ಬ್ರೇಕಿಂಗ್ ನ್ಯೂಸ್
04-01-22 09:44 pm HK Desk news ಕ್ರೈಂ
ಮುಂಬೈ, ಜ.4 : ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಹರಾಜಿಗಿಟ್ಟ ಪ್ರಕರಣದಲ್ಲಿ ಮುಂಬೈ ಸೈಬರ್ ಪೊಲೀಸರು ಉತ್ತರಾಖಂಡದಲ್ಲಿ ಪ್ರಮುಖ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ 21 ವರ್ಷದ ವಿಶಾಲ್ ಕುಮಾರ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿ ಮುಂಬೈಗೆ ಒಯ್ದಿದ್ದರು. ಮುಂಬೈನಲ್ಲಿ ಕೋರ್ಟಿಗೆ ಹಾಜರುಪಡಿಸಿ ಜ.10ರ ವರೆಗೆ ಪೊಲೀಸ್ ಕಸ್ಟಡಿ ಪಡೆದಿದ್ದಾರೆ. ಆತನ ಮಾಹಿತಿಯಂತೆ, ಉತ್ತರಾಖಂಡದಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಮಹಿಳೆ ಮತ್ತು ಯುವಕ ಫೇಸ್ಬುಕ್, ಇನ್ ಸ್ಟಾಗ್ರಾಮಿನಲ್ಲಿ ಗೆಳೆಯರಾಗಿದ್ದು ಸಮಾನ ಉದ್ದೇಶದಿಂದ ಸೋಶಿಯಲ್ ಮೀಡಿಯಾದಿಂದ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ತೆಗೆದು ಏಪ್ ಕ್ರಿಯೇಟ್ ಮಾಡಿದ್ದರು. ಗಿಟ್ ಹಬ್ ಅನ್ನುವ ಪ್ಲಾಟ್ ಫಾರಂನಲ್ಲಿ ಬುಲ್ಲಿ ಬಾಯ್ಸ್ ಹೆಸರಲ್ಲಿ ಏಪ್ ಸೃಷ್ಟಿಸಿ ನೂರಕ್ಕೂ ಹೆಚ್ಚು ಮಹಿಳೆಯರ ಫೋಟೋಗಳನ್ನು ಅಪ್ಲೋಡ್ ಮಾಡಿ, ಸಾರ್ವಜನಿಕ ಹರಾಜಿಗೆ ಹಾಕಿದ್ದರು. ಜನವರಿ 1ರಂದು ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಭಾರೀ ಆಕ್ರೋಶ ಕೇಳಿಬಂದಿತ್ತು.
ಬುಲ್ಲಿ ಬಾಯ್ ಪ್ರಕರಣವನ್ನು ದೆಹಲಿ ಪೊಲೀಸರು ಸೈಬರ್ ಸೆಲ್ ಸ್ಪೆಷಲ್ ಯೂನಿಟ್ ವಿಭಾಗಕ್ಕೆ ಹಸ್ತಾಂತರ ಮಾಡಿದ್ದಾರೆ. ಉತ್ತರಾಖಂಡದಲ್ಲಿ ವಶಕ್ಕೆ ಪಡೆದಿರುವ ಮಹಿಳೆಯನ್ನು ಅಲ್ಲಿನ ಕೋರ್ಟಿನಲ್ಲಿ ಹಾಜರು ಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದು ಮುಂಬೈಗೆ ಕರೆತರಲಿದ್ದಾರೆ. ಇದೇ ವೇಳೆ, ಮುಂಬೈ ಪೊಲೀಸರು ವಿಶಾಲ್ ಕುಮಾರ್ ಇದ್ದ ಬೆಂಗಳೂರಿನ ಮನೆಯನ್ನು ಸರ್ಚ್ ಮಾಡಲು ವಾರಂಟ್ ಪಡೆದಿದ್ದಾರೆ.
ಕೃತ್ಯದಲ್ಲಿ ಇವರಿಬ್ಬರೇ ಭಾಗಿಯಾಗಿದ್ದೇ ಇನ್ನೂ ಹಲವರಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇವರ ಪಾತ್ರ ಕಂಡುಬಂದಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಸ್ಲಿಮ್ ಮಹಿಳೆಯರ ಹರಾಜು ಪ್ರಕರಣ ; ಬೆಂಗಳೂರಿನಲ್ಲಿ ಶಂಕಿತ ಆರೋಪಿ ವಶಕ್ಕೆ
ಮುಸ್ಲಿಂ ಮಹಿಳೆಯರ ಹರಾಜು ; ಬುಲ್ಲಿ ಬಾಯ್ ಬಗ್ಗೆ ಟ್ವಿಟರ್ ಬಳಿ ಮಾಹಿತಿ ಕೇಳಿದ ದೆಹಲಿ ಪೊಲೀಸರು
ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಸಾರ್ವಜನಿಕ ಹರಾಜಿಗಿಟ್ಟ GitHub ; ದೆಹಲಿಯಲ್ಲಿ ಕಿಡಿ ಎಬ್ಬಿಸಿದ ಸೋಶಿಯಲ್ ಮೀಡಿಯಾ !
A woman has been detained from Uttarakhand by the Mumbai Police in connection with the 'Bulli Bai' controversy. The Mumbai Police has detained a woman, the main accused in the 'Bulli Bai' case -- in which photos of Muslim women were uploaded on an app for 'auction', from Uttarakhand. The woman is being brought to Mumbai for investigation.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm