ರಾಜಧಾನಿ ಜುವೆಲ್ಲರಿ ದರೋಡೆ ಕೃತ್ಯದಲ್ಲಿ  ಫರಂಗಿಪೇಟೆ ಗೌಸ್ ಗ್ಯಾಂಗ್ ! ಆರೋಪಿಗಳ ಹಿಂದೆ ಬಿದ್ದ ಪೊಲೀಸರು 

28-07-21 10:28 pm       Mangaluru Correspondent   ಕ್ರೈಂ

ಫರಂಗಿಪೇಟೆಯ ಮೊಹಮ್ಮದ್ ಗೌಸ್ ಮತ್ತು ಸುರತ್ಕಲ್ಲಿನ ಇಮ್ರಾನ್ ಎಂಬವರ ತಂಡ ಸೇರಿ ದರೋಡೆ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಂಗಳೂರು, ಜುಲೈ 28: ಮಂಜೇಶ್ವರದ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯಲ್ಲಿ ದರೋಡೆ ನಡೆಸಿದ ತಂಡದ ಬಗ್ಗೆ ಮಂಗಳೂರು ಪೊಲೀಸರಿಗೆ ಖಚಿತ ಸುಳಿವು ಲಭಿಸಿದೆ. ಫರಂಗಿಪೇಟೆಯ ಮೊಹಮ್ಮದ್ ಗೌಸ್ ಮತ್ತು ಸುರತ್ಕಲ್ಲಿನ ಇಮ್ರಾನ್ ಎಂಬವರ ತಂಡ ಸೇರಿ ದರೋಡೆ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಉಳ್ಳಾಲ ಪೊಲೀಸರು ಸೋಮವಾರ ನಸುಕಿನಲ್ಲಿ ತಲಪಾಡಿಯ ಕೆ.ಸಿ.ರೋಡ್ ಬಳಿ ರಾತ್ರಿ ಗಸ್ತಿನಲ್ಲಿದ್ದಾಗ, ಸಂಶಯದ ಮೇರೆಗೆ ಇನ್ನೋವಾ ಕಾರನ್ನು ತಡೆದಿದ್ದರು. ಆದರೆ, ತಪಾಸಣೆಗೆ ಮುಂದಾಗುವ ವೇಳೆಗೆ ಅದರಲ್ಲಿದ್ದ ಏಳು ಮಂದಿ ಪಿಎಸ್ಐ ಪ್ರದೀಪ್ ಟಿ.ಆರ್. ಸೇರಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಪರಾರಿಯಾಗಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಬೆಳ್ಳಿ ಆಭರಣ, ಮಾರಕಾಸ್ತ್ರಗಳು ಪತ್ತೆಯಾಗಿವೆ. 


ಕಾರಿನಲ್ಲಿ 7.75 ಕೇಜಿ ಬೆಳ್ಳಿಯ ಆಭರಣ, ನಗದು 1.90 ಲಕ್ಷ ರೂಪಾಯಿ, ವಿವಿಧ ರೀತಿಯ ವಿವಿಧ ಬಣ್ಣದ ಹರಳುಗಳು, ವಿವಿಧ ಕಂಪನಿಯ ವಾಚ್ ಗಳು, ಸಿಸಿಟಿವಿಯ ಡಿವಿಆರ್, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್, ಸ್ಪ್ರೇ ಪೈಂಟ್ ಡಬ್ಬಿ, ಇಲೆಕ್ಟ್ರಾನಿಕ್ ತೂಕ ಮಾಪಕ, ಸೈರನ್ ಮೆಶಿನ್, ಸಣ್ಣ ಗ್ಯಾಸ್ ಸಿಲಿಂಡರ್, ನಕಲಿ ನಂಬರ್ ಪ್ಲೇಟ್, ಕಬ್ಬಿಣದ ರಾಡ್ ಗಳು, ಮಚ್ಚು, ಕತ್ತಿ ಪತ್ತೆಯಾಗಿದ್ದು, ಅವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೋವಾ ಕಾರು ಸೇರಿ ಸೊತ್ತಿನ ಒಟ್ಟು ಮೌಲ್ಯ 14.35 ಲಕ್ಷ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ಕಾರಿನಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಫರಂಗಿಪೇಟೆಯ ಮೊಹಮ್ಮದ್ ಗೌಸ್ ಮತ್ತು ಸುರತ್ಕಲ್ ನಿವಾಸಿ ಇಮ್ರಾನ್ ಮತ್ತಿತರರು ಇದ್ದು ಆರೋಪಿಗಳು ಮಂಜೇಶ್ವರದ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯಲ್ಲಿ ರಾತ್ರಿ ವೇಳೆ ದರೋಡೆ ನಡೆಸಿ ಪರಾರಿಯಾಗುತ್ತಿದ್ದರು. ಕಾರಿನಲ್ಲಿ ಮಂಜೇಶ್ವರ ಕಡೆಯಿಂದ ಬರುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದರು. ಪೊಲೀಸರ ಮೇಲೆ ಕೊಲೆಗೆ ಯತ್ನಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರು ಬಲೆಬೀಸಿದ್ದಾರೆ. 

Surathkal and Farangipete gang behind Jewellery Shop robbery of Rajadhani Jewelley in Manjeshwar Kasaragod said Mangalore Police Commissioner Shashi Kumar and DCP Hariram Shankar. a gang made away with ornaments worth Rs 16 lakh from a jewellery store in Kasaragod district’s Hosangadi. The robbery happened at the Rajadhani jewellery store in the wee hours of Monday, July 26. As per reports, some cash and silver ornaments were stolen from the shop.