16ರ ವಿದ್ಯಾರ್ಥಿನಿಗೆ ಮಗು ಕರುಣಿಸಿದ್ದ ಪಾದ್ರಿಗೆ 20 ವರ್ಷ ಸಜೆ ! ಮದುವೆ ಆಗುತ್ತೇನೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

31-07-21 10:31 pm       Headline Karnataka News Network   ಕ್ರೈಂ

ಚರ್ಚ್ ಪಾದ್ರಿಯಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವನ್ನು ಹೆತ್ತಿದ್ದ ಅಪ್ರಾಪ್ತ ಯುವತಿಯ ಪ್ರಕರಣದಲ್ಲಿ ಈಗ ಸಂತ್ರಸ್ತ ಯುವತಿಯೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ.

ತಿರುವನಂತಪುರಂ, ಜುಲೈ 31: ಚರ್ಚ್ ಪಾದ್ರಿಯಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವನ್ನು ಹೆತ್ತಿದ್ದ ಅಪ್ರಾಪ್ತ ಯುವತಿಯ ಪ್ರಕರಣದಲ್ಲಿ ಈಗ ಸಂತ್ರಸ್ತ ಯುವತಿಯೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ. ಆರೋಪಿ ಚರ್ಚ್ ಪಾದ್ರಿಯನ್ನು ತಾನೇ ಮದುವೆಯಾಗುತ್ತೇನೆ, ಅದಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾಳೆ.

ಕೆಥೋಲಿಕ್ ಚರ್ಚ್ ಪಾದ್ರಿಯಾಗಿದ್ದ 53 ವರ್ಷದ ರೋಬಿನ್ ವಡಕ್ಕುಂಚೇರಿ ಆರೋಪಿಯಾಗಿದ್ದು, ಆತನಿಗೆ ಮಲಪ್ಪುರಂ ಕೋರ್ಟ್ 20 ವರ್ಷಗಳ ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಸ್ವತಃ ರಾಬಿನ್ ಕೂಡ ಕೇರಳ ಹೈಕೋರ್ಟಿಗೆ ಇದೇ ರೀತಿಯ ಅರ್ಜಿ ಸಲ್ಲಿಸಿ, ಸಂತ್ರಸ್ತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಹೈಕೋರ್ಟ್ ಅನುಮತಿ ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಸಂತ್ರಸ್ತ ಯುವತಿ ಮೂಲಕ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಸ್ವಇಚ್ಚೆಯಿಂದ ಅರ್ಜಿ ಸಲ್ಲಿಸಿರುವುದಾಗಿ ಕೋರ್ಟಿಗೆ ತಿಳಿಸಿದ್ದಾಳೆ.

16ರ ವಿದ್ಯಾರ್ಥಿನಿಗೆ ಮಗು ಕರುಣಿಸಿದ್ದ ಚರ್ಚ್ ಪಾದ್ರಿ

ಕಣ್ಣೂರಿನ ಚರ್ಚ್ ಒಂದರಲ್ಲಿ ಪಾದ್ರಿಯಾಗಿದ್ದ ರೋಬಿನ್ ವಡಕ್ಕುಂಚೇರಿ, ಅದೇ ಚರ್ಚ್ ಅಧೀನದ ಶಾಲೆಗೆ ಮ್ಯಾನೇಜರ್ ಕೂಡ ಆಗಿದ್ದ. ಶಾಲೆಯಲ್ಲಿ ಮೊದಲ ಪಿಯು ಕಲಿಯುತ್ತಿದ್ದ ಅಪ್ರಾಪ್ತ ಹುಡುಗಿಯ ಮೇಲೆ ಪಾದ್ರಿ ಲೈಂಗಿಕ ಕಿರುಕುಳ ನೀಡಿದ್ದ. ಘಟನೆ ಬಳಿಕ ಚೈಲ್ಡ್ ಲೈನ್ ಸಂಸ್ಥೆಯವರ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ನಡುವೆ, 2017ರ ಫೆ.7ರಂದು ಹುಡುಗಿ ಮಗುವಿಗೆ ಜನ್ಮ ನೀಡಿದ್ದಳು. ಸಂತ್ರಸ್ತ ಯುವತಿಗೆ ಹೆರಿಗೆಯಾದ ಬಳಿಕ ಪಾದ್ರಿಯ ಬಂಧನಕ್ಕೆ ಒತ್ತಡ ಹೆಚ್ಚಿದ್ದರಿಂದ ಪೊಲೀಸರು ಪಾದ್ರಿಯನ್ನು ಫೆ.27ರಂದು ಬಂಧಿಸಿದ್ದರು. ಪಾದ್ರಿ ವಿದೇಶಕ್ಕೆ ಪಲಾಯನಗೈಯಲು ತಯಾರಿ ನಡೆಸಿದ್ದಾಗಲೇ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದಾಗ ಬಂಧಿಸಲಾಗಿತ್ತು.

ಬಳಿಕ ವಿಚಾರಣೆ ನಡೆಸಿದ್ದ ಪೊಲೀಸರು ಆರೋಪಿ ರಾಬಿನ್ ವಡಕ್ಕುಂಚೇರಿ ಸೇರಿದಂತೆ, ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಸಹಕಾರ ನೀಡಿದ್ದಾರೆ ಎನ್ನಲಾದ ನಾಲ್ಕು ಸಿಸ್ಟರ್ ಗಳು, ಇನ್ನೊಬ್ಬ ಪಾದ್ರಿ ಮತ್ತು ಒಬ್ಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದರು. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತುರ್ತು ವಿಚಾರಣೆ ನಡೆಸಿದ ತಲಶ್ಶೇರಿ ಕೋರ್ಟ್, 2019ರ ಫೆ.17ರಂದು ಆರೋಪಿ ರಾಬಿನ್ ವಿರುದ್ಧ 20 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇತರ ಆರೋಪಿಗಳ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರ ಇಲ್ಲದ ಕಾರಣ ಖುಲಾಸೆ ಮಾಡಲಾಗಿತ್ತು.

ಈ ನಡುವೆ, ಗಂಭೀರ ಆರೋಪ ಎದುರಿಸಿದ್ದಲ್ಲದೆ, ಆರೋಪಿ ವಿರುದ್ಧ 20 ವರ್ಷಗಳ ಶಿಕ್ಷೆ ಪ್ರಕಟ ಆಗಿದ್ದರಿಂದ ವ್ಯಾಟಿಕನ್ ಸಿಟಿಯ ಪೋಪ್, ರಾಬಿನ್ ವಡಕ್ಕುಂಚೇರಿಯನ್ನು ಪಾದ್ರಿ ಹುದ್ದೆಯಿಂದ ವಜಾಗೊಳಿಸಿದ್ದರು. ಇವೆಲ್ಲ ಬೆಳವಣಿಗೆ ನಡುವಲ್ಲೇ ಆರೋಪಿ ಪಾದ್ರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಸಂತ್ರಸ್ತ ಯುವತಿಯನ್ನು ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದರು. ಆದರೆ ಕೋರ್ಟ್ ನಿರಾಕರಿಸಿತ್ತು. 

A rape survivor from Kerala on Saturday moved the Supreme Court seeking permission to marry former Catholic priest Robin Vadakkumchery who is the convict in the case. The court will hear the case on Monday.Vadakkumchery was sentenced to 20 years of rigorous imprisonment after a court in February 2019 found him guilty of raping and impregnating a minor. Following this, the Church initiated steps to dismiss him from priesthood and finally defrocked him in 2020.