ಬಾಂಬರ್ ಆದಿತ್ಯ ರಾವ್ ಮಂಪರು ಪರೀಕ್ಷೆ 

03-09-20 11:25 am       Bangalore Correspondent   ಕ್ರೈಂ

ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಸಂಚಲನ ಮೂಡಿಸಿದ್ದ ಆರೋಪಿ ಆದಿತ್ಯ ರಾವ್ ನನ್ನು ಇಂದು ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಲಿದ್ದಾರೆ. 

ಮಂಗಳೂರು, ಸೆಪ್ಟೆಂಬರ್ 3: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಸಂಚಲನ ಮೂಡಿಸಿದ್ದ ಆರೋಪಿ ಆದಿತ್ಯ ರಾವ್ ನನ್ನು ಇಂದು ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಲಿದ್ದಾರೆ. 

ಬೆಂಗಳೂರಿನ ಮಡಿವಾಳದಲ್ಲಿರುವ ಫೋರೆನ್ಸಿಕ್ ಸೈನ್ಸ್ ಲ್ಯಾಬ್ ನಲ್ಲಿ ಮಂಪರು ಪರೀಕ್ಷೆ ನಡೆಯಲಿದೆ. ಅರೋಪಿಯ ಮಂಪರು ಪರೀಕ್ಷೆಗೆ ಈಗಾಗಲೇ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.

 

ಕಳೆದ ಜನವರಿ 20 ರಂದು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಬಾಂಬ್ ಪತ್ತೆಯಾಗಿತ್ತು. ಏರ್ಪೋರ್ಟ್ ಹೊರಗಡೆಯ ಪಾರ್ಕಿಂಗ್ ಏರಿಯಾದಲ್ಲಿ ಸಜೀವ ಬಾಂಬ್ ಇರಿಸಿದ್ದ ಆದಿತ್ಯ ರಾವ್, ಬಳಿಕ ಬಾಂಬ್ ಇರುವ ಬಗ್ಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಬಾಂಬ್ ನಲ್ಲಿ ಟೈಮರ್ ಅಳವಡಿಸಿದ್ದ ಕಾರಣ ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಲು ಹರಸಾಹಸ ಪಟ್ಟಿದ್ದರು. ಕೊನೆಗೆ ಕೆಂಜಾರಿನ ಮೈದಾನದ ಮಧ್ಯೆ ಮರಳಿನ ಚೀಲಗಳ ನಡುವೆ ಹೂತಿಟ್ಟು ಬಾಂಬನ್ನು ಸ್ಫೋಟಿಸಲಾಗಿತ್ತು. 

ಪ್ರಕರಣದ ಬಗ್ಗೆ ಬಜ್ಪೆ ಪೊಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ನಡುವೆ, ಹೆಚ್ಚಿನ ವಿಚಾರಣೆ ಅಗತ್ಯ ಕಂಡುಬಂದ ಹಿನ್ನೆಲೆ ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.