ಆರ್ಟಿಐ ಕಾರ್ಯಕರ್ತನ ಕೈ ಕಾಲು ಕಡಿದುಹಾಕಿದ ದುಷ್ಕರ್ಮಿಗಳು ! ನಡುಬೀದಿಯಲ್ಲಿ ಬೆಚ್ಚಿ ಬೀಳಿಸಿದ ಕೃತ್ಯ 

15-07-21 10:59 pm       Headline Karnataka News Network   ಕ್ರೈಂ

ಆರ್ಟಿಐ ಕಾರ್ಯಕರ್ತನನ್ನು ನಡುಬೀದಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಆತನ ಕೈ ಮತ್ತು ಕಾಲನ್ನು ಕಡಿದು ಹಾಕಿ ಸ್ಥಳದಿಂದ ಪರಾರಿಯಾದ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ನಡೆದಿದೆ. 

ರಾಮನಗರ, ಜುಲೈ 15: ಆರ್ಟಿಐ ಕಾರ್ಯಕರ್ತನನ್ನು ನಡುಬೀದಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಆತನ ಕೈ ಮತ್ತು ಕಾಲನ್ನು ಕಡಿದು ಹಾಕಿ ಸ್ಥಳದಿಂದ ಪರಾರಿಯಾದ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆಯಲ್ಲಿ ನಡೆದಿದೆ. 

ಬೆಂಗಳೂರು ನಗರ ಹೊರವಲಯದ ತಾವರೆಕೆರೆ ಬಳಿ ಘಟನೆ ನಡೆದಿದ್ದು ಈ ಜಾಗ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಸೇರುತ್ತದೆ. ಹೀಗೆ ಕೈ, ಕಾಲು ಕತ್ತರಿಸಿ ರಕ್ತದ ಮಡುವಲ್ಲಿ ಬಿದ್ದ ವ್ಯಕ್ತಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಸಾರ್ವಜನಿಕರ ಎದುರಲ್ಲೇ ಘಟನೆ ನಡೆದಿದ್ದು ದುಷ್ಕರ್ಮಿಗಳ ಭಯದಿಂದ ಹತ್ತಿರ ಹೋಗಿರಲಿಲ್ಲ. ಕೆಲಕಾಲ ಹಾಗೆಯೇ ವೆಂಕಟೇಶ್ ರಸ್ತೆಯಲ್ಲಿ ರಕ್ತದ ಮಡುವಲ್ಲಿ ಬಿದ್ದುಕೊಂಡಿದ್ದರು. 

ಬಳಿಕ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.  ತಾವರೆಕೆರೆ ಪೊಲೀಸ್ ಠಾಣೆ ಬಳಿಯೇ ಘಟನೆ ನಡೆದಿದ್ದು ಅಚ್ಚರಿ ಮೂಡಿಸಿದೆ. ಅಪರಿಚಿತರು ಹರಿತ ಆಯುಧಗಳಿಂದ ಕೈ ಮತ್ತು ಕಾಲಿಗೆ ಕಡಿದು ಹಾಕಿದ್ದರು. 

ಆರ್ಟಿಐ ಕಾರ್ಯಕರ್ತರಾಗಿದ್ದ ವೆಂಕಟೇಶ್ ವಿವಿಧ ಇಲಾಖೆಗಳಿಂದ ಆರ್ಟಿಐ ಅಡಿ ಮಾಹಿತಿ ಕೇಳಿ ಅರ್ಜಿ ಹಾಕುತ್ತಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ.‌ ರಾಮನಗರ ಎಸ್ಪಿ ಗಿರೀಶ್, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

In a horrific incident, a group of miscreants severed the leg and hand of an RTI activist in broad daylight on Thursday on the outskirts of Bengaluru and fled from the scene. The gruesome incident took place in front of the public.The RTI activist has been identified as Venkatesh. The incident took place in Tavarekere near Bengaluru, which falls under the neighboring Ramnagar district.