ಬ್ರೇಕಿಂಗ್ ನ್ಯೂಸ್
02-02-26 04:06 pm HK News Desk ಕರ್ನಾಟಕ
ಕಾರವಾರ, ಫೆ.02 : ಮೂರು ದಶಕಗಳ ಹಿಂದೆ ಕರಾವಳಿ ಭಾಗವನ್ನ ಬೆಚ್ಚಿ ಬೀಳಿಸಿದ್ದ ಎಂಡೋಸಲ್ಫಾನ್ ಎಂಬ ಭಯಾನಕ ಕ್ರಿಮಿನಾಶಕದ ಪರಿಣಾಮಗಳು ಮತ್ತೆ ಕಾಣಿಸಿಕೊಂಡಿದ್ದು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಆರೋಗ್ಯ ಇಲಾಖೆ ನಡೆಸಿದ ಸರ್ವೆಯಲ್ಲಿ 543 ಹೊಸ ಎಂಡೋಸಲ್ಫಾನ್ ಬಾಧಿತರನ್ನು ಗುರುತಿಸಲಾಗಿದ್ದು ಇದು ಅಲ್ಲಿನ ಜನರಿಗೆ ಮತ್ತೆ ತಲೆ ನೋವು ತರಿಸಿದೆ.
ಭಟ್ಕಳ, ಶಿರಸಿ–ಸಿದ್ದಾಪುರ, ಶಿರಾಲಿ, ಕುಮಟಾ, ಹೊನ್ನಾವರ ಹಾಗೂ ಅಂಕೋಲಾ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ತಜ್ಞ ವೈದ್ಯರ ಪರೀಕ್ಷೆಯ ಬಳಿಕ ಈ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 543 ಗುರುತಿಸಲಾದ ಪ್ರಕರಣಗಳಲ್ಲಿ 228 ಮಂದಿ 15 ವರ್ಷದೊಳಗಿನ ಮಕ್ಕಳು ಇರುವುದೇ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಎಂಡೋಸಲ್ಫಾನ್ ಪರಿಣಾಮ ಎರಡನೇ ಪೀಳಿಗೆಯ ವರೆಗೂ ತಲುಪಿರುವ ಸಾಧ್ಯತೆ ಇದೆ ಎಂಬ ಅನುಮಾನ ಶುರುವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಕನ್ನಡ ಜಿಲ್ಲಾ ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಶಂಕರ್ ರಾವ್, “ಎಂಡೋ ಪೀಡಿತರೆಂದು ಒಟ್ಟು 543 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದ್ದು ಇವರಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 10 ಮಂದಿ, 25 ರಿಂದ 60 ವರ್ಷದೊಳಗಿನವರು 118 ಮಂದಿ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರು 415 ಮಂದಿ ಇದ್ದಾರೆ” ಎಂದು ತಿಳಿಸಿದ್ದಾರೆ.
15 ವರ್ಷದೊಳಗಿನ ಮಕ್ಕಳಲ್ಲೂ ಎಂಡೊಸಲ್ಫಾನ್ ಪರಿಣಾಮ ಪತ್ತೆಯಾಗಿರುವುದು ಗಂಭೀರ ವಿಚಾರವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೂರು ದಶಕಗಳ ಹಿಂದೆ ಗೇರು ತೋಟಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಸಿಂಪಡಿಸಿದ್ದ ಎಂಡೋಸಲ್ಫಾನ್ ಕ್ರಿಮಿನಾಶಕ, ಸಾವಿರಾರು ಮಕ್ಕಳನ್ನು ಅಂಗವೈಕಲ್ಯಕ್ಕೆ ತಳ್ಳಿತ್ತು. ವಿಷಕಾರಿ ರಾಸಾಯನಿಕವು ಕರಾವಳಿ ಭಾಗದ ಅನೇಕ ಕುಟುಂಬಗಳ ಜೀವನವನ್ನೇ ನಾಶ ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಕೋಡ್ ವೇಸ್ ಸಂಸ್ಥೆಯ ನಿರ್ದೇಶಕ ವೆಂಕಟೇಶ್ ನಾಯ್ಕ್, “ಕಳೆದ 10–15 ವರ್ಷಗಳಿಂದ ಸಮಗ್ರ ಮರು ಸಮೀಕ್ಷೆ ನಡೆದಿಲ್ಲ. ನಿಜವಾದ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಮರು ಸಮೀಕ್ಷೆ ಅಗತ್ಯ. ಆರೋಗ್ಯ ಇಲಾಖೆ ಗುರುತಿಸಿರುವ 543 ಹೊಸ ಬಾಧಿತರಲ್ಲಿ 228 ಮಂದಿ 18 ವರ್ಷದೊಳಗಿನ ಮಕ್ಕಳು ಇರುವುದೇ ಗಂಭೀರ ಆತಂಕಕ್ಕೆ ಕಾರಣ” ಎಂದು ಹೇಳಿದ್ದಾರೆ.
Three decades after the endosulfan crisis shook coastal Karnataka, its impact appears to persist. A recent health department survey in Uttara Kannada district has identified 543 new affected individuals in the past six months.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm