcement continue to claim lives. The article questions accountability and highlights how road safety reforms have failed to keep pace with infrastructure development.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm